ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘ ಸಾಧನೆ: ಸತತ 12ನೇ ಬಾರಿ ಸಾಧನ ಪ್ರಶಸ್ತಿ.

ಮಲ್ಪೆ: ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘವು 2024-25 ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಮಾಡಿದ ಸಾಧನೆಗೆ ಸತತ 12ನೇ ಬಾರಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಾಧನಾ ಪ್ರಶಸ್ತಿ ದೊರಕಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಹಾಸಭೆಯಲ್ಲಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ಸಂಘದ ಅಧ್ಯಕ್ಷ ಕೆ. ನಾರಾಯಣ ಬಲ್ಲಾಳ್ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ ಜತ್ತನ್ ಅವರಿಗೆ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. […]

ಸ್ಥಿರಾಸ್ತಿ ನೋಂದಣಿ ಶೇ.2 ರಷ್ಟು ದುಬಾರಿ: ರಾಜ್ಯ ಸರ್ಕಾರ

ಬೆಂಗಳೂರು: ಸ್ಥಿರಾಸ್ತಿಗಳ ಮೇಲಿನ ವ್ಯವಹಾರಗಳ ದಸ್ತಾವೇಜುಗಳ ನೋಂದಣಿ ಶುಲ್ಕವನ್ನು ಶೇ 1ರಿಂದ ಶೇ 2ಕ್ಕೆ ಏರಿಸಿ ರಾಜ್ಯ ಸರ್ಕಾರವು ಆದೇಶಿಸಿದೆ.ಆಗಸ್ಟ್‌ 31 ರಿಂದಲೇ ಇದು ಜಾರಿಯಾಗಲಿದ್ದು, ಸಾರ್ವಜನಿಕರು ಆಸ್ತಿ ನೋಂದಣಿಗೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ.ಈ ಮೊದಲು ಸ್ಥಿರಾಸ್ತಿ ನೋಂದಣಿ ವೇಳೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ 5ರಷ್ಟು ಮುದ್ರಾಂಕ ಶುಲ್ಕ, ಶೇ 0.5ರಷ್ಟು ಸೆಸ್‌, ಶೇ 0.1ರಷ್ಟು ಸರ್ಚಾರ್ಜ್ ಮತ್ತು ಶೇ1ರಷ್ಟು ನೋಂದಣಿ ಶುಲ್ಕ ವಿಧಿಸಲಾಗುತ್ತಿತ್ತು. ಒಟ್ಟಾರೆ ಆಸ್ತಿ ನೋಂದಣಿ ವೇಳೆ, ಅದರ ಮಾರ್ಗಸೂಚಿ ಮೌಲ್ಯದ ಶೇ […]

ಜಿಎಸ್ ಟಿ ಹಂತ ಕಡಿಮೆ ಮಾಡಿದರೆ ರಾಜ್ಯಕ್ಕೇ ಕೋಟಿಗಟ್ಟಲೇ ನಷ್ಟ: ಸಿದ್ದರಾಮಯ್ಯ

ಮೈಸೂರು: ‘ಕೇಂದ್ರ ಸರ್ಕಾರವು ‘ಸರಕು ಮತ್ತು ಸೇವಾ ತೆರಿಗೆ’ (ಜಿಎಸ್‌ಟಿ) ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದರಿಂದ ರಾಜ್ಯಕ್ಕೆ ಪ್ರತಿ ವರ್ಷ ₹15ಸಾವಿರ ಕೋಟಿ ನಷ್ಟ ಉಂಟಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತರ್ಕಬದ್ಧಗೊಳಿಸುವುದನ್ನು ಸ್ವಾಗತಿಸುತ್ತೇವೆ. ಆದರೆ, ನಮ್ಮ ವರಮಾನ ಸಂರಕ್ಷಿಸಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕಾಗಿ ಎಂಟು ರಾಜ್ಯಗಳು ಸೇರಿ ಚರ್ಚಿಸಿದ್ದೇವೆ. ₹ 15ಸಾವಿರ ಕೋಟಿ ನಷ್ಟವೆಂದರೆ ಅದೇನೂ ಕಡಿಮೆಯಲ್ಲ. ದೊಡ್ಡ ಮೊತ್ತವೇ’ ಎಂದರು. ‘ಜಿಎಸ್‌ಟಿ ಆರಂಭವಾದ ಮೇಲೆ ಐದು […]

ಉಡುಪಿ: ಹಿರಿಯ ಕೃಷಿಕ ರೋಬರ್ಟ್ ಫೆರ್ನಾಂಡಿಸ್ ನಿಧನ

ಉಡುಪಿ: ಹಿರಿಯ ಕೃಷಿಕರು, ಮಂಡಲ ಪಂಚಾಯತ್ ಸದಸ್ಯರಾಗಿದ್ದ ಉದ್ಯಾವರದ ಸಂಪಿಗೆ ನಗರ ನಿವಾಸಿ ರೋಬರ್ಟ್‌ ಫೆರ್ನಾಡಿಸ್ (86) ಅ.30ರಂದು ಅಲ್ಪ ಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಉಡುಪಿ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ರೋಯ್ಸ್ ಫೆರ್ನಾಂಡಿಸ್‌ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಉಡುಪಿ: ನಾರಾಯಣ ಗುರುಗಳಿಗೆ ಅಗೌರವ ತೋರಿದ ತಪ್ಪಿತಸ್ಥರ ಮೇಲೆ ಕೂಡಲೇ ಕಾನೂನು ಕ್ರಮ; ರಮೇಶ್‌ ಕಾಂಚನ್ ಆಗ್ರಹ

ಉಡುಪಿ: ಉಡುಪಿ ನಗರಸಭೆ ಯಿಂದ ಕಾನೂನುಬದ್ಧವಾಗಿ ನಿರ್ಮಾಣಗೊಂಡಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ತೆರವುಗೊಳಿಸಿ ಪಾಳುಬಿದ್ದರುವ ಜಾಗದ ಪೊದೆಗಳ ಮಧ್ಯೆ ಬಿಸಾಡಿರುವುದು ಅತ್ಯಂತ ಖಂಡನೀಯ. ಶೋಷಿತ ವರ್ಗದವರಿಗೆ ಗೌರವಯುತ ಬದುಕಿನ ದಾರಿ ತೋರಿದ ಮಾರ್ಗದರ್ಶಿ, ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳಿಗೆ ಅಗೌರವ ತೋರಿದ ತಪ್ಪಿತಸ್ಥರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದರು. ಹಾಗೆಯೇ ನಾರಾಯಣ ಗುರುಗಳ ವೃತವನ್ನು ತೆರವುಗೊಳಿಸಿರುವುದರ ವಿರುದ್ಧ […]