ಸುಬ್ರೋತೋ ಕಪ್ (U-15): ಫೈನಲ್ ಪ್ರವೇಶಿಸಿದ ಮಿನರ್ವಾ ಪಬ್ಲಿಕ್ ಸ್ಕೂಲ್ ಮತ್ತು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!

ಬೆಂಗಳೂರು: 64ನೇ ಸುಬ್ರೊತೋ ಕಪ್ ಅಂತರರಾಷ್ಟ್ರೀಯ ಫುಟ್‌ಬಾಲ್ ಪಂದ್ಯಾವಳಿಯ ಸಬ್ ಜೂನಿಯರ್ ಬಾಲಕರ (U-15) ಸೆಮಿಫೈನಲ್ ಹಂತವು ಬೆಂಗಳೂರಿನಲ್ಲಿ ಎರಡು ಉತ್ಸಾಹಭರಿತ ಸ್ಪರ್ಧೆಗಳನ್ನು ಎದುರಿಸಿತು. ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ಹಾಗು ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್ (ಬಿಹಾರ) ಫೈನಲ್‌ನಲ್ಲಿ ತಮ್ಮ ಸ್ಥಾನಗಳನ್ನು ಕಾಯ್ದಿರಿಸಿಕೊಂಡವು. ಬೆಳಗ್ಗೆ ನಡೆದ ಮೊದಲ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ (CISCE) ತಮ್ಮ ಸಮಗ್ರ ಶಕ್ತಿ ತೋರಿಸಿ ಸೇಂಟ್ ಜಾನ್ ಹೈಸ್ಕೂಲ್ (ಜಾರ್ಖಂಡ್) ವಿರುದ್ಧ 6-1 ಗೆಲುವು ಸಾಧಿಸಿತು. ಬಿಕ್ಸನ್ ಎರಡು ಬಾರಿ […]
ನೇಪಾಳ ಹಿಂಸಾಚಾರ: ಸಹಾಯಕ್ಕಾಗಿ ಅಂಗಲಾಚಿದ ಭಾರತೀಯ ಮಹಿಳೆ!

ಕಠಂಡು: ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಸಂದರ್ಭದಲ್ಲಿ ಪೋಖರಾದಿಂದ ಒಂದು ವೀಡಿಯೊ ಹೊರಬಂದಿದ್ದು, ಇದರಲ್ಲಿ ಭಾರತೀಯ ಮಹಿಳೆಯೊಬ್ಬರು ಭಾರತ ಸರ್ಕಾರದ ಸಹಾಯಕ್ಕಾಗಿ ಅಂಗಲಾಚುತ್ತಿರುವುದು ವೈರಲ್ ಆಗಿದೆ. ನನ್ನ ಹೆಸರು ಉಪಸ್ಥಾ ಗಿಲ್, ಮತ್ತು ನಾನು ಈ ವೀಡಿಯೋವನ್ನು ಪ್ರಫುಲ್ ಗಾರ್ಗ್ ಅವರಿಗೆ ಕಳುಹಿಸುತ್ತಿದ್ದೇನೆ. ದಯವಿಟ್ಟು ನಮಗೆ ಸಹಾಯ ಮಾಡುವಂತೆ ನಾನು ಭಾರತೀಯ ರಾಯಭಾರ ಕಚೇರಿಯನ್ನು ವಿನಂತಿಸುತ್ತೇನೆ. ನಮಗೆ ಸಹಾಯ ಮಾಡಬಹುದಾದ ಎಲ್ಲರೂ ದಯವಿಟ್ಟು ಸಹಾಯ ಮಾಡಿ. ನಾನು ಇಲ್ಲಿ ನೇಪಾಳದ ಪೋಖರಾದಲ್ಲಿ ಸಿಲುಕಿಕೊಂಡಿದ್ದೇನೆ. ನಾನು ವಾಲಿಬಾಲ್ ಲೀಗ್ […]
ನೇಪಾಳ ಪ್ರತಿಭಟನೆ; ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆ: ಸಿಎಂ

ಬೆಂಗಳೂರು: ನೇಪಾಳದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆ ಬೆನ್ನಲ್ಲೇ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ. ನೇಪಾಳ ಪರಿಸ್ಥಿತಿ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನೇಪಾಳದಲ್ಲಿ ವಿದ್ಯಾರ್ಥಿ-ಯುವಜನರ ಕ್ಷಿಪ್ರ ಬೃಹತ್ ಪ್ರತಿಭಟನೆ ಕಾರಣಕ್ಕೆ ದೇಶಾದ್ಯಂತ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ […]
ಗಂಗೂಬಾಯಿ ಹಾನಗಲ್ ವಿವಿಯ ಜೂನಿಯರ್ ವಿಭಾಗದ ಪರೀಕ್ಷೆ: ಕಾರ್ಕಳದ ಅದಿತ್ರಿಯ ಸಿಂಧು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ.

ಕಾರ್ಕಳ: ಅದಿತ್ರಿಯ ಸಿಂಧು ಇವರು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಈ ವರ್ಷದ ಭರತನ್ಯಾಟ ಜ್ಯೂನಿಯರ್ ಪರಿಕ್ಷೆಯಲ್ಲಿ ಶೇಕಡಾ 94% ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಮದಿರುತ್ತಾರೆ. ಕಾರ್ಕಳದ ಶ್ರೀಮತಿ ಸುರೇಖ ಮತ್ತು ದಿನೇಶ್ ಆಚಾರ್ಯರವರ ಸುಪುತ್ರಿ, ಮೂಡಬಿದ್ರೆಯ ಸುಖದಾ ಬರ್ವೆಯವರ ಶಿಷ್ಯೆಯಾಗಿದ್ದು, ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯ 5ನೇತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕಾರ್ಕಳ: ಸೆ.13 ರಂದು ಉಚಿತ ಶ್ರವಣ ಶಕ್ತಿ ತಪಾಸಣೆ ಶಿಬಿರ.

ಉಡುಪಿ: ಕಾರ್ಕಳ ಖಾಸಗಿ ಬಸ್ ನಿಲ್ದಾಣದ ಸಮೀಪ ಮಣ್ಣ ಗೋಪುರದ ಎದುರಿನ ಸವರಿನ್ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಸ್ವಸ್ತಿಕ್ ಹಿಯರಿಂಗ್ ಏಯ್ಡ್ ಕ್ಲಿನಿಕ್‌ನಲ್ಲಿ ಸೆ.13ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಿವಿ ಕೇಳಿಸದ ಸಮಸ್ಯೆ ಇದ್ದವರಿಗೆ ಉಚಿತ ಸಂದರ್ಶನ ಹಾಗೂ ಉಚಿತ ಶ್ರವಣ ಶಕ್ತಿ ತಪಾಸಣೆ ಹಾಗೂ ಉಚಿತ ಸಲಹೆ ನೀಡಲಾಗುವುದು. ಇಲ್ಲಿ ರಿಯಾಯಿತಿ ದರದಲ್ಲಿ ಶ್ರವಣ ಸಾಧನಗಳು ಲಭ್ಯವಿದೆ. ಈ ಶ್ರವಣ ಸಾಧನಗಳಲ್ಲಿ ಕ್ಲಿಯರ್ ಕೇಳಿಸುವ ತಂತ್ರಜ್ಞಾನವಿದ್ದು, 2ವರ್ಷ ಬ್ರ್ಯಾಂಡ್ ವಾರಂಟಿ ಇರುತ್ತದೆ. ಹಳೆಯ ಶ್ರವಣ […]