ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಸೆಕ್ಯೂರಿಟಿ ಬಗೆಗಿನ ಸೆಂಟರ್ ಆಫ್ ಎಕ್ಸಲೆನ್ಸ್

ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಅತ್ಯಾಧುನಿಕ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಜಪಾನ್ ನ ವಿಲ್ ಡಿಸೈನ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ನಿಟ್ಟೆ ತಾಂತ್ರಿಕ ಕಾಲೇಜಿನ ಸೈಬರ್ ಸೆಕ್ಯೂರಿಟಿ ವಿಭಾಗದ ಮುಖ್ಯಸ್ಥ ಡಾ.ರೋಷನ್ ಫರ್ನಾಂಡಿಸ್ ಮತ್ತು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಹಯೋಗಗಳ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಈ ಕೇಂದ್ರವು ಜಾಗತಿಕ ಜ್ಞಾನ ವಿನಿಮಯ, ವಿಶೇಷ ತರಬೇತಿ ಮತ್ತು ಅಂತರರಾಷ್ಟ್ರೀಯ ವೃತ್ತಿ […]
ಮಣಿಪಾಲ: ಉದ್ಯೋಗಾವಕಾಶ

ಮಣಿಪಾಲ: ಹೋಟೆಲ್ ರಾಯಲ್ ಇಂಟರ್ನ್ಯಾಷನಲ್ ಮಣಿಪಾಲದಲ್ಲಿ ರಿಸೆಪ್ಶನಿಸ್ಟ್ ಹುದ್ದೆಗೆ ಯುವತಿ/ಮಹಿಳೆ ಬೇಕಾಗಿದ್ದಾರೆ. ಸಮಯ: ಬೆಳಿಗ್ಗೆ 8:30 ರಿಂದ ಸಂಜೆ 5:30ರ ವರೆಗೆ. ಆಸಕ್ತರು ಸಂಪರ್ಕಿಸಬಹುದು: ಮೊ:7022084165
ಕುಂದಾಪುರ:ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡಕ್ಕೆ ದ್ವಿತೀಯ ಸ್ಥಾನ.

ಕುಂದಾಪುರ:ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ವಿಭಾಗ ) ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಬಾಲಕ – ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಳ್ಳುವುದರ ವಿದ್ಯಾರ್ಥಿಗಳಾದ ಹಿಮೇಶ್, ಆತೀಫ್, ರೋಹಿತ್, ಮಾಝ, ಜಾಹೀದ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜಯ್ […]
ಶ್ರೀ ಶೀರೂರು ಪರ್ಯಾಯ 2026-28: ಉಡುಪಿ ಜಿಲ್ಲೆಯ ಮಹಿಳೆಯರ ಸಭೆ.

ಉಡುಪಿ: ಶ್ರೀ ಶೀರೂರು ಮಠದ ಪರ್ಯಾಯದ ಕುರಿತಂತೆ ಉಡುಪಿ ಜಿಲ್ಲೆಯ ಮಹಿಳೆಯರ ಸಭೆ ಯನ್ನು ದಿನಾಂಕ ಸೆ.11ರಂದು ಶೀರೂರು ಮಠದಲ್ಲಿ ನಡೆಯಿತು. ಶ್ರೀ ವೇದ ವರ್ಧನ ಶ್ರೀಪಾದರು ಆಶೀರ್ವಚನವನ್ನು ನೀಡಿ ಶೀರೂರು ಪರ್ಯಾಯ ಕೃಷ್ಣಭಕ್ತರ ಪರ್ಯಾಯ, ನಮ್ಮ ನಿಮ್ಮೆಲ್ಲರ ಪರ್ಯಾಯ ಎಲ್ಲರೂ ಒಟ್ಟಾಗಿ ಕೃಷ್ಣ ಸೇವೆಯಲ್ಲಿ ಭಾಗಿಯಾಗೋಣ ಎಂದು ಆಶೀರ್ವಚನ ನೀಡಿದರು. ದಿವಾನರಾದ ಉದಯ ಕುಮಾರ್ ಸರಳತ್ತಾಯರು ಮಾತನಾಡಿ ಪರ್ಯಾಯದ ಸಂದರ್ಭದಲ್ಲಿ ಮಾತ್ರ ಕೃಷ್ಣನ ಸೇವೆ ಮಾಡುವುದಲ್ಲ ಶೀರೂರು ಪರ್ಯಾಯ ಎರಡು ವರ್ಷವೂ ಕೃಷ್ಣನಸೇವೆ ಮಾಡಬೇಕು ಮುಖ್ಯವಾಗಿ […]
ಕುಂದಾಪುರ:ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮನು ಪೂಜಾರಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

ಕುಂದಾಪುರ:ಅಜ್ಜರ ಕಾಡಿನಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮನು ಪೂಜಾರಿ 110 ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.