ಪಾಕಿಸ್ತಾನವನ್ನು ಬಗ್ಗುಪಡಿದ ಭಾರತ: ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಸೇನಾಪಡೆಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗುಪಡಿದ ಭಾರತ ಆಪರೇಷನ್ ಸಿಂಧೂರ್ ಬಳಿಕ ಮತ್ತೊಂದು ಸೋಲಿನ ರುಚಿ ತೋರಿಸಿದೆ. ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ‘ಆಪರೇಷನ್ ಸಿಂಧೂರ’ ಹಿನ್ನೆಲೆಯಲ್ಲಿ ಪಂದ್ಯ ಬಹಿಷ್ಕರಿಸಬೇಕೆಂಬ ಒತ್ತಡದ ನಡುವೆ ನಡೆದ ಪಂದ್ಯದಲ್ಲಿ ಭಾರತ ಕ್ರಿಕೆಟ್ ಮೂಲಕವೂ ಪಾಕಿಸ್ತಾನಕ್ಕೆ ಮತ್ತೊಂದು ಪೆಟ್ಟು ನೀಡಿದೆ. ಟಾಸ್ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಹಸ್ತಲಾಘವ ಮಾಡದ ಸೂರ್ಯ ಕುಮಾರ್ […]
ಒಂದೇ ಹಾಡಿನಿಂದ ಫೇಮಸ್’ಆದ ಯುವತಿ! ಇನ್’ಸ್ಟಾದಲ್ಲಿ ಫಾಲೋವರ್ಸ್ ಗಳ ಸುರಿಮಳೆ..

ಬೆಂಗಳೂರು: ಸೋಶಿಯಲ್ ಮೀಡಿಯಾವೇ ಕೆಲವರನ್ನು ರಾತ್ರೋರಾತ್ರಿ ಸ್ಟಾರ್‌ಗಳನ್ನಾಗಿ ಮಾಡಿಬಿಡುತ್ತದೆ. ಕೆಲವರು ಒಂದೇ ಒಂದು ವೀಡಿಯೋದಿಂದಲೇ ಪಾಪ್ಯುಲರ್ ಆಗಿಬಿಡುತ್ತಾರೆ. ಇದಕ್ಕೆ ʼಹೂವಿನ ಬಾಣದಂತೆʼ ಹಾಡಿದ ಹುಡುಗಿಯೇ ಸಾಕ್ಷಿ. ಈ ಹಾಡನ್ನು ತನ್ನದೇ ಧಾಟಿಯಲ್ಲಿ ಹಾಡಿದ ಹುಡುಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾಳೆ. ಕೆಲವೇ ದಿನಗಳಲ್ಲಿ ಈಕೆಯ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 150ರಿಂದ 40000ಕ್ಕೆ ಜಿಗಿದಿದೆ. ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲರ ಬಾಯಲ್ಲಿ ‘ಹೂವಿನ ಬಾಣದಂತೆ’ ಹಾಡು ಕೇಳಿಬರುತ್ತಿದೆ. ‘ಬಿರುಗಾಳಿ’ ಚಿತ್ರದ ಈ […]
ದೇಶದ ಕನಸು ಕಟ್ಟಿದ ಇಂಜಿನಿಯರ್ಸ್ ಗಳನ್ನು ನೆನಪಿಸುವ ದಿನ :ಇಂಜಿನಿಯರ್ಸ್ ಡೇ ವಿಶೇಷ ಬರಹ

ದೇಶದ ಪ್ರಗತಿ, ಅಭಿವೃದ್ಧಿ ಹಾಗೂ ಆರ್ಥಿಕ ಸದೃಢತೆಗೆ ಇಂಜಿನಿಯರ್ಗಳ ಪಾತ್ರ ಅತ್ಯಂತ ಮಹತ್ವದ್ದು. ಇಂಜಿನಿಯರಿಂಗ್ ಎಂದರೆ ಪರಿಶ್ರಮ, ಕ್ರಿಯಾಶೀಲತೆ ಮತ್ತು ವಿಜ್ಞಾನವನ್ನು ಸಮರ್ಥವಾಗಿ ಬಳಸಿ ಸಮಾಜಕ್ಕೆ ಉಪಯುಕ್ತ ಪರಿಹಾರಗಳನ್ನು ನೀಡುವುದು. ಇಂಜಿನಿಯರ್ಗಳ ಸೇವೆಯನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ಸ್ ಡೇ ಅನ್ನು ಆಚರಿಸಲಾಗುತ್ತದೆ. ಈ ದಿನವನ್ನು ಭಾರತದ ಮಹಾನ್ ಇಂಜಿನಿಯರ್ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. 1861ರ ಸೆಪ್ಟೆಂಬರ್ 15ರಂದು ಜನಿಸಿದ ಅವರು ಜೀವನದೊಳಗೆ ಅನೇಕ ಸಾಧನೆಗಳನ್ನು ಮಾಡಿದ್ದಾರೆ. […]
ಉಡುಪಿ:ಥಾಮಸ್ ಕುಕ್ ನಲ್ಲಿ ಬ್ರಾಂಚ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ

ಉಡುಪಿ:ಥಾಮಸ್ ಕುಕ್ ನಲ್ಲಿ ಬ್ರಾಂಚ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ನಡೆಯಲಿದೆ. Role: Sales & Operationsಪ್ರಯಾಣ ಉದ್ಯಮದಲ್ಲಿ ಕನಿಷ್ಠ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಇಮೇಲ್ ಐಡಿ: [email protected]ಮೊಬೈಲ್ ಸಂಖ್ಯೆ – 9880032035
SBI’ನ ವಿವಿಧ ಶಾಖೆಗಳಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವ ವಿವರ ಹೀಗಿವೆ!

ದೇಶಾದ್ಯಂತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಶಾಖೆಗಳಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 122 ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 11 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳ ವಿವರಗಳು ಇಲ್ಲಿವೆ: ಶೈಕ್ಷಣಿಕ ಅರ್ಹತೆ:ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪದವಿ ಅಥವಾ ಹುದ್ದೆಗೆ ಅನುಗುಣವಾಗಿ MBA, PGDBA, PGDBM, MMS, CA, CFA, ICWA ಅಥವಾ BE/BTech ಪದವಿ ಪಡೆದಿರಬೇಕು. ಅಲ್ಲದೆ, ಸಂಬಂಧಿತ ಕೆಲಸದಲ್ಲಿ ಅನುಭವವಿರಬೇಕು. ಅಭ್ಯರ್ಥಿಗಳ ವಯೋಮಿತಿ […]