ಬ್ರಹ್ಮಾವರ: ತಾಯಿ- ಮಗು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ

ಉಡುಪಿ: ತಾಯಿ ಮತ್ತು ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜಾಲು ಹೆರಂಜೆ ಕ್ರಾಸ್ ಬಳಿ ಸಂಭವಿಸಿದೆ. ಮೃತರನ್ನು ತಾಯಿ ಸುಷ್ಮೀತಾ (35) ಹಾಗೂ ಮಗು ಶ್ರೇಷ್ಠ ಎಂದು ಗುರುತಿಸಲಾಗಿದೆ. ಮನೆಯ ಸಿಲಿಂಗ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪತಿ ಕೋರ್ಟ್ ಸಂಬಂಧಿತ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ:ಓಸ್ಕರ್ ಫರ್ನಾಂಡಿಸ್ ರವರ ಸ್ಮರಣಾರ್ಥ:ಸೆ.7ರಂದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ.

ಉಡುಪಿ:ಓಸ್ಕರಣ್ಣನ ಕನಸಿನ ಮತ್ತು ನನಸಿನ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಆಶ್ರಯದಲ್ಲಿಓಸ್ಕರ್ ಫರ್ನಾಂಡಿಸ್‌ರವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ದಿ.7.09.2025 ಭಾನುವಾರದಂದು ಕಾಂಗ್ರೆಸ್ ಭವನ, ನಾಯರಕೆರೆ ಬ್ರಹ್ಮಗಿರಿ, ಉಡುಪಿಯಲ್ಲಿ ಸಮಯ ಬೆಳಿಗ್ಗೆ 8:00 ಗಂಟೆಯಿಂದ ನೋಂದಣಿ ಆರಂಭವಾಗಲಿದೆ. ಸ್ಪರ್ಧೆಗಳ ವಿವರ:1ನೇ ತರಗತಿಯಿಂದ 4ನೇ ತರಗತಿ 5ನೇ ತರಗತಿಯಿಂದ 7ನೇ ತರಗತಿ 8ನೇ ತರಗತಿಯಿಂದ 10ನೇ ತರಗತಿ ನಿಯಾಮವಳಿ : ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9901866998
ಉಡುಪಿ:ನೀವು ಕಂಡಂತೆ ಓಸ್ಕರ್ ಅಣ್ಣ:ರೀಲ್ಸ್ ಮಾಡಿ ಗೆಲ್ಲಿರಿ ಆಕರ್ಷಕ ಉಡುಗೊರೆ.

ಉಡುಪಿ:ಮರೆಯಲಾಗದ ರತ್ನ ನಮ್ಮ ಹೆಮ್ಮೆಯ ಓಸ್ಕರ್ ಅಣ್ಣನ ಪುಣ್ಯ ತಿಥಿಯಂದು ನಮ್ಮ ಕಾರ್ಯಕರ್ತರಿಗೆ ಅವರ ಶಾಶ್ವತ ಸವಿ ನೆನಪಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉಡುಗೊರೆ ಗೆಲ್ಲಿರಿ. ಒಂದು ರೀಲ್ಸ್ 90 ಸೆಕೆಂಡ್ಸ್ ಮೀರದಂತಿರಬೇಕು.ರೀಲ್ಸ್ ಕಳಿಸಲು ಕೊನೆಯ ದಿನಾಂಕ : 07-09-25. ನಿಮ್ಮ ರೀಲ್ಸ್ ಕಳಿಸಬೇಕಾದ ಮೊಬೈಲ್ ಸಂಖ್ಯೆ :+91 76192 13123,+91 98449 04394ಹೆಚ್ಚಿನ ಮಾಹಿತಿಗಾಗಿ :9901866998
ಚಪ್ಪಲಿಯೊಳಗೆ ಅಡಗಿದ್ದ ಹಾವು ಕಚ್ಚಿ ಸಾಫ್ಟ್‌ವೇರ್ ಎಂಜಿನಿಯರ್ ಮೃತ್ಯು!

ಬೆಂಗಳೂರು: ಬನ್ನೇರುಘಟ್ಟದಲ್ಲಿ ಚಪ್ಪಲಿಯೊಳಗೆ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಬನ್ನೇರುಘಟ್ಟದ ರಂಗನಾಥ ಲೇಔಟ್ ನಿವಾಸಿ ಮಂಜು ಪ್ರಕಾಶ್ (41) ಎಂದು ಗುರುತಿಸಲಾಗಿದೆ. ಇವರು ಟಿಸಿಎಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಕಬ್ಬಿನ ಜ್ಯೂಸ್ ಕುಡಿದು ಮಧ್ಯಾಹ್ನ 12.45 ರ ಸುಮಾರಿಗೆ ಕ್ರೋಕ್ಸ್ ಧರಿಸಿ ಮನೆಗೆ ಹಿಂದಿರುಗಿದ್ದರು. ಕೋಣೆಯ ಹೊರಗೆ ತನ್ನ ಕ್ರೋಕ್ಸ್ ತೆಗೆದು ಒಳಗೆ ವಿಶ್ರಾಂತಿ ಪಡೆಯಲು ಹೋದರು. ಕ್ರೋಕ್ಸ್ ಬಳಿ ಸತ್ತ ಹಾವು ಇರುವುದನ್ನು […]
ಸೆ.3ರಂದು ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಉಡುಪಿ: ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (ಯುಎಂಆರ್ ಎ)ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ. 3ರಂದು ಸಂಜೆ 6ಗಂಟೆಗೆ ಅಜ್ಜರಕಾಡಿನ ಟೌನ್ ಹಾಲ್‌ನಲ್ಲಿ ನಡೆಯಲಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಜಿ. ಸುವರ್ಣ ಅವರು, ಎಐಎಂಆರ್ ಎ ಕರ್ನಾಟಕದ ರಾಜ್ಯಾಧ್ಯಕ್ಷ ರವಿಕುಮಾರ್ ಕೆ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ. ಶಂಕರ್, ಸಂಸದ ಕೋಟ […]