ಉಡುಪಿಯ ಪ್ರಸಿದ್ಧ ಖಾಸಗಿ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ: ಉಡುಪಿಯ ಪ್ರಸಿದ್ಧ ಖಾಸಗಿ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: ಊಟ, ವಸತಿ ಉಚಿತವಿದ್ದು,ಆಸಕ್ತರು ಕೂಡಲೇ ಸಂಪರ್ಕಿಸಿ. 📞9606968198, 7019891796
ರಾಜ್ಯದ ವಿದ್ಯಾರ್ಥಿಗಳ ಏಳಿಗೆಗೆ ಕೌಶಲ್ಯ ತರಬೇತಿ: ಪ್ರೌಢಶಾಲೆಯಿಂದಲೇ ಕೌಶಲ್ಯ ಅಭಿಯಾನ, ಈ ವರ್ಷವೇ ಜಾರಿ!

ಬೆಂಗಳೂರು: ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ‘ಶಾಲೆಯಲ್ಲೇ ಕೌಶಲ’ ಎಂಬ ಕಾರ್ಯಕ್ರಮ ರೂಪಿಸಿದೆ.ಮೊದಲ ಹಂತದಲ್ಲಿ 200 ಸರ್ಕಾರಿ ಪ್ರೌಢಶಾಲೆಗಳು ಹಾಗೂ 50 ಪದವಿ ಪೂರ್ವ ಕಾಲೇಜುಗಳನ್ನು ಗುರುತಿಸಿದ್ದು, ಒಟ್ಟು 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಮೂಲಕ ತರಬೇತಿ ನೀಡಲಾಗುತ್ತದೆ. ಮುಂದಿನ ವರ್ಷ ಇನ್ನಷ್ಟು ಶಾಲಾ–ಕಾಲೇಜುಗಳಿಗೆ ಈ ಕಾರ್ಯಕ್ರಮ ವಿಸ್ತರಿಸಲಾಗುತ್ತದೆ. ಈಗಾಗಲೇ ಶಾಲಾ–ಕಾಲೇಜುಗಳನ್ನು ಗುರುತಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ […]
ಉಡುಪಿ: ಆತ್ರಾಡಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ; ಆಕರ್ಷಕ ಭವ್ಯ ಶೋಭಾ ಯಾತ್ರೆ.

ಉಡುಪಿ: ಸವ್ಯಸಾಚಿ ಸೇವಾ ಸಂಗಮ ಶಿಶುಮಂದಿರ ಆತ್ರಾಡಿ ಮತ್ತು ಜೈ ಹನುಮಾನ್ ಯುವಕ ಸಂಘ ಇವರ ಆಶ್ರಯದಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿಯನ್ನು ಸುರಕ್ಷಾ ಸಭಾ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಪೂರ್ವಬಾವಿಯಾಗಿ ಪುಟಾಣಿ ಮಕ್ಕಳಿಗೆ ಕೃಷ್ಣ,- ರಾಧೆಯರ ವೇಷವನ್ನು ತೊಡಿಸಿ ವಿವಿಧ ಟ್ಯಾಬ್ಲೋ, ಚಂಡೆವಾದನ, ಬ್ರಹ್ಮರಾಂಭಿಕ ಭಜನಾ ತಂಡ ಕೆಳ ಆತ್ರಾಡಿಯವರ ದೇವರ ಕೀರ್ತನೆಯೊಂದಿಗೆ ಆತ್ರಾಡಿ ಪೇಟೆಯಲ್ಲಿ ಆಕರ್ಷಕ ಭವ್ಯ ಶೋಭಾ ಯಾತ್ರೆಯನ್ನು ನಡೆಸಲಾಯಿತು. ಮೆರವಣಿಗೆಯಲ್ಲಿ ಊರ ಮಹನೀಯರಾದ ಪಾದೆಕಲ್ ವಿಷ್ಣು ಭಟ್, ದಿಲೀಪ್ ರಾಜ್ ಹೆಗ್ಡೆ, ಸತ್ಯಾನಂದ […]
24ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಏರ್ ಫೋರ್ಸ್ ಇಂಜಿನಿಯರ್!

ಬೆಂಗಳೂರು: ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಯ ಎಂಜಿನಿಯರ್ ಒಬ್ಬರು ಸೆ.14 ರಂದು ಸಂಜೆ 24ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹಲಸೂರು ಮಿಲಿಟರಿ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ 25 ವರ್ಷದ ಲೋಕೇಶ್ ಪವನ್ ಕೃಷ್ಣ ಎಂದು ಮೃತನನ್ನು ಗುರುತಿಸಲಾಗಿದೆ. ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‌ಮೆಂಟ್‌ನ 24 ನೇ ಮಹಡಿಯಿಂದ ಭಾರತೀಯ ವಾಯುಪಡೆಯ ಎಂಜಿನಿಯರ್ ಲೋಕೇಶ್ ಜಿಗಿದಿದ್ದಾರೆ. ನಿನ್ನೆ ಸಂಜೆ ಲೋಕೇಶ್ ತಮ್ಮ ಸಹೋದರಿ ಲಕ್ಷ್ಮಿ ಅವರನ್ನು ಭೇಟಿ ಮಾಡಿದ್ದರು, ಅಲ್ಲಿ ಯಾವುದೋ ವಿಷಯದಿಂದ ಅವರ ಮನಸ್ಥಿತಿ […]
ಕೃಷ್ಣನೂರು ಉಡುಪಿಯಲ್ಲಿ ಮುಂಬೈಯ “ಆಲಾರೆ ಗೋವಿಂದ” ತಂಡ: ಏಳು ಅಡಿಯ ಪಿರಮಿಡ್ ನಿರ್ಮಿಸಿ ಮಡಿಕೆ ಒಡೆದು ಸಂಭ್ರಮ

ಉಡುಪಿ: ಉಡುಪಿಯಲ್ಲಿ ವಿಟ್ಲಪಿಂಡಿ ಉತ್ಸವದ ಸಂಭ್ರಮ ನೆಲೆಸಿದೆ. ದೂರದೂರು ಮುಂಬೈಯಿಂದ ಆಗಮಿಸಿದ ಆಲಾರೆ ಗೋವಿಂದ ತಂಡವು ನಗರದ ವಿವಿಧೆಡೆ ಏಳು ಅಡಿಯ ಪಿರಮಿಡ್ ರಚಿಸಿ ಮಡಿಕೆ ಒಡೆದು ಸಂಭ್ರಮಿಸಿತು. ಮಧುಸೂದನ ಪೂಜಾರಿ ಕೆಮ್ಮುಣ್ಣು ಇವರ ಸಂಯೋಜನೆಯಲ್ಲಿ ಪೂರ್ವ ಮುಂಬೈಯ ಸಾಂತಾಕ್ರೂಸ್ ಬಾಲಮಿತ್ರ ವ್ಯಾಯಾಮ ಶಾಲೆಯ ತಂಡ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆಲಾರೆ ಗೋವಿಂದ ಪ್ರದರ್ಶನ ನಡೆಸಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆಲಾರೆ ಗೋವಿಂದ ತಂಡ ಪಿರಮಿಡ್ […]