ರಿತನ್ಯ ಎಸ್. ಆಚಾರ್ಯ “ಸೂಪರ್ ಟ್ಯಾಲೆಂಟೆಡ್ ಕಿಡ್” ಪುರಸ್ಕಾರ

ಉಡುಪಿ: ಉಡುಪಿ ಜಿಲ್ಲೆಯ ಕಮಲಶಿಲೆ ನಿವಾಸಿ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಯ ಮಗಳು ರಿತನ್ಯ ಎಸ್. ಆಚಾರ್ಯ (1 ವರ್ಷ 4 ತಿಂಗಳು) ತನ್ನ ಅಪರೂಪದ ಪ್ರತಿಭೆಯಿಂದ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “ಸೂಪರ್ ಟ್ಯಾಲೆಂಟೆಡ್ ಕಿಡ್” ಎಂಬ ಬಿರುದನ್ನು ಪಡೆದು “ಒನ್ ಇನ್ ಎ ಮಿಲಿಯನ್” ಗೌರವವನ್ನು ಪಡೆದಿದ್ದಾಳೆ. ರಿತನ್ಯ 21 ಪಕ್ಷಿಗಳು, 28 ಪ್ರಾಣಿಗಳು, 15 ದೇಹಭಾಗಗಳು, 20 ಹಣ್ಣುಗಳು, 10 ಜಲಚರ ಪ್ರಾಣಿಗಳು, 6 ಕೀಟಗಳು, 23 ತರಕಾರಿಗಳು, 65 […]

ಉಡುಪಿಯಲ್ಲಿ ಹೆಬ್ಬಾವು ಹಿಡಿದ ಅಷ್ಟಮಿ ಹುಲಿ!

ಉಡುಪಿ: ಅಷ್ಟಮಿಯ ಪ್ರಯುಕ್ತ ಹುಲಿವೇಷ ಹಾಕಿ ಕುಣಿಯುತ್ತಿದ್ದ ಅಕ್ಷಯ್ ಶೇಟ್ ಗುಂಡಿಬೈಲ್ ಅವರಿಗೆ ಅಚ್ಚರಿಯ ಘಟನೆ ಎದುರಾಯಿತು. ಹುಲಿ ಕುಣಿಯುತ್ತಿದ್ದ ಮಧ್ಯದಲ್ಲೇ ಅವರಿಗೆ ಹಾವು ಬಂದಿರುವ ಬಗ್ಗೆ ತುರ್ತು ಕರೆ ಬಂದಿತ್ತು. ವೃತ್ತಿಯಲ್ಲಿ ಐಟಿ ಪ್ರೊಫೆಷನಲ್ ಆಗಿದ್ದರೂ, ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಬಿಡುವಲ್ಲಿ ಪರಿಣತಿ ಹೊಂದಿರುವ ಅಕ್ಷಯ್ ಶೇಟ್ ಅವರು ತಮ್ಮ ಜನಪದ ಹುಲಿ ವೇಷ ಬದಲಾಯಿಸದೆ ನೇರವಾಗಿ ಸ್ಥಳಕ್ಕೇ ಧಾವಿಸಿದರು. ಕೆಲವೇ ಕ್ಷಣಗಳಲ್ಲಿ ಹಾವನ್ನು ಹಿಡಿದು ಸುರಕ್ಷಿತವಾಗಿ ಪ್ರಕೃತಿಗೆ ಬಿಟ್ಟರು.ಜನಪದ ಕಲೆ, ವೃತ್ತಿಜೀವನ ಹಾಗೂ ಸಾಹಸ—ಮೂರನ್ನೂ […]

ಉಡುಪಿ: ವಿಟ್ಲಪಿಂಡಿ ಉತ್ಸವದಲ್ಲಿ ಆರ್‌ಸಿಬಿ ಸಂಭ್ರಮಾಚರಣೆ; ಕೊಹ್ಲಿ- ಗೇಲ್ ಕಮಾಲ್

ಉಡುಪಿ: ಉಡುಪಿ ಕೃಷ್ಣಮಠದ ರಥಬೀದಿಯಲ್ಲಿ ನಡೆದ ವೈಭವದ ವಿಟ್ಲಪಿಂಡಿ ಉತ್ಸವದಲ್ಲಿ ವಿವಿಧ ವೇಷಧಾರಿಗಳ ನಡುವೆ ಆರ್ ಸಿಬಿ ಸಂಭ್ರಮಾಚರಣೆಯೂ ನಡೆಯಿತು. ವಿರಾಟ್ ಕೊಹ್ಲಿ, ಕ್ರಿಸ್‌ ಗೇಲ್, ರೋಮರಿಯೋ ಶೆಫರ್ಡ್, ಡ್ಯಾನಿಷ್‌ ಶೇಟ್ ವೇಷಧಾರಿಗಳು ಟ್ರೋಫಿ ಹಿಡಿದು ಜನರತ್ತ ಕೈ ಬೀಸಿ ಆರ್ ಸಿಬಿ ವಿಜಯೋತ್ಸವ ನಡೆಸಿದರು. ಸಂಪ್ರದಾಯಬದ್ಧ ಹುಲಿ ವೇಷ, ಕಪ್ಪೆ ವೇಷದ ಜೊತೆಗೆ ಈ ಬಾರಿ ಕ್ರಿಕೆಟ್ ಅಭಿಮಾನಿಗಳ ಸೃಜನಶೀಲತೆಯೂ ಮಿಂಚಿತು. ಆರ್‌ಸಿಬಿ ಜರ್ಸಿ, ಬ್ಯಾಟ್, ಬಾಲ್ ಹಿಡಿದಂತೆ ಹಾಗೂ ಕಪ್ ಪ್ರದರ್ಶಿಸಿದ ವೇಷಧಾರಿಗಳು ಪ್ರೇಕ್ಷಕರ […]

ಎಂ.ಸಿ.ಸಿ. ಬ್ಯಾಂಕಿನ 12ನೇ ಎಟಿಎಂ ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟನೆ

ಮಂಗಳೂರು: ಎಂಸಿಸಿ ಬ್ಯಾಂಕ್, ಮಂಗಳೂರು ತನ್ನ 12 ನೇ ಎಟಿಎಂ ಅನ್ನು ಸೆಪ್ಟೆಂಬರ್ 13ರಂದು ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟಿಸಿತು. ಈ ಎಟಿಎಂ ಅನ್ನು ಎಂಆರ್‌ಪಿಎಲ್‌ನ ಕಾರ್ಪೊರೇಟ್ ಬ್ರ‍್ಯಾಂಡಿಂಗ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ಸ್ನ ಚೀಫ್ ಜನರಲ್ ಮ್ಯಾನೇಜರ್ ಡಾ| ರುಡಾಲ್ಫ್ ಜೋಯರ್ ನೊರೊನ್ಹಾ ಅವರು ಉದ್ಘಾಟಿಸಿದರು. ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್ನ ಧರ್ಮಗುರು ರೆವರೆಂಡ್ ಫಾದರ್ ಜೋಕಿಮ್ ಫೆರ್ನಾಂಡಿಸ್ ಅವರು ಎಟಿಎಂ ಅನ್ನು ಆಶೀರ್ವದಿಸಿದರು. ಹೊಸದಾಗಿ ಉದ್ಘಾಟನೆಗೊಂಡ ಎಟಿಎಂನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ಬಳ್ಕುಂಜೆಯ ಸೇಂಟ್ ಪೌಲ್ಸ್ ಚರ್ಚ್ನ […]

AI ಫೋಟೋ ಟ್ರೆಂಡ್ ಆಕರ್ಷಣೆಗೆ ಬಿದ್ದರೆ ಖಾತೆಯಿಂದ ಹಣ ಗೋತಾ? : AI ಪ್ರಿಯರೇ ಹುಷಾರು!

ಇದು AI ಯುಗ, ಆದರೆ ಆ AI ಯಿಂದಲೇ ನಾವು ಪಡೆದುಕೊಂಡಷ್ಟು ಕೆಲವೊಂದನ್ನು ಕಳೆದುಕೊಳ್ಳುತ್ತಲೂ ಇದ್ದೇವೆ. AI ನಿಂದಲೇ  ಸೈಬರ್ ಅಪರಾಧಗಳೂ ಏರಿಕೆಯಾಗುತ್ತಿವೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರೇ ಹೆಚ್ಚು ತೊಂದರೆಗೊಳಗಾಗುತ್ತಿದ್ದಾರೆ. ಇತ್ತೀಚೆಗೆ ಟ್ರೆಂಡಿಂಗ್ AI ಆ್ಯಪ್ ‘ನ್ಯಾನೋ ಬನಾನಾ’ಗೆ ತಮ್ಮ ಫೋಟೋ ಅಪ್‌ಲೋಡ್ ಮಾಡಿದವರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ. ಕೆಲವರಿಗಂತೂ ಖಾತೆಯಿಂದ  70 ಸಾವಿರ ರೂಪಾಯಿಗಳು ಮಾಯವಾಗಿವೆ. ಈ ಘಟನೆಯು AI ಆ್ಯಪ್‌ಗಳ ಬಳಕೆಯಲ್ಲಿ ಜಾಗರೂಕತೆಯ ಅಗತ್ಯವನ್ನು ಒತ್ತಿ ಹೇಳುತ್ತದೆ. ವೇಮುಲವಾಡ ಜಿಲ್ಲೆಯಲ್ಲಿಇತ್ತೀಚೆಗೆ […]