ಪೆರ್ಡೂರು: ಸಾರ್ವಜನಿಕ ಸ್ಥಳದಲ್ಲಿ ಗಲಾಟೆ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಪೆರ್ಡೂರು ಸೆ.16: ಪೆರ್ಡೂರು ಗ್ರಾಮದ ಪಕ್ಕಾಲು ಎಂಬಲ್ಲಿ ಸೆ.15ರಂದು ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ನಾಲ್ವರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆರ್ಡೂರು ಕೆನಟ್ಟಿಬೈಲುವಿನ ಕುಶಾಲ್ ನಾಯ್ಕ್(54), ಕಟಪಾಡಿಯ ಮಹಾನ್ ರಾವ್(31), ಪೆರ್ಡೂರು ಪಕ್ಕಾಲಿನ ಯುವರಾಜ್(35), ಪೆರ್ಡೂರು ರಥಬೀದಿಯ ಅಭಿಲಾಷ್(35) ಎಂಬವರು ಸಾರ್ವಜನಿಕ ಸ್ಥಳದಲ್ಲಿ ಕೈ ಕೈ ಮಿಲಾಯಿಸಿ ಅವಾಚ್ಯ ಶಬ್ಧಗಳಿಂದ ಬೈದು ಗಲಾಟೆ ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿರುವುದಾಗಿ ದೂರಲಾಗಿದೆ.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ವಾರ್ಷಿಕ ಮಹಾಸಭೆ

ಉಡುಪಿ: ಉಡುಪಿ ಜಿಲ್ಲಾ ಸಹಕಾರ ಯೂನಿಯನ್ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಅಜ್ಜರಕಾಡಿನ ಪುರಭವನದಲ್ಲಿ ಮಂಗಳವಾರ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ತೊಂದರೆ ಎದುರಾದರೆ ಅದನ್ನು ಜನಪ್ರತಿನಿಧಿಗಳ ಮೂಲಕ ಸರಿಪಡಿಸಲಾಗುವುದು. ಇದಕ್ಕೆ ಯಾವುದೇ ಸ್ಪಂದನೆ ದೊರೆಯದಿದ್ದರೆ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮಾಡಲಾಗುವುದು. ಜಿಲ್ಲೆಯಲ್ಲಿ 2.60 ಲಕ್ಷ ರೂ. ಶಿಕ್ಷಣ ನಿಧಿಯನ್ನು ಮಹಾಮಂಡಳಕ್ಕೆ ನೀಡಲಾಗಿದೆ ಎಂದರು. ಸಹಕಾರಿ ಯೂನಿಯನ್ ನಿರ್ದೇಶಕರು, ಶಾಸಕ […]

ರಾಜಸ್ಥಾನ: ಮುಸ್ಲಿಂ ಯುವಕನಿಂದ ಹಿಂದೂ ಮಹಿಳೆಯ ಅಂತ್ಯಕ್ರಿಯೆ:ಮಗನಂತೆ ಕ್ರಮಬದ್ದವಾಗಿ ಅಂತ್ಯಸಂಸ್ಕಾರ!

ಜೈಪುರ: ಕೋಮು ಸಾಮರಸ್ಯ ಮತ್ತು ಮಾನವೀಯತೆಗೆ ಉದಾಹರಣೆಯಾಗಿ ಮುಸ್ಲಿಂ ಯುವಕನೊಬ್ಬ ಮಗನಂತೆ ಹಿಂದೂ ಮಹಿಳೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ. ನಗರದ ಜಂಗಿ ಚೌಕ್‌ನಲ್ಲಿ 67 ವರ್ಷದ ಶಾಂತಿ ದೇವಿ ನಿಧನರಾಗಿದ್ದರು. ಅವರ ಕುಟುಂಬದಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ಮೂವತ್ತು ವರ್ಷದ ಯುವಕ ಅಸ್ಗರ್ ಅಲಿ ಮಗನಂತೆ ಹಿಂದೂ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಿದರು. 2018 ರಲ್ಲಿ ತನ್ನ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಕಳೆದುಕೊಂಡ ನಂತರ ಶಾಂತಿ ದೇವಿ ಒಂಟಿಯಾಗಿ ವಾಸಿಸುತ್ತಿದ್ದರು. […]

“ಮಾರ್ಕ್” ಸಿನಿಮಾ ಕುರಿತು ಹೊರಬಿತ್ತು ಒಂದು ಬಿಗ್ ಅಪ್ಡೇಟ್: ಕಿಚ್ಚ ಹೇಳಿದ್ದೇನು?

ಬೆಂಗಳೂರು; ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ತನ್ನ ಅಭಿಮಾನಿಗಳಿಗೆ ಬಿಗ್​ ಅಪ್​ಡೇಟ್​ ನೀಡಿದ್ದಾರೆ. ತನ್ನ ಹುಟ್ಟುಹಬ್ಬದ ದಿನ ಸಿನಿಮಾ ಪ್ರೇಕ್ಷಕರಿಗೆ ಮಾರ್ಕ್​ ಚಿತ್ರದ ಟೀಸರ್​ ಬಿಡುಗಡೆ ಮಾಡಿದ್ದ ಕಿಚ್ಚ ಸುದೀಪ್​, ಇದೀಗ ಸಿನಿಮಾ ಬಗ್ಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಸಿನಿಮಾ ಇನ್ನೂ ಶೂಟಿಂಗ್​ ಹಂತದಲ್ಲಿದೆ. ಆದರೆ ಚಿತ್ರದ ಲಿರಿಕಲ್ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಕಿಚ್ಚ ಮಾಹಿತಿ ನೀಡಿದ್ದಾರೆ. ಕಿಚ್ಚ ಹೇಳಿದ್ದೇನು.?ಲಿರಿಕಲ್ ಹಾಡಿನ ವಿಡಿಯೋ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಜನೀಶ್‌ ಅವರ ಅದ್ಭುತವಾದ ಸ್ಟ್ಯಾಂಡ್ ಔಟ್ ಸಂಯೋಜನೆ ಇದೆ. […]

ರಾಜ್ಯದಲ್ಲಿ ಜಪಾನ್ ಕಂಪೆನಿಗಳಿಂದ 4 ಸಾವಿರ ಕೋಟಿ ರೂ. ಬಂಡವಾಳ‌ ಹೂಡಿಕೆ ಅಂತಿಮ: ಸಚಿವ ಎಂ.ಬಿ.ಪಾಟೀಲ

ಬೆಂಗಳೂರು: ‘ಕಳೆದ ವಾರ ಕೈಗೊಂಡ ಜಪಾನ್‌ ಭೇಟಿಯ ಪರಿಣಾಮ, ಆ ದೇಶದ ವಿವಿಧ ಉದ್ಯಮಗಳು ರಾಜ್ಯದಲ್ಲಿ ₹ 4 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡುವುದು ಖಾತ್ರಿಯಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು. ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಹೂಡಿಕೆ ಆಕರ್ಷಿಸುವ ದೃಷ್ಟಿಯಿಂದ ಜಪಾನ್‌ಗೆ ಎರಡನೇ ಬಾರಿಗೆ ಭೇಟಿ ನೀಡಲಾಗಿತ್ತು. ಜಪಾನಿನ ಉದ್ಯಮಗಳ ಪ್ರಮುಖರು ಸಾಂಪ್ರದಾಯಿಕ ಆಲೋಚನೆ ಇರುವವರು. ಅವರು ಯೋಚಿಸಿ ನಿರ್ಧಾರಕ್ಕೆ ಬರುತ್ತಾರೆ. ದೇಶದಲ್ಲಿರುವ ಜಪಾನ್‌ನ ಉದ್ದಿಮೆಗಳಲ್ಲಿ ಶೇಕಡ 50ರಷ್ಟು ಕಂಪನಿಗಳು […]