ಉಡುಪಿಯ ಹೆಸರಾಂತ ಬಲ್ಲಾಳ್ ಮೊಬೈಲ್ಸ್ ಶೋರೂಮ್ ನಲ್ಲಿ ಗೂಗಲ್ pixel 10 series ಸ್ಮಾರ್ಟ್ ಪೋನ್ ಬಿಡುಗಡೆ

ಉಡುಪಿ: ಗೂಗಲ್ pixel 10 series ಸ್ಮಾರ್ಟ್ ಪೋನ್ ಅನ್ನು ಉಡುಪಿಯ ಬಲ್ಲಾಳ್ ಮೊಬೈಲ್ಸ್ ಶೋರೂಮ್ ನಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು. ಈ ಸರಣಿಯಲ್ಲಿ Pixel 10, Pixel 10 Pro, Pixel 10 Pro XL ಅನ್ನು ಒಳಗೊಂಡಿದೆ. ಗೂಗಲ್ Google Pixel 10 ಸ್ಮಾರ್ಟ್ ಪೋನ್ ಬೆಲೆ ₹79,999 ರೂ. ಗಳಾಗಿವೆ. Pixel 10 Pro ಬೆಲೆ 109,999 ರೂ., Pixel 10 Pro XL ಬೆಲೆ 125,000 ರೂ. ಗಳಾಗಿವೆ. 24 ತಿಂಗಳ […]

ಲಯನ್ಸ್ ಕ್ಲಬ್ ವತಿಯಿಂದ ನಿವೃತ್ತ ಅದ್ಯಾಪಕಿಗೆ ಸನ್ಮಾನ.

ಉಡುಪಿ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಲಯನ್ಸ್ ಕ್ಲಬ್ ಹಿರಿಯಡ್ಕದ ವತಿಯಿಂದ ಲಯನ್ಸ್ ಅಧ್ಯಕ್ಷರಾದ ರಘುವೀರ್ ಶೆಟ್ಟಿಗಾರ್ ರವರ ನೇತೃತ್ವದಲ್ಲಿ ಪಾಂಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಅತ್ರಾಡಿಯಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಶ್ರೀಮತಿ ನಳಿನಿ ಶೆಟ್ಟಿ ಮತ್ತು ಮೋಹನ್ ದಾಸ್ ಹೆಗ್ಡೆ ದಂಪತಿಯರನ್ನು ಶಾಲು ಹೊದಿಸಿ, ಹಾರ ಹಾಕಿ, ಫಲ ಪುಷ್ಪ ಮತ್ತು ಸ್ಮರಣಿಕೆ ಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಹಿರಿಯಡ್ಕದ ಕಾರ್ಯದರ್ಶಿ ಅನುಷಾ ಆಚಾರ್ಯ, ಸದಸ್ಯರಾದ […]

ಕೇಂದ್ರ ಸರಕಾರದ ಜಿಎಸ್ ಟಿ ರಿಯಾಯಿತಿಯನ್ನು ಜನಸಾಮಾನ್ಯರಿಗೆ ತಲುಪಿಸಿ- ಅಂಡಾರು ದೇವಿಪ್ರಸಾದ್ ಶೆಟ್ಟಿ

ಉಡುಪಿ: ವೈಯಕ್ತಿಕ ವೈದ್ಯಕೀಯ ವಿಮೆ ಹಾಗೂ ಜೀವ ವಿಮೆಯನ್ನು ಸೊನ್ನೆ ಮಾಡಿ ಶೇ. 99ರಷ್ಟು ದಿನ ಬಳಕೆಯ ವಸ್ತುಗಳನ್ನು ಶೇ. 5ರ ವ್ಯಾಪ್ತಿಗೆ ತಂದು ಶೇ. 98ರ ವ್ಯಾಪ್ತಿಯಲ್ಲಿ ಇದ್ದ ಐಷಾರಾಮಿ ವಸ್ತುಗಳನ್ನು ಕೂಡ ಶೇ. 18ರ ಮಿತಿಗೆ ತಂದಿರುವ ಕ್ರಮವನ್ನು ವಾಣಿಜ್ಯ ಮತ್ತು ಕೈಗಾರಿಕೆಗಳು ಮುಕ್ತ ಕಂಠದಿಂದ ಸ್ವಾಗತಿಸುತ್ತೇವೆ. ಇದರಿಂದ ಉತ್ಪಾದನಾ ರಂಗಕ್ಕೆ ಹೊಸ ಪ್ರೋತ್ಸಾಹ ಬರುತ್ತಿದ್ದು, ದೇಶಿಯ ವಸ್ತುಗಳು ಜನ ಸಾಮಾನ್ಯರಿಗೆ ಕೈಗೆಟಕುವ ದರಗಳಲ್ಲಿ ದೊರಕಲಿದೆ. ಉತ್ಪಾದಕರು ಸರಕಾರ ನೀಡಿದ ರಿಯಾಯಿತಿಯನ್ನು ಜನ ಸಾಮಾನ್ಯರಿಗೆ […]

ಉಡುಪಿ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ

ಉಡುಪಿ: ಪ್ರವಾದಿ ಮುಹಮ್ಮದ್ ಅವರ ಜನ್ಮದಿನ ಅಂಗವಾಗಿ ಈದ್ ಮಿಲಾದ್(ಮಿಲಾದುನ್ನಬಿ)ಯನ್ನು ಜಿಲ್ಲೆಯಾದ್ಯಂತ ಶುಕ್ರವಾರ ಆಚರಿಸಲಾಯಿತು. ಶುಕ್ರವಾರ ಮುಂಜಾನೆ ಹೆಚ್ಚಿನ ಮಸೀದಿಗಳಲ್ಲಿ ಮೌಲೂದ್ ಪಾರಾಯಣ, ಪ್ರವಚನಗಳ ಮೂಲಕ ಪ್ರವಾದಿಯವರ ಸಂದೇಶ ವನ್ನು ನೀಡಲಾಯಿತು. ಬೆಳಿಗ್ಗೆ ಮಸೀದಿ, ಮದ್ರಸಾಗಳಲ್ಲಿ ಪ್ರವಾದಿ ಜೀವನದ ಸಂದೇಶ ನೀಡಲಾಯಿತು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಮುಸಲ್ಮಾನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಸಿಹಿ ತಿಂಡಿ ಹಂಚಿ, ಪಾನೀಯ ವಿತರಿಸಲಾಯಿತು. ಮಸೀದಿ, ಮದ್ರ ಸಾಗಳಲ್ಲಿ ತುಪ್ಪದೂಟ, ರೊಟ್ಟಿಯೊಂದಿಗೆ ಮಾಂಸದ ಪದಾರ್ಥ ತಯಾರಿಸಿ ಹಂಚಲಾಯಿತು. ಕೆಲವೆಡೆ ಹಿಂದೂ, ಮುಸ್ಲಿಂ, ಕ್ರೈಸ್ತರ […]

ಸೆ. 6, 7 ರಂದು ಉಡುಪಿಯಲ್ಲಿ “ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ”

ಉಡುಪಿ: ಬುಡೋಕಾನ್ ಕರಾಟೆ ಇಂಟರ್ ನ್ಯಾಷನಲ್ ಅಧ್ಯಕ್ಷ ಹಾಗೂ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ನ ಸಂಸ್ಥಾಪಕ ಹನ್ಸಿ ಪ್ರವೀಣ್ ಕುಮಾರ್ ಅವರ ನೆನಪಿನ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯು ಇದೇ ಸೆ. 6 ಮತ್ತು 7 ರಂದು ಉಡುಪಿಯ ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆಯಲಿದೆ ಎಂದು ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ಸಂಸ್ಥೆಯ ಉಪ ಮುಖ್ಯಶಿಕ್ಷಕ ಎಂ. ಸುರೇಶ್ ತಿಳಿಸಿದರು‌. ಈ‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ […]