ಬ್ರಹ್ಮಾವರ: ಮದುವೆಗೆ ಒಪ್ಪದ ಯುವತಿಗೆ ಚೂರಿ ಇರಿದ ಯುವಕ

ಉಡುಪಿ: ಮದುವೆಗೆ ನಿರಾಕರಿಸಿದ ಕಾರಣಕ್ಕಾಗಿ ಯುವತಿಗೆ ಯುವಕ ಚೂರಿ ಇರಿದ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ನಡೆದಿದೆ. ಆರೋಪಿ ಯುವತಿಯನ್ನು ಮದುವೆಯಾಗಬೇಕಾಗಿ ಪೀಡಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾಳೆ. ಮಾತಿಗೆ ಮಾತು ಬೆಳೆದು ಜಗಳವಾಗಿ ಯುವಕ ಸ್ಥಳದಲ್ಲೇ ಚಾಕುವಿನಿಂದ ಇರಿದಿದ್ದಾನೆ. ಯುವತಿ ರಕ್ಷಿತಾ (24) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಳಿಯನ್ನು ಬಳಸಿ, ಬ್ಯಾಟರಿ ತಯಾರಿಸಿ ಸೈ ಅನ್ನಿಸಿಕೊಂಡ ಬೆಂಗಳೂರಿನ ವಿಜ್ಞಾನಿಗಳು

ಬೆಂಗಳೂರು: ಬೆಂಗಳೂರಿನ ಐಐಎಸ್ಸಿ ವಿಜ್ಞಾನಿಗಳು ಗಾಳಿಯನ್ನು ಬಳಸಿ ಪರಿಸರಸ್ನೇಹಿ ಎನಿಸುವ ಬ್ಯಾಟರಿ ಕಂಡು ಹಿಡಿದಿದ್ದಾರೆ. ಜಿಂಕ್ ಮತ್ತು ಗಾಳಿಯನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಈ ಬ್ಯಾಟರಿ ಪ್ರಕ್ರಿಯೆಯಲ್ಲಿ ಹೊರಬರುವ ಬೈಪ್ರಾಡಕ್ಟ್ ನೀರು ಬದಲು ಹೈಡ್ರೋಜನ್ ಪೆರಾಕ್ಸೈಡ್ ಆಗಿರುತ್ತದೆ ಎಂಬುದು ಈ ಬ್ಯಾಟರಿಯ ವಿಶೇಷತೆ ಆಗಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಸಂಶೋಧಕಿ ಅನಿಂದಾ ಜೆ ಭಟ್ಟಾಚಾರ್ಯ ಮತ್ತವರ ತಂಡದವರು ಜಿಂಕ್ ಮತ್ತು ಗಾಳಿ ಸಹಾಯದಿಂದ ಬ್ಯಾಟರಿ ಅಭಿವೃದ್ಧಿಪಡಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ. ಏನು ವಿಶೇಷತೆ? ವಿಜ್ಞಾನಿಗಳು ಕಂಡುಹಿಡಿದ […]
ಉಡುಪಿ: ತುಳುಕೂಟದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ತುಳುಕೂಟ ಉಡುಪಿ (ರಿ.) ಯ ಹೊಸ ಕಾರ್ಯಕಾರಿ ಸಮಿತಿಯನ್ನು ಪತ್ರಕರ್ತ ಜನಾರ್ದನ್ ಕೊಡವೂರು ಚುನಾವಣಾ ಅಧಿಕಾರಿಯ ನೆಲೆಯಲ್ಲಿ ಆಯ್ಕೆ ಮಾಡಿದರು. ಗೌರವ ಸಲಹೆಗಾರರಾಗಿ ಉಡುಪಿ ವಿಶ್ವನಾಥ್ಶೆಣ, ಗೌರವಾಧ್ಯಕ್ಷ ರಾಗಿ ಭಾಸ್ಕರಾನಂದ ಕುಮಾರ್, ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ದಿವಾಕರ ಸನಿಲ್, ಶೋಭಾ ಶೆಟ್ಟಿ, ವಿ.ಕೆ. ಯಾದವ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ್ ಕಿದಿಯೂರ್, ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ದೇವಾಡಿಗ, ಸಂತೋಷ್ ಕುಮಾರ್, ಮೋಹನ್ ಶೆಟ್ಟಿ ಮೂಡನಿಡಂಬೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ.,ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ […]
ಹಿರಿಯಡ್ಕ: ಗುಂಡಿಗಳ ರಸ್ತೆ ನವೀಕರಿಸುವಂತೆ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ

ಉಡುಪಿ: ಹಿರಿಯಡ್ಕ ಪೇಟೆ ಭಾಗದ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಸಂಚರಿಸುವ ವಾಹನಗಳಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಹಿರಿಯಡ್ಕದ ಕೋಟ್ನಕಟ್ಟೆಯಿಂದ ಹಳೆ ಪೊಲೀಸ್ ಸ್ಟೇಷನ್ ವರೆಗೆ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಉಳಿದ ಭಾಗದಲ್ಲಿ ರಸ್ತೆಯು ನವೀಕರಣಗೊಂಡಿದ್ದು, ಹೃದಯ ಭಾಗದಲ್ಲಿ ಹೊಂಡಗಳಿಂದ ರಸ್ತೆಯನ್ನೇ ಹುಡುಕುವ ಪರಿಸ್ಥಿತಿ ಉಂಟಾಗಿದೆ.“ಇತ್ತೀಚಿಗಷ್ಟೇ ರಸ್ತೆಗೆ ತೇಪೆ ಹಾಕಲಾಗಿದ್ದು ಮಳೆಗೆ ಮತ್ತೆ ಹೊಂಡಗಳು ನಿರ್ಮಾಣವಾಗಿದೆ. ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯ ಗುಂಡಿಗಳಿಂದಾಗಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆಗಳು ಅಲ್ಲಲ್ಲಿ ನಡೆದಿದೆ. […]
ಮಣಿಪಾಲ: ಮನೆಯ ಬಾಗಿಲು ಮುರಿದು ಚಿನ್ನಾಭರಣ- ನಗದು ಕಳವು

ಉಡುಪಿ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯ ಮಂಚಿಕೆರೆ ಎಂಬಲ್ಲಿ ನಡೆದಿದೆ. ಮಂಚಿಕೆರೆಯ ಪ್ರವೀಣ್ ಸಪಳಿಗ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಪ್ರವೀಣ್ ಸಪಳಿಗ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಬೆಳಿಗ್ಗೆ 8 ಗಂಟೆಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು. ಸಂಜೆ 5 ಗಂಟೆಗೆ ಮನೆಗೆ ಬಂದು ನೋಡುವಾಗ […]