ಇನ್ನಂಜೆಯ ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳಿಗೆ ಬಸ್ಸುಗಳ ಕೊಡುಗೆ: ಡಾ.ರಾಧಾಕೃಷ್ಣ ಎಸ್ ಐತಾಳ್.

ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಎಂಬ ಗ್ರಾಮದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪದವಿಪೂರ್ವ ತರಗತಿಯವರೆಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶದಿಂದ ಸ್ವಾತಂತ್ರ್ಯ ಪೂರ್ವದ 1943ನೇ ಇಸವಿಯಿಂದಲೇ ಶ್ರೀ ಸೋಧೆ ವಾದಿರಾಜ ಮಠದಿಂದ ಪ್ರವರ್ತಿತವಾದ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಬೆಂಗಳೂರಿನ ಪ್ರಖ್ಯಾತ ಉದ್ಯಮ ಸಂಸ್ಥೆಯಾದ “ಲೀಪ್ ಫ್ರಾಗ್ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್” ಸಾಮಾಜಿಕ ಕಳಕಳಿಯಿಂದ ತನ್ನ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟೀಸ್(CSR) ನಿಧಿಯಿಂದ ಸುಮಾರು 48ಲಕ್ಷ ರೂಪಾಯಿಗೂ ಮಿಕ್ಕಿ ವೆಚ್ಚ ಮಾಡಿ ಎರಡು ನೂತನ ಬಸ್ಸನ್ನು […]

ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶೈಕ್ಷಣಿಕ ಸ್ವಾಯತ್ತತೆಯ ಗರಿ: ರತ್ನಕುಮಾರ್

ಉಡುಪಿ : ಉಡುಪಿಯ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಂಟಕಲ್‌ನಲ್ಲಿ ಸ್ಥಾಪಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದು ಶೈಕ್ಷಣಿಕ ಸ್ವಾಯತ್ತತೆ (Autonomous) ಹಾಗೂ ಎಲ್ಲಾ ಅರ್ಹ ಬಿ.ಇ ಕೋರ್ಸ್‌ಗಳಿಗೆ ರಾಷ್ಟ್ರೀಯ ಮೌಲ್ಯಂಕನ ಮಂಡಳಿ(NBA)ಯಿಂದ ಮಾನ್ಯತೆಯನ್ನು ಪಡೆದಿದೆ ಈ ಸಂಸ್ಥೆಗೆ ಸಂಭ್ರಮದ ವಿಚಾರ ಎಂದು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ರತ್ನಕುಮಾರ್ ಅವರು ತಿಳಿಸಿದರು. ಇನ್ನಂಜೆ ಎಸ್ ವಿ ಎಚ್ ಪಿಯು ಕಾಲೇಜಿನಲ್ಲಿ […]

ಉಡುಪಿಯ ಸ್ವೀಟ್ಸ್ ಅಂಗಡಿಯಲ್ಲಿ ಸೇಲ್ಸ್ ಗೆ ಹುಡುಗಿಯರು ಬೇಕಾಗಿದ್ದಾರೆ

ಉಡುಪಿ:ಉಡುಪಿಯ ಸ್ವೀಟ್ಸ್ ಅಂಗಡಿಯಲ್ಲಿ ಸೇಲ್ಸ್ ಗೆ ಹುಡುಗಿಯರು ಬೇಕಾಗಿದ್ದಾರೆ.ಇಲ್ಲಿಯೇ ಉಳಿದುಕೊಳ್ಳುವವರಿಗೆ ಮಾತ್ರ. ಊಟ ವಸತಿ ಒಳಗೊಂಡಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8971588367

ಉಡುಪಿ:ಸೆ.11 ರಂದು ಚಿಕ್ಕಮಗಳೂರಿನಲ್ಲಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆ

ಉಡುಪಿ: ಪ್ರಸಕ್ತ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಜೂಡೋ ಮತ್ತು ಟೇಕ್ವಾಂಡೋಆಯ್ಕೆ ಸ್ಪರ್ಧೆಗಳು ಸೆ.11 ರಂದು ಚಿಕ್ಕಮಗಳೂರಿನ ಶತಮಾನೋತ್ಸವ ಕ್ರೀಡಾಂಗಣದಲ್ಲಿ ನಡೆಯಲಿದೆ.ಜಿಲ್ಲೆಯಿಂದ ಭಾಗವಹಿಸುವ ಕ್ರೀಡಾಪಟುಗಳು ಆನ್ಲೆöÊನ್ ಮೂಲಕ ನೋಂದಾವಣೆ ಮಾಡಿದ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳೊಂದಿಗೆ ನಿಗದಿತ ದಿನದಂದು ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂ: 0820-2521324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ:ಸೆ.13 ಮತ್ತು 14 ರಂದು ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆ

ಉಡುಪಿ: ಪ್ರಸಕ್ತ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ವೇಯ್ಟ್ಲಿಫ್ಟಿಂಗ್, ನೆಟ್‌ಬಾಲ್, ಬಾಕ್ಸಿಂಗ್, ಕುಸ್ತಿ ಹಾಗೂ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ಸೆಪ್ಟಂಬರ್ 13 ರಂದು ಮತ್ತು ವಾಲಿಬಾಲ್ ಹಾಗೂ ಬಾಸ್ಕೆಟ್‌ಬಾಲ್ಸ್ಪರ್ಧೆಗಳು ಸೆ.14 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಉಡುಪಿ ಜಿಲ್ಲಾ ಮಟ್ಟದ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿದ್ದು, ಜಿಲ್ಲೆಯಿಂದ ಭಾಗವಹಿಸುವ […]