ಕೆನಡಾ ನೇಮಿಸಿತು ಭಾರತಕ್ಕೆ ಹೊಸ ರಾಯಭಾರಿ

ಕೆನಡಾ ಭಾರತಕ್ಕೆ ತನ್ನ ಹೊಸ ಹೈಕಮಿಷನ‌ರ್ ಆಗಿ ಹಿರಿಯ ರಾಜತಾಂತ್ರಿಕ ಕ್ರಿಸ್ಟೋಫ‌ರ್ ಕೂಟರ್‌ ಅವರನ್ನು ನೇಮಿಸಿದೆ. ಭಾರತವು ದಿನೇಶ್ ಕೆ ಪಟ್ನಾಯಕ್ ಅವರನ್ನು ಕೆನಡಾಕ್ಕೆ ಹೊಸ ಹೈಕಮಿಷನ‌ರ್ ಆಗಿ ನೇಮಿಸಿದ ನಂತರ ತನ್ನ ಹೊಸ ಹೈಕಮಿಷನ‌ರ್ ಅನ್ನು ಭಾರತಕ್ಕೆ ನೇಮಿಸಿದೆ. “ಎರಡೂ ದೇಶಗಳಲ್ಲಿನ ನಾಗರಿಕರು ಮತ್ತು ವ್ಯವಹಾರಗಳಿಗೆ ಅಗತ್ಯವಾದ ರಾಜತಾಂತ್ರಿಕ ಸೇವೆಗಳನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಈ ನೇಮಕಾತಿಗಳು ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಕೆನಡಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 35 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಅನುಭವಿ […]

ಒಟ್ಟು 14,670 ಸಹಕಾರ ಸಂಘಗಳು ನಷ್ಟದಲ್ಲಿ: ಪುನಶ್ಚೇತನಕ್ಕೆ ಸಿಎಂ ಆದೇಶ

ಬೆಂಗಳೂರು: ಸಾಲ ವಸೂಲಾತಿ ಕೆಲಸ ಸಮರ್ಪಕವಾಗಿ ನಡೆಯದೇ 2,200 ಹಾಲು ಉತ್ಪಾದಕ ಸಂಘಗಳೂ ಸೇರಿ ರಾಜ್ಯದಲ್ಲಿ 14,670 ಸಹಕಾರ ಸಂಘಗಳು ನಷ್ಟದಲ್ಲಿವೆ.ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಗುರುವಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕುರಿತು ಮಾಹಿತಿ ನೀಡಿದರು. *28,516 ಸಹಕಾರ ಸಂಘಗಳು ಲಾಭದಲ್ಲಿವೆ. ಅವುಗಳ ಅರ್ಧದಷ್ಟು ಸಂಘಗಳು ನಷ್ಟದಲ್ಲಿವೆ. ಸಾಲ ವಸೂಲಾತಿಯಲ್ಲಿನ ಸಮಸ್ಯೆಗಳೇ ಈ ನಷ್ಟಕ್ಕೆ ಕಾರಣ. ವಸೂಲಾತಿಗೆ ಕೈಗೊಂಡ ಕ್ರಮಗಳ ಬಗ್ಗೆ ತ್ವರಿತವಾಗಿ ಪರಿಶೀಲನೆ ನಡೆಸಬೇಕು. ಹಾಲು ಉತ್ಪಾದಕ ಸಹಕಾರ ಸಂಘಗಳ ವೆಚ್ಚದ […]

ಗಂಡನ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಐಟಿ ಉದ್ಯೋಗಿ!

ಬೆಂಗಳೂರು: ಬೆಂಗಳೂರಿನ ಸುದ್ಧಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ (27) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 2022ರ ಡಿಸೆಂಬರ್‌ನಲ್ಲಿ ಪ್ರವೀಣ್‌ನನ್ನು ವಿವಾಹವಾಗಿದ್ದರು. ಮದುವೆಯ ನಂತರ ಶಿಲ್ಪಾ, ಪತಿ ಪ್ರವೀಣ್‌ ಜತೆ ಬಿಟಿಎಂ ಲೇಔಟ್‌ ಒಂದನೇ ಹಂತದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಒಂದು ಮಗು ಸಹ ಆಗಿತ್ತು. ಜೊತೆಗೆ ಇನ್ನೊಂದು ಮಗುವಿಗೆ ಗರ್ಭಿಣಿ ಆಗಿದ್ದರು.ಸಾಫ್ಟ್‌ವೇರ್‌ ಕಂಪನಿಯಲ್ಲಿಎಂಜಿನಿಯರ್‌ ಆಗಿದ್ದ ಪ್ರವೀಣ್‌ 2023ರಲ್ಲಿ ಕೆಲಸ ಬಿಟ್ಟು […]

ಮಂಗಳೂರು: ಬಾಲಕಿಗೆ ಅತ್ಯಾಚಾರ ಎಸಗಿದ ಪ್ರಕರಣ; ಆರೋಪಿಯ ಬಂಧನ

ಮಂಗಳೂರು: ಬಾಲಕಿಯನ್ನು ಹಲವು ಬಾರಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ದ.ಕ.ಜಿಲ್ಲಾ ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ಸೆ.9ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪುತೂರು ನಗರ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಾಲಕಿಯು 2025ರ ಮಾರ್ಚ್‌ನಿಂದ ಆರೋಪಿಯ ಜೊತೆ ತನ್ನ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಒಂದು ದಿನ ಬಾಲಕಿಯನ್ನು ಭೇಟಿಯಾಗಲು ರೈಲ್ವೆ ಟ್ರಾಕ್ ಬಳಿ ಗುಡ್ಡ ಪ್ರದೇಶಕ್ಕೆ ಬರುವಂತೆ ಆರೋಪಿ ತಿಳಿಸಿದ್ದು, ಅದರಂತೆ ಬಾಲಕಿ ತೆರಳಿದಾಗ ಆತ ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ. […]

ಉಡುಪಿ: ಬ್ರಹ್ಮಗಿರಿ ಸಾಯಿ ರಾಧಾ ಪ್ರೈಡ್ ಅಸೋಸಿಯೇಷನ್ ಅಧ್ಯಕ್ಷರಾಗಿ ದಿನಕರ್ ಅಮೀನ್ ಆಯ್ಕೆ.

ಉಡುಪಿ: 441 ಫ್ಲಾಟ್ ಗಳನ್ನು ಹೊಂದಿರುವ ಅತೀ ದೊಡ್ಡ ಬಹುಅಂತಸ್ತಿನ ಗೃಹ ಸಂಕೀರ್ಣ ‘ಬ್ರಹ್ಮಗಿರಿ ಸಾಯಿ ರಾಧಾ ಪ್ರೈಡ್ ಅಪಾರ್ಟೆಂಟ್ ಓನರ್ಸ್ ಅಸೋಸಿಯೇಷನ್ ಇದರ ನೂತನ ಅಧ್ಯಕ್ಷರಾಗಿ ದಿನಕ‌ರ್ ಅಮೀನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪುರುಷೋತ್ತಮ್ ಮಲ್ಪೆ ಹಾಗೂ ಸುಮನ್ ಬರ್ಬೋಜ, ಕಾರ್ಯದರ್ಶಿಯಾಗಿ ರವಿರಾಜ ನಾಯಕ್, ಜೊತೆ ಕಾರ್ಯದರ್ಶಿಯಾಗಿ ಎಂ. ಇಟ್ಬಾಲ್ ಮನ್ನಾ, ಖಜಾಂಚಿಯಾಗಿ ಶರ್ಮಿಳಾ ರೋನಾಲ್ಡ್ ಜೊತೆ ಕೋಶಾಧಿಕಾರಿಯಾಗಿ ಮಕ್ರೀನಾ ಮಚಾದೊ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರೇಷ್ಮಾ ವಿಶ್ವನಾಥ್, ಶ್ವೇತಾ ಕೆ. ಶೆಟ್ಟಿ, ತೃಪ್ತಿ ಅವಿನಾಶ್, […]