ಗುಣಮಟ್ಟ ಕುಸಿತ: 8 ಮಾತ್ರೆಗಳನ್ನು ಉಪಯೋಗಿಸದಿರಲು ಆಹಾರ ಇಲಾಖೆ ಸೂಚನೆ!

ಬೆಂಗಳೂರು: ಉತ್ತಮ ಗುಣಮಟ್ಟವಲ್ಲವೆಂದು 8 ಮಾತ್ರೆಗಳನ್ನು(ಟ್ಯಾಬ್ಲೆಟ್ಸ್) ಉಪಯೋಗಿಸಬಾರದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಶನಿವಾರದಂದು ಪ್ರಕಟನೆ ಹೊರಡಿಸಿದೆ. ಹೆಲ್ತಿ ಲೈಫ್ ಫಾರ್ಮಾ ಪ್ರೈ. ಲಿಮಿಟೆಡ್‍ನ ಕ್ಯಾಲ್ಸಿಯಂ ಅಂಡ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ, ಭವ್ಯ ಇಂಡೇಸ್ಟ್ರೀಸ್‍ನ ಆಕ್ಟಿವ್ ಅಲೂವೆರಾ ಮತ್ತು ನಿಮ್ ಸೋಪ್, ರಾಜ್‍ದೀಪ್ ಫಾರ್ಮಸ್ಯೂಟಿಕಲ್ಸ್‌ ಲೈಫೋಜೆಸಿಕ್, ಮೈಕ್ರೋ ಫಾರ್‌ ಮುಲೇಷನ್ಸ್‌ನ ಅಮೋಕ್ಸಿಲಿನ್ ಮತ್ತು ಪೋಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ, ಫಾರ್ಮಾಕೇರ್‌ ನ ಮೆಗ್ನೀಷಿಯಂ ಸಲ್ಫೇಟ್ ಪಾಸ್ಫೇಟ್ ಬಿಪಿ, ಡ್ಯಾಫೋಹಿಲ್ಸ್ ಲ್ಯಾಬೋರೇಟರಿಸ್ ಪ್ರೈ. […]

ಉಡುಪಿ: ಎಸ್‌ಬಿಐ ಮಲ್ಪೆ ಶಾಖೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷ ರೂ. ವಂಚನೆ; ಮ್ಯಾನೇಜರ್‌ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

ಮಲ್ಪೆ: ಭಾರತೀಯ ಸ್ಟೇಟ್‌ ಬ್ಯಾಂಕಿನ ಮಲ್ಪೆ ಶಾಖೆಯ ಮ್ಯಾನೇಜರ್‌ ಸೇರಿದಂತೆ ಇತರರು ನಕಲಿ ದಾಖಲೆಗಳನ್ನು ಸೃಷ್ಠಿಸಿ ಬ್ಯಾಂಕಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. ಹೌಸಿಂಗ್ ಫೈನಾನ್ಸ್ ಕಂಪೆನಿಯೊಂದರಿಂದ ಬಂದ ಇಮೇಲ್ ಸಂದೇಶದಂತೆ ಬ್ಯಾಂಕಿನ ಮಲ್ಪೆ ಶಾಖೆಯಿಂದ ಸಮುದ ಸುವರ್ಣ ನಂತೂರು , ಶರ್ಮಿಳಾ ಎಸ್.‌ ಮುಳೂರು ಸುಶಾಂತ್‌ ತಿಂಗಳಾಯ, ಕೋಡಿ , ಎಂ.ರಮಾನಾಥ್‌ ಬೊಂದೆಲ್‌ ಮಂಗಳೂರು, ಸದಾನಂದ ಜಿ. ರಾವ್‌ ಕುಂಜಾಲು ಎಂಬ ಖಾತೆದಾರರಿಗೆ ಒಟ್ಟು 73,00,000 ರೂ. ಹಣ ವರ್ಗಾವಣೆ ಯಾಗಿರುವ ಬಗ್ಗೆ ಆ.25ರಂದು […]

ಸಂಸ್ಕಾರ, ಸಂಸ್ಕೃತಿಯ ಹರಿಕಾರರಾಗಲು ನೃತ್ಯ ಆಶ್ರಯ ತಾಣ: ಜನಾರ್ದನ್ ಕೊಡವೂರು

ಉಡುಪಿ: ಭರತ ನಾಟ್ಯ ಕಲೆ ದೇಶದ ಪ್ರಾಚೀನ ಕಲೆಗಳಲ್ಲಿ ಒಂದಾಗಿದ್ದು, ಇದಕ್ಕೆ ಮಕ್ಕಳು ಹೆಚ್ಚಿನ ಒತ್ತು ಕೊಡಬೇಕು. ಅಲ್ಲದೆ ಜೀವನದಲ್ಲಿ ಸಂಸ್ಕಾರವಂತರಾಗಲು ಇದೊಂದು ಆಶ್ರಯ ತಾಣ. ಹಾಗಾಗಿ ಮಕ್ಕಳು, ಯುವಕರು ನೃತ್ಯದಂತಹ ಲಲಿತ ಕಲೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿ ಕೊಳ್ಳಬೇಕೆಂದು ಪತ್ರಕರ್ತ ಜನಾರ್ದನ್ ಕೊಡವೂರು ಹೇಳಿದರು. ಉಡುಪಿಯ ಐ ವೈ ಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆ ಆಯೋಜಿಸಿದ್ದ ಅದಿತಿ ಜಿ ನಾಯಕ್ ರವರ ನೃತ್ಯಾರ್ಪ ಣೆಯ ಸಭಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ […]

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಎಚ್ಚರಿಕೆ.

ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಪ್ರಮುಖವಾಗಿ ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಮೋಡಕವಿದ ವಾತಾವರಣ ಮುಂದುವರೆಯಲಿದೆ ಎಂದು ಹೇಳಿದೆ. ಬೆಂಗಳೂರು ನಗರದಲ್ಲಿ ಮುಂದಿನ ಐದು ದಿನಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡ ಮುಂದಿನ ಐದು ದಿನಗಳ ಕಾಲ ಮಳೆ ಮುನ್ಸೂಚನೆ ನೀಡಲಾಗಿದೆ. ಉಭಯ ಜಿಲ್ಲೆಗಳಿಗೆ […]

ಜನ ನನ್ನನ್ನು ಬಂಡೆ ಎಂದು ಕರೆಯುತ್ತಾರೆ, ಹೀಗಾಗಿ ನೀವು ನನ್ನನ್ನು ಯಾವ ರೀತಿ ಬೇಕಾದರೂ ಬಳಸಿಕೊಳ್ಳಿ: ಡಿಸಿಎಂ ಡಿ.ಕೆ. ಶಿವಕುಮಾರ್

ಉಡುಪಿ: ಧರ್ಮ, ಪೂಜೆ, ಭಕ್ತಿಗಳೆಲ್ಲವೂ ಪ್ರದರ್ಶನದ ವಸ್ತುಗಳಲ್ಲ. ಆಚಾರ-ವಿಚಾರಗಳನ್ನು ಎಲ್ಲರೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ನಾವು ಧರ್ಮವನ್ನು ಕಾಯಬೇಕು, ಧರ್ಮವನ್ನು ಉಳಿಸಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ಇಂದು ಸಂಜೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಪರ್ಯಾಯ ಶ್ರೀಗಳಾದ ಶ್ರೀಸುಗುಣೇಂದ್ರತೀರ್ಥರ 64ನೇಯ ಜನ್ಮ ನಕ್ಷತ್ರೋತ್ಸವದ ಸಂಭ್ರಮ ಹಾಗೂ ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಜಗದ್ಗುರು ಶ್ರೀಮಧ್ವಾಚಾರ್ಯರ ಸ್ಮರಣಾರ್ಥ ಅಂಚೆ ಇಲಾಖೆ ಹೊರತಂದ ಅಂಚೆ ಚೀಟಿಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು […]