ಉಡುಪಿ: ಭಿಕ್ಷಾಟನೆ ನಿರತ ಅಪ್ರಾಪ್ತ ಬಾಲಕರ ರಕ್ಷಣೆ

ಉಡುಪಿ: ಭಿಕ್ಷಾಟನೆಯಲ್ಲಿ ನಿರತರಾಗಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ನಗರದ ಸಿಟಿ ಸೆಂಟರ್ ಮಾಲ್ ಬಳಿ ರಕ್ಷಿಸಿರುವ ಘಟನೆ ನಡೆದಿದೆ. ಕಾರ್ಯಾಚರಣೆಯಲ್ಲಿ ಮಕ್ಕಳ ಸಹಾಯವಾಣಿ 1098 ಕೇಸ್ ವರ್ಕರ್ ಲಕ್ಷ್ಮೀಕಾಂತ್, ಸೌಮ್ಯ, ರೈಲ್ವೆ ಚೈಲ್ಡ್ ಹೆಲ್ತ್ ಡೆಸ್ಕ್ ಸಿಬ್ಬಂದಿ ವಿಶಾಲ್, ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಭಾಗಿಯಾಗಿದ್ದರು. ರಕ್ಷಿಸಲ್ಪಟ್ಟ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮೌಖಿಕ ಆದೇಶದ ಮೆರೆಗೆ, ದೊಡ್ಡಣಗುಡ್ಡೆಯ ಬಾಲಕರ ಬಾಲ ಮಂದಿರದಲ್ಲಿ ತಾತ್ಕಾಲಿಕ ಪುರ್ನವಸತಿ ಕಲ್ಪಿಸಲಾಗಿದೆ.
ಉಡುಪಿ ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು,ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಉಡುಪಿ, ಸೆ. 1: ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ವೃದ್ಧಿ ಸಾಧ್ಯ. ಇಂದು ಕ್ರೀಡಾ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಕ್ರೀಡಾಕ್ಷೇತ್ರದಲ್ಲಿ ಇದೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು.
ಬಂಟಕಲ್:ಯುಗ್ಮ ಟೆಕ್‌ಫೆಸ್ಟ್ 1.0 ರಾಜ್ಯ ಮಟ್ಟದ ತಾಂತ್ರಿಕ ಸಮ್ಮೇಳನದಲ್ಲಿ ಎಸ್ ಎಮ್ ವಿ ಐ ಟಿ ಎಮ್ ವಿದ್ಯಾರ್ಥಿಗಳ ಸಾಧನೆ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಆಗಸ್ಟ್ 21 ರಿಂದ 23ರ ವರೆಗೆ ಶಿವಮೊಗ್ಗ ಜಿಲ್ಲೆಯ ನವಳೆಯ ಜವಾಹರಲಾಲ್ ನೆಹರು ನ್ಯೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದತಾಂತ್ರಿಕ ಸಮ್ಮೇಳನ ಯುಗ್ಮ ಟೆಕ್‌ಫೆಸ್ಟ್ 1.0 ನ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿರುತ್ತಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದ ಈ ತಾಂತ್ರಿಕ ಉತ್ಸವವು, ಸೃಜನಶೀಲತೆ ಹಾಗೂ ತಾಂತ್ರಿಕತೆಯ ಪ್ರದರ್ಶನಕ್ಕೆ ಒತ್ತಾಸೆಯಾದ ವೇದಿಕೆಯಾಗಿದ್ದು, ಎಸ್. ಎಮ್. ವಿ. ಟಿ. ಎಮ್ ನ ವಿದ್ಯಾರ್ಥಿಗಳು […]
ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ ‘ಸಾಧನಾ ಪ್ರಶಸ್ತಿ’

ಮಂಗಳೂರು: ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. 2024-2025ನೇ ಸಾಲಿನಲ್ಲಿ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಸಹಕಾರಿ ಸಂಸ್ಥೆ ಎಂದು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಮಹಾಸಭೆಯಂದು ಶನಿವಾರ ‘ಸಾಧನಾ ಪ್ರಶಸ್ತಿ’ ಪಡೆಯಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಂಸ್ಥೆಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಮತ್ತು ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಅವರಿಗೆ ಪ್ರಶಸ್ತಿ […]
ವಿದ್ವತ್ಪೂರ್ವ ಸಂಗೀತದಲ್ಲಿ ಪ್ರಸನ್ನಾ ಹೆಚ್. ರಾಜ್ಯಕ್ಕೆ ತೃತೀಯ ಸ್ಥಾನ

ಉಡುಪಿ: ಕು. ಪ್ರಸನ್ನಾ ಹೆಚ್ ಇವರು 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ವಿದ್ವತ್ ಪೂರ್ವ (Pre_Vidwat) ರಾಜ್ಯ ಮಟ್ಟದ ಸಂಗೀತ ಹಾಡುಗಾರಿಕೆ ಪರೀಕ್ಷೆ ಯಲ್ಲಿ ಮೂರನೇ ಸ್ಥಾನ (Rank) ಪಡೆದಿದ್ದಾರೆ. ಈಕೆ ಚಿಟ್ಪಾಡಿಯ ಹರಿಕೃಷ್ಣ ಆಚಾರ್ಯ ವಿದ್ಯಾ ದಂಪತಿ ಪುತ್ರಿ. ಇವರು ಸಂಗೀತ ಶಿಕ್ಷಕಿ ವಿದುಷಿ ವಿನುತಾ ಆಚಾರ್ಯ ಹಾಗು ವಿದುಷಿ ಭಾರ್ಗವಿ ಹೆಚ್,ಚೆನ್ನೈ ಇವರ ಶಿಷ್ಯೆ.