‘ಸ್ವದೇಶಿ ಮೇಳ’ವನ್ನು ಆಯೋಜಿಸುವಂತೆ ಸಂಸದರಿಗೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ: ದೇಶೀಯ ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ಅದನ್ನು ಚಳವಳಿಯನ್ನಾಗಿ ಮಾಡಲು ‘ಸ್ವದೇಶಿ ಮೇಳ’ವನ್ನು ಆಯೋಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸಂಸದರಿಗೆ ಸೋಮವಾರ ಸಲಹೆ ನೀಡಿದರು. ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಂಸದರು ತಮ್ಮ ಕ್ಷೇತ್ರಗಳಲ್ಲಿನ ಜನರು ಮತ್ತು ವ್ಯಾಪಾರಿಗಳೊಂದಿಗೆ ಸಭೆಗಳನ್ನು ನಡೆಸಿ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಜಿಎಸ್‌ಟಿ ಸುಧಾರಣೆಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು. ಸ್ವಾವಲಂಬನೆಯು ಭಾರತದ ಅಭಿವೃದ್ಧಿಗೆ ಶಕ್ತಿಯ ಮಾರ್ಗವಾಗಿದೆ’ ಎಂದು […]

ಮಾಂಟೆಸ್ಸರಿ/ ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್’ಗೆ ಸೇರಲು ಸೆ.30 ಕೊನೆಯ ದಿನ.

ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲದಲ್ಲಿ ಮಹಿಳೆಯರಿಗೆ ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸಿಗೆ ಪ್ರವೇಶಾತಿ (2025-26) ಪ್ರಕ್ರಿಯೆ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆದುಕೊಳ್ಳಬಹುದು. ಕೆಲವೇ ಸೀಟುಗಳು ಲಭ್ಯವಿದ್ದು, ಸೆ.30 ಕೊನೆಯ ದಿನವಾಗಿದೆ. ಆಸಕ್ತಿಯಿರುವವರು, ಹೆಚ್ಚಿನ ಮಾಹಿತಿಗಾಗಿ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಡಿ.ಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್ ಕಾಂಪ್ಲೆಕ್ಸ್, 1ನೇ ಮಹಡಿಯಲ್ಲಿರುವಸಂಸ್ಥೆಯನ್ನು ಸಂಪರ್ಕಿಸುವಂತೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿರುತ್ತದೆ. M:9901722527

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಕಾಜಲ್ ಅಗರ್ವಾಲ್ ನಿಧನ ಸುಳ್ಳು ಸುದ್ದಿ: ನಟಿ ಸ್ಪಷ್ಟನೆ!

ಚೆನ್ನೈ: ನಟಿ ಕಾಜಲ್‌ ಅಗರವಾಲ್‌ ಅವರು ಭೀಕರ ಅಪಘಾತಕ್ಕೆ ಒಳಗಾಗಿದ್ದಾರೆ, ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲ ಹರಿದಾಡುತ್ತಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ನಟಿ, ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ನಾನು ಅಪಘಾತಕ್ಕೀಡಾಗಿದ್ದೇನೆ ಎನ್ನುವ ಕೆಲವು ಆಧಾರರಹಿತ ಸುದ್ದಿಗಳು ನನಗೆ ಬಂದಿವೆ (ಮೃತಪಟ್ಟಿದ್ದಾರೆ ಎಂದೂ ಹೇಳಲಾಗಿದೆ!). ನಿಜ ಹೇಳಬೇಕೆಂದರೆ, ಇದು ತುಂಬಾ ತಮಾಷೆಯಾಗಿರುವ ಸುದ್ದಿಯಾಗಿದೆ, ಏಕೆಂದರೆ ಅದು ಸುಳ್ಳು. ದೇವರ ದಯೆಯಿಂದ, ನಾನು ಕ್ಷೇಮವಾಗಿದ್ದೇನೆ. ಅಂತಹ […]

ಸೌಜನ್ಯಾ ಪ್ರಕರಣ: ಮರುತನಿಖೆ ಒತ್ತಾಯಿಸಿ ದ.ಕ. ಎಸ್‌ಪಿಗೆ ಸ್ನೇಹಮಯಿ ಕೃಷ್ಣ ದೂರು

ಮಂಗಳೂರು: ‘ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಕೆಲ ವ್ಯಕ್ತಿಗಳ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸಿ ಸೌಜನ್ಯಾಳನ್ನು ಕೊಲೆ ಮಾಡಿರುವ ನೈಜ ಆರೋಪಿಗೆ ಶಿಕ್ಷೆಆಗಬೇಕು. ಆ ಕಾರಣಕ್ಕಾಗಿ ದೂರಿನಲ್ಲಿ ಹೆಸರಿಸಿರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.

ಎನ್ಎಂಎಎಂಐಟಿ ಸಹಾಯಕ ಪ್ರಾಧ್ಯಾಪಕಿಗೆ ಎಕ್ಸಲೆನ್ಸ್ ಇನ್ ಎಜುಕೇಷನಲ್ ಲೀಡರ್ಶಿಪ್ ಪ್ರಶಸ್ತಿ

ಕಾರ್ಕಳ: ಹುಬ್ಬಳ್ಳಿಯ ಸಂತೋಷ್ ಫೌಂಡೇಶನ್ ಸಂಸ್ಥೆಯು 5 ಸೆಪ್ಟೆಂಬರ್ ರಂದು ಆಯೋಜಿಸಿದ್ದ ಎಜು ಇನ್ಸ್ಪೈರ್ ರಾಷ್ಟ್ರೀಯ ಪ್ರಶಸ್ತಿ 2025 ಕಾರ್ಯಕ್ರಮದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾನವಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸೌಮ್ಯಾಶ್ರೀ ಬಂಗೇರ ಅವರಿಗೆ ಎಕ್ಸಲೆನ್ಸ್ ಇನ್ ಎಜುಕೇಷನಲ್ ಲೀಡರ್ಶಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರತಿಷ್ಠಿತ ಪ್ರಶಸ್ತಿಯು ಶೈಕ್ಷಣಿಕ ನಾಯಕತ್ವಕ್ಕೆ ಶ್ರೀಮತಿ ಬಂಗೆರಾ ಅವರ ಅತ್ಯುತ್ತಮ ಕೊಡುಗೆಗಳನ್ನು ಮತ್ತು ಶೈಕ್ಷಣಿಕ ಸಮುದಾಯವನ್ನು ಬಲಪಡಿಸುವ ಅವರ ಅಚಲ ಬದ್ಧತೆಯನ್ನು ಗುರುತಿಸುತ್ತದೆ. ಈ ಕಾರ್ಯಕ್ರಮದ […]