IMF ಕಾರ್ಯನಿರ್ವಾಹಕ ನಿರ್ದೇಶಕರಾಗಿ ಆರ್ ಬಿಐ’ನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ನೇಮಕ

ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ RBIನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ನೇಮಕರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ (ಆ.28) ನಡೆದ ನೇಮಕಾತಿ ಸಭೆಯಲ್ಲಿ ಉರ್ಜಿತ್ ಪಟೇಲ್ ಅವರ ಹೆಸರನ್ನು ಅನುಮೋದಿಸಲಾಗಿತ್ತು. ಅದರಂತೆ ಮೂರು ವರ್ಷಗಳ ಅವಧಿಗೆ ಆರ್‌ಬಿಐನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. 2018ರಲ್ಲಿ ಆರ್‌ಬಿಐನ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ ಏಳು ವರ್ಷಗಳ ನಂತರ ಇದೀಗ ಮತ್ತೆ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಮಹಿಳೆಯರ ಘನತೆಗೆ ಧಕ್ಕೆ ತಂದರೆ ಕಠಿಣ ಕ್ರಮ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ

ಬೆಂಗಳೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಇತ್ತೀಚಿನ ಬೆಳವಣಿಗೆಗಳ ಕುರಿತು ಸ್ಪಷ್ಟನೆ ನೀಡಿದ್ದು, ಯಾರೇ ಆಗಿರಲಿ ಮಹಿಳೆಯರ ಘನತೆಗೆ ಧಕ್ಕೆ ತಂದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಿಳಾ ಹೋರಾಟಗಾರರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಅದರಲ್ಲಿ “ಧರ್ಮಸ್ಥಳದ ಸೌಜನ್ಯ, ವೇದವಲ್ಲಿ ಅವರನ್ನೆಲ್ಲಾ ಯಾರು ಕೊಂದ್ರು ಎಂಬ ಅಂಶವನ್ನು ಒಳಗೊಂಡ ಪತ್ರವನ್ನು ಪ್ರಗತಿಪರರು ನೀಡಿದ್ದಾರೆ ಎಂದು ಚೌಧರಿ ವಿವರಿಸಿದರು. ಈ ಕುರಿತು ಈಗಾಗಲೇ ಎಸ್‌ಐಟಿ ತನಿಖೆ […]

ಅಯ್ಯಪ್ಪ ಭಕ್ತವೃಂದ ಆದಿಉಡುಪಿ:ನೂತನ ಭಜನಾ ಮಂದಿರ ಹಾಗೂ ಸಬಾಭವನದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ:ಅಯ್ಯಪ್ಪ ಭಕ್ತವೃಂದ ಅದಿಉಡುಪಿ ಬೈಪಾಸ್ (ರಿ.) ಇದರ ನೂತನ ಭಜನಾ ಮಂದಿರ ಹಾಗೂ ಸಬಾಭವನದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀಯುತ ನಾಡೋಜ ಡಾ ಜಿ ಶಂಕರ್ ಇವರ ಮಾರ್ಗದರ್ಶನದಲ್ಲಿ ದಿ. 24.04.2025 ನೇ ಆದಿತ್ಯವಾರದಂದು ಕರಾವಳಿ ಬೈಪಾಸ್ ನ ಪ್ರಜ್ವಲ್ ನಗರದಲ್ಲಿ ಜರುಗಿತು. ಮುಖ್ಯ ಅಥಿತಿಗಳಾಗಿ ಗುರುಸ್ವಾಮಿಗಳಾದ ರಾಮಣ್ಣ ಗರಡಿ ಮಜಲು, ಸೋಮಯ್ಯ ಅಮೀನ್ ಹಾಗೂ ಕಾರ್ಯಕಾರಿ ಸಮಿತಿಯ ಅಧ್ಯಕ್ಷರುಗಳಾದ ಸುರೇಶ್ ಕೋಟ್ಯಾನ್, ಗೌರೀಶ್ ಕೋಟ್ಯಾನ್ ಉಪಾಧ್ಯಕ್ಷರುಗಳಾದ ಜಗದೀಶ್ ಕಾಂಚನ್, ಕೃಷ್ಣ ಅಂಬಲಪಾಡಿ […]

ಕಾರ್ಕಳ ಕ್ರೈಸ್ಟ್ ಕಿಂಗ್: ಪ್ರೌಢಶಾಲಾ ವಿಭಾಗದ ಬಾಲಕಿಯರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಸಹಯೋಗದಲ್ಲಿ ವಿದ್ಯಾವರ್ಧಕ ಪ್ರೌಢಶಾಲೆ ಮುಂಡ್ಕೂರು ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೆöÊಸ್ಟ್ಕಿಂಗ್ ಆಂಗ್ಲಮಾಧ್ಯಮ ಪೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಒಂಬತ್ತನೇ ತರಗತಿಯ ಶೈನಿ ಡಿಸೋಜಾ, ಶಗುನ್ ವರ್ಮಾ, ಕಾರ್ತಿಕಾ ಶೆಟ್ಟಿ, ಆಶಿಕಾ, ಹತ್ತನೇ ತರಗತಿಯ ವಿದ್ಯಾಶ್ರೀ, ಕೀರ್ತನಾ ಡಿಸೋಜ, ಎಂಟನೇ ತರಗತಿಯ […]

ಕರ್ತವ್ಯಲೋಪ ಆರೋಪ: ಉಡುಪಿ ತಹಶೀಲ್ದಾರ್ ವಿರುದ್ಧ ಡಿಸಿಗೆ ದೂರು

ಉಡುಪಿ: ದಲಿತ ಕುಟುಂಬದ ಮನೆಗೆ ತೆರಳುವ ಸರಕಾರಿ ರಸ್ತೆಯನ್ನು (ಉದ್ಯಾವರ ಗ್ರಾಮದ ಪಿತ್ರೋಡಿ ) ಅತಿಕ್ರಮಣ ಮಾಡಿರುವ ಬಗ್ಗೆ ತಾಲ್ಲೂಕು ಮೋಜಣಿದಾರರು ಒತ್ತುವರಿ ಖಚಿತಪಡಿಸಿ ನಕ್ಷೆ ಸಹಿತ ವರದಿ ನೀಡಿದ್ದರೂ, ಮುಕ್ತ ಸಂಚಾರವನ್ನು ಪ್ರತಿಬಂಧಿಸಿ ದಲಿತ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಒತ್ತುವರಿ ತೆರವುಗೊಳಿಸದೆ ಗಂಭೀರ ಕರ್ತವ್ಯಲೋಪ ಎಸಗಿದ ಉಡುಪಿ ತಹಶೀಲ್ದಾರ್ ವಿರುದ್ಧ ಕ್ರಮಕೈಗೊಳ್ಳುವಂತೆ ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷರಾದ ಸಂಜೀವ ಬಳ್ಕೂರು ಅವರು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರನ್ನು ಆಗ್ರಹಿಸಿದರು. ಬೈಂದೂರು ತಾಲ್ಲೂಕು ನಾಡ ಗ್ರಾಮದಲ್ಲಿ ಹಲವು […]