ಮಂಗಳೂರು:ಯುನಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಝುರಿಯನ್ ಕ್ಯಾಥ್‌ಲ್ಯಾಬ್ ಉದ್ಘಾಟನೆ

ಮಂಗಳೂರು : ಯುನಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಝುರಿಯನ್ ಕ್ಯಾಥ್‌ಲ್ಯಾಬ್ ವರ್ಶನ್ 3.0 ಅನ್ನು ಆರಂಭಿಸಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ವಿಶ್ವದರ್ಜೆಯ ಚಿಕಿತ್ಸೆ ಮಂಗಳೂರಿನ ಜನರಿಗೆ ಯುನಿಟಿ ಆಸ್ಪತ್ರೆಯಲ್ಲಿ ದೊರೆಯಲಿದೆ. ಹೃದಯ, ನರ ಹಾಗೂ ಇತರ ರೇಡಿಯಾಲಜಿ ಚಿಕಿತ್ಸೆಗಳಿಗೆ ಈ ಹೊಸ ಕ್ಯಾಥ್‌ಲ್ಯಾಬ್ ಸಹಕಾರಿಯಾಗಲಿದೆ. ಕ್ಯಾಥ್‌ಲ್ಯಾಬ್ ವೈಶಿಷ್ಟ್ಯಗಳು:- ಸುಧಾರಿತ ಚಿತ್ರಣ ಮತ್ತು ನಿಖರತೆ : ಹೃದಯ ಹಾಗೂ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಉತ್ತಮ ಗುಣಮಟ್ಟದ ಚಿತ್ರಣ ಒದಗಿಸುವುದರಿಂದ ವೈದ್ಯರಿಗೆ ಹೆಚ್ಚು ನಿಖರವಾದ ಚಿಕಿತ್ಸೆ […]
ಅಪ್ರಾಪ್ತ ಬಾಲಕಿ ಜೊತೆಗೆ ಮದುವೆ: ಗ್ರಾ.ಪಂ ಅಧ್ಯಕ್ಷನ ವಿರುದ್ಧ POCSO ಪ್ರಕರಣ ದಾಖಲು!

ಬೆಳಗಾವಿ: ಅಪ್ರಾಪ್ತ 15 ವರ್ಷದ ಬಾಲಕಿ ಜೊತೆ ಮದುವೆಯಾದ ಆರೋಪದ ಮೇರೆಗೆ ಬೆಳಗಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ POCSO ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಸ್ಸಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಭೀಮಶಿ ಕಾಳಿಮನಿ ಎಂಬಾತನ ವಿರುದ್ಧ 15 ವರ್ಷದ ಬಾಲಕಿಯನ್ನು ವಿವಾಹವಾದ ಆರೋಪ ಹೊರಿಸಲಾಗಿದೆ. ನವೆಂಬರ್ 2023 ರಲ್ಲಿ ನಡೆದ ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಕಾಳಿಮಣಿ ನವೆಂಬರ್ 5, 2023 ರಂದು ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದ. […]
ಉಡುಪಿ: ಮಗನಿಗೆ ಸರಿಯಾದ ಉದ್ಯೋಗ ಇಲ್ಲದ ಚಿಂತೆಯಲ್ಲಿ ತಾಯಿ ವಿಷ ಸೇವಿಸಿ ಆತ್ಮಹತ್ಯೆ

ಉಡುಪಿ: ಮಗನಿಗೆ ಸರಿಯಾದ ಉದ್ಯೋಗ ಇಲ್ಲದ ಚಿಂತೆಯಲ್ಲಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಭಾಸ್ಕರ ಎಂಬವರ ಪತ್ನಿ ಲತಾ(53) ಎಂದು ಗುರುತಿಸಲಾಗಿದೆ. ಆ.8ರಂದು ಥಾಣೆಯ ಮನೆಯಿಂದ ಇವರು ನಾಪತ್ತೆಯಾಗಿದ್ದು, ಈ ಬಗ್ಗೆ ಮುಂಬಯಿ ವೊಡವುಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ.12ರಂದು ಇವರು ವಿಷ ಸೇವಿಸಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ಪತಿಗೆ ಮಾಹಿತಿ ಬಂದಿದ್ದು, ಆ.30ರಂದು ಇವರು ಚಿಕಿತ್ಸೆ ಫಲಕಾರಿಯಾಗದೆ […]
Instagram ನಲ್ಲಿ ವಿದ್ಯಾರ್ಥಿನಿಯ ಪರಿಚಯ ಮಾಡಿಕೊಂಡು ಅತ್ಯಾಚಾರ ಎಸಗಿ ವೀಡಿಯೊ ಹರಿಬಿಟ್ಟ ಪ್ರಕರಣ; ಏಳು ಮಂದಿಯ ಬಂಧನ

ಮಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಸಾಮಾಜಿಕ ಜಾಲತಾಣ Instagram ನಲ್ಲಿ ಪರಿಚಯ ಮಾಡಿಕೊಂಡು, ಅತ್ಯಾಚಾರ ಎಸಗಿ ವೀಡಿಯೊ ಮಾಡಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾರ್ತಿಕ್, ರಾಕೇಶ್ ಸಲ್ಡಾನ, ಜೀವನ್, ಸಂದೀಪ್, ರಕ್ಷಿತ್, ಶ್ರವಣ್, ಸುರೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. Instagramನಲ್ಲಿ ಪರಿಚಯ:ಗುರುಪುರ ಕೈಕಂಬದ ಕಿನ್ನಿಕಂಬಳ ಬಳಿಯ ಕಾಲೇಜೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಎರಡು ತಿಂಗಳ ಹಿಂದೆ Instagram ನಲ್ಲಿ ಕಾರ್ತಿಕ್ ಎಂಬಾತ ಪರಿಚಯವಾಗಿದ್ದ. Instagramನಲ್ಲಿ ಮಾತನಾಡುತ್ತಿದ್ದ […]
ಈಜು ಸ್ಪರ್ಧೆ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿಭಾಗೀಯ ಮಟ್ಟಕ್ಕೆ ಆಯ್ಕೆ.

ಕುಂದಾಪುರ: ಅಜ್ಜರಕಾಡಿ ನಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ದ ವಿದ್ಯಾರ್ಥಿ ರೋಹಿತ್ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಈಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.