ಉಡುಪಿ: ತೀವ್ರ ಆಕ್ರೋಶದ ಬಳಿಕ ಬನ್ನಂಜೆಯಲ್ಲಿ ನಾರಾಯಣಗುರು ವೃತ್ತ ಮರುಸ್ಥಾಪನೆ.

ಉಡುಪಿ: ಉಡುಪಿ ನಗರಸಭೆಯಿಂದ ಅಧಿಕೃತವಾಗಿ ನಿರ್ಮಿಸಲಾಗಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ತೆರವುಗೊಳಿಸಿ ಪಾಳುಬಿದ್ದ ಜಾಗದಲ್ಲಿ ಎಸೆಯಲಾಗಿತ್ತು. ಈ ಬಗ್ಗೆ ವಿವಾದ ಭುಗಿಲೇಳುತ್ತಿದ್ದಂತೆ ಮತ್ತೆ ಅದೇ ಜಾಗದಲ್ಲಿ ಪೊಲೀಸ್ ಇಲಾಖೆ ನಾರಾಯಣಗುರು ವೃತ್ತವನ್ನು ಮರು ಸ್ಥಾಪಿಸಿದೆ.ಶನಿವಾರ ಬನ್ನಂಜೆಯಲ್ಲಿದ್ದ ನಾರಾಯಣಗುರು ವೃತ್ತವನ್ನು ಕಿತ್ತು ಹಾಕಿ, ಪಾಳು ಬಿದ್ದ ಜಾಗದ ಪೊದೆಗಳ ಮಧ್ಯೆ ಬಿಸಾಡಲಾಗಿತ್ತು. ಬಳಿಕ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕವನ್ನು ಹಾಕಲಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ, […]
ಉಡುಪಿ ಜಿಲ್ಲೆಯ ಹೆಸರಾಂತ ಪೈಪ್-ಪ್ಲಾಸ್ಟಿಕ್ ಇಂಡಸ್ಟ್ರಿಯಲ್ಲಿ ಉದ್ಯೋಗವಕಾಶ!

ಉಡುಪಿ ಜಿಲ್ಲೆಯ ಹೆಸರಾಂತ ಪೈಪ್ ಮತ್ತು ಪ್ಲಾಸ್ಟಿಕ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 1.ಅಕೌಂಟ್ಸ್ ಎಕ್ಸಿಕ್ಯೂಟಿವ್ -22.ಬಿಲ್ಲಿಂಗ್ ಕ್ಲರ್ಕ್3.QA ಎಕ್ಸಿಕ್ಯೂಟಿವ್ -24.ಸೇಲ್ಸ್ ಎಕ್ಸಿಕ್ಯೂಟಿವ್ -45.ಪ್ರೊಡಕ್ಷನ್ ಸೂಪರ್ ವೈಸರ್ -26.ಮೆಷಿನ್ ಆಪರೇಟರ್ (ITI)7.ಹೆಲ್ಪರ್ ಆಸಕ್ತರು ಸಂಪರ್ಕಿಸಿ:9071275778, 7975861846
ಮಗನ ಹುಟ್ಟುಹಬ್ಬದ ಗಿಫ್ಟ್ ವಿಚಾರದ ಜಗಳ, ಭೀಕರ ಕೊಲೆಯಲ್ಲಿ ಅಂತ್ಯ!

ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿಯಲ್ಲಿ ಮಗನ ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಕುಟುಂಬದಲ್ಲಿ ಉಡುಗೊರೆಗಳ ವಿಚಾರಕ್ಕೆ ಉಂಟಾದ ಜಗಳ, ಪತ್ನಿ ಮತ್ತು ಅತ್ತೆಯ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಆಗಸ್ಟ್ 30ರಂದು ನಡೆದಿದೆ. ಹತ್ಯೆಯಾದವರನ್ನು ಕುಸುಮ್ ಸಿನ್ಹಾ (63) ಮತ್ತು ಆಕೆಯ ಮಗಳು ಪ್ರಿಯಾ ಸೆಹಗಲ್ (34) ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ 3.50ಕ್ಕೆ ಕೆಎನ್‌ಕೆ ಮಾರ್ಗ ಪೊಲೀಸ್ ಠಾಣೆಗೆ ಒಂದು ಕರೆಬಂದಿತು. ಕೊಲೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಒಳಗೆ ಹೋಗಿ […]
ಬನ್ನಂಜೆ ನಾರಾಯಣಗುರು ವೃತ್ತ ತೆರವು: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಕ್ರೋಶ

ಉಡುಪಿ: ಉಡುಪಿ ನಗರಸಭೆಯಿಂದ ಅಧಿಕೃತವಾಗಿ ನಿರ್ಮಿಸಲಾಗಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕಿತ್ತು ಬಿಸಾಕಿ, ಉಡುಪಿ ನಗರ ಸಂಚಾರಿ ಠಾಣೆಯ ಪಾಳುಬಿದ್ದ ಜಾಗದ ಪೊದೆಗಳ ಮಧ್ಯೆ ಎಸೆಯಲಾಗಿದೆ. ನಾರಾಯಣ ಗುರು ಹೆಸರಿನ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕದ ವೃತ್ತ ರಚಿಸಿದ್ದು, ಇದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ತೋರಿದ ದೊಡ್ಡ ಅಗೌರವ. ಇದನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ತೀವ್ರವಾಗಿ ಖಂಡಿಸಿದೆ.ಸ್ಥಳೀಯಾಡಳಿತ ತಕ್ಷಣ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ […]
ಕರ್ನಾಟಕದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ ನೇಮಕ.

ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ (ಡಿಜಿ-ಐಜಿಪಿ) ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರನ್ನು ರಾಜ್ಯ ಸರಕಾರ ನೇಮಿಸಿದೆ. ಡಾ.ಎಂ.ಎ.ಸಲೀಂ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೆ, ಅವರನ್ನು ಡಿಜಿ-ಐಜಿಪಿಯಾಗಿ ನೇಮಿಸಿ ಶನಿವಾರ(ಆ.30)ದಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಕೆ.ವಿ.ಅಶೋಕ್ ಅಧಿಸೂಚನೆ ಹೊರಡಿಸಿದ್ದಾರೆ. ಅಪರಾಧ ತನಿಖಾ ವಿಭಾಗ(ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಡಿಜಿಪಿಯಾಗಿರುವ ಡಾ.ಎಂ.ಎ.ಸಲೀಂ […]