ಸವ್ಯಸಾಚಿ – 2025’ ಅಂತರ ಕಾಲೇಜು ವಾಣಿಜ್ಯ ಉತ್ಸವ

ಮೂಡುಬಿದಿರೆ: ಶಿಕ್ಷಣಕ್ಕೆ ಕೌಶಲ್ಯ ಮತ್ತು ಅನುಭವಗಳ ಬೆಂಬಲ ದೊರೆತಾಗ ಮಾತ್ರ ವಿದ್ಯಾರ್ಥಿ ಸಮಗ್ರ ವ್ಯಕ್ತಿತ್ವ ಹೊಂದಿದ ನಾಗರಿಕನಾಗಿ ರೂಪುಗೊಳ್ಳುತ್ತಾನೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಕೇಂಬಿಯಮ್ ಸಂಸ್ಥೆಯ ಸಹಾಯಕ ಹಣಕಾಸು ವ್ಯವಸ್ಥಾಪಕಿ ಸಿಎ ಕಿರಣಾ ಕಾಮತ್ ನುಡಿದರು.ಆಳ್ವಾಸ್ ಕಾಲೇಜಿನ ಬಿ.ಕಾಂ ವಿಭಾಗ ಆಯೋಜಿಸಿದ್ದ ‘ಸವ್ಯಸಾಚಿ – 2025’ ಅಂತರ ಕಾಲೇಜು ವಾಣಿಜ್ಯ ಉತ್ಸವವನ್ನು ಗುರುವಾರ ಕುವೆಂಪು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಮಾಜದ ಪ್ರಗತಿಗೆ ಬುನಾದಿ. ಆದರೆ ಕೇವಲ ಅಂಕಗಳು ಅಥವಾ ಪದವಿಗಳು ಸಾಕಾಗುವುದಿಲ್ಲ. ಇಂದಿನ […]

ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೋಸ: ನಾಲ್ವರು ಆರೋಪಿಗಳ ಬಂಧನ

ಉಡುಪಿ: ವ್ಯಕ್ತಿಯೋರ್ವರಿಗೆ ಆನ್ ಲೈನ್ ಟ್ರೇಡಿಂಗ್ ಮೂಲಕ ಮೋಸ ಮಾಡಿದ್ದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುರತ್ಕಲ್ ಕೋಡಿಕೆರೆ ನಿವಾಸಿ ಮೊಹಮದ್ ಕೈಸ್(20), ಹೆಜಮಾಡಿ ಕನ್ನಂಗಾರ್ ನಿವಾಸಿ ಅಹಮದ್ ಅನ್ವೀಜ್(20), ಬಂಟ್ವಾಳ ನಿವಾಸಿ ಸಪ್ವಾನ್(30), ಮತ್ತು ತಾಸೀರ್ (31) ಎಂದು ಗುರುತಿಸಲಾಗಿದೆ. ಕಾಪು ಶಂಕರಪುರ ನಿವಾಸಿ ಜೊಸ್ಸಿ ರವೀಂದ್ರ ಡಿಕ್ರೂಸ್(54) ಎಂಬವರಿಗೆ ಫೇಸ್ ಬುಕ್ ಮೂಲಕ ಆರೋಪಿ ಅಗರ್ವಾಲ್ ಎಂಬ ಮಹಿಳೆಯ ಪರಿಚಯವಾಗಿತ್ತು‌. 2025ರ ಫೆಬ್ರವರಿ ತಿಂಗಳಲ್ಲಿ ಅವಳ ವಾಟ್ಸಾಪ್ ನಂಬ್ರವನ್ನು ನೀಡಿ […]

ಈ ಒಂದು ಹಣ್ಣು ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೊಂದೆಲ್ಲಾ ಲಾಭ: ಸಿಕ್ಕಿದ್ರೆ ಮಿಸ್ ಮಾಡದೇ ತಿನ್ನಿ ಯಾಕಂದ್ರೆ!

ಈ ಹಣ್ಣು ತಿಂದ್ರೆ ನಿಮ್ಮ ದೇಹಕ್ಕೆ ಬೇಕಾದಷ್ಟು ವಿಟಮಿನ್ ಸಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶ ಸಿಗುತ್ತೆ. ಆಗಾಗ ಈ ಹಣ್ಣು ತಿಂದ್ರೆ ಜೀರ್ಣಕ್ರೀಯೆ ಚೆನ್ನಾಗಿರುವುದರ ಜೊತೆಗೆ ಹೃದಯದ ಆರೋಗ್ಯ ಕೂಡ ಮಸ್ತ್ ಆಗಿರುತ್ತೆ. ಹೌದು ನಿಮ್ಮ ದೇಹಕ್ಕೆ ಪೋಷಕಾಂಶ ನೀಡುವ ಈ ಹಣ್ಣೇ ಡ್ರ್ಯಾಗನ್ ಫ್ರೂಟ್ . ಒಂದು ಡ್ರ್ಯಾಗನ್ ನಿಂದ ಎಷ್ಟೊಂದೆಲ್ಲಾ ಆರೋಗ್ಯ ಲಾಭ ಗೊತ್ತಾ: ಒಂದು ಡ್ರ್ಯಾಗನ್ ಹಣ್ಣು ನಿಮ್ಮ ದೈನಂದಿನ ವಿಟಮಿನ್ ಸಿ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ, […]

ದೇಶದಲ್ಲಿ ಶಿಶು ಮರಣ ಪ್ರಮಾಣ ಶೇ. 37ರಷ್ಟು ಗಣನೀಯ ಇಳಿಕೆ ದಾಖಲೆ!

ನವದೆಹಲಿ: ದೇಶದಲ್ಲಿ ಶಿಶುಗಳ ಮರಣ ಪ್ರಮಾಣದಲ್ಲಿ (ಐಎಂಆರ್‌) ಗಣನೀಯ ಇಳಿಕೆ ದಾಖಲಾಗಿದೆ. 2013ಕ್ಕೆ ಹೋಲಿಸಿದರೆ 2023ರಲ್ಲಿ ಶಿಶುಗಳ ಮರಣ ಪ್ರಮಾಣವು ದಾಖಲೆಯ ಶೇ 37ರಷ್ಟು ಕಡಿಮೆಯಾಗಿದೆ.ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಬಿಡುಗಡೆಗೊಳಿಸಿರುವ 2023ರ ಮಾದರಿ ನೋಂದಣಿ ವರದಿಯಲ್ಲಿ ಈ ವಿವರಗಳನ್ನು ನೀಡಲಾಗಿದೆ. ಒಂದು ವರ್ಷದಲ್ಲಿ ಜನಿಸಿದ ಪ್ರತಿ ಸಾವಿರ ಮಗುವಿನ ಪೈಕಿ ಮರಣ ಹೊಂದಿದ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ ಈ ದತ್ತಾಂಶ ನಿಗದಿಪಡಿಸಲಾಗುತ್ತದೆ. 2013ರಲ್ಲಿ ಶೇ 40ಕ್ಕೆ ತಲುಪಿದ್ದ ಶಿಶುಗಳ ಮರಣ ಪ್ರಮಾಣವು 2023ರ ವೇಳೆಗೆ ಶೇ […]

ಡಿ.ಕೆ. ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ: ಎಡಿಆರ್ ವರದಿ

ನವದೆಹಲಿ: ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೇಶದ ಎರಡನೇ ಶ್ರೀಮಂತ ಸಚಿವ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಹೇಳಿದೆ. ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ಎಡಿಆರ್ ಗುರುವಾರ ವರದಿ ಬಿಡುಗಡೆ ಮಾಡಿದೆ. 27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರ ಅಫಿಡವಿಟ್‌ಗಳನ್ನು ವಿಶ್ಲೇಷಿಸಲಾಗಿದೆ. ಕರ್ನಾಟಕದಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು […]