ಉಡುಪಿ:ಬದ್ರಿಯಾ ಜುಮುಅ ಮಸ್ಜಿದ್ (ರಿ) ಮಲ್ಲಾರು- ಮಜೂರು ಇವರ ಆಶ್ರಯದಲ್ಲಿ ಮರ್ಹಬ ಯಾ ಶಹ್ ರ ರಬಿಲ್ ವಾರ್ಷಿಕ ಸ್ವಲಾತ್ ಮತ್ತು ಪ್ರಭಾಷಣಾ ಕಾರ್ಯಕ್ರಮ

ಉಡುಪಿ:ಬದ್ರಿಯಾ ಜುಮುಅ ಮಸ್ಜಿದ್ (ರಿ) ಮಲ್ಲಾರು-ಮಜೂರು ಇವರ ಆಶ್ರಯದಲ್ಲಿ ಮರ್ಹಬ ಯಾ ಶಹ್ ರ ರಬಿಲ್ ವಾರ್ಷಿಕ ಸ್ವಲಾತ್ ಮತ್ತು ಪ್ರಭಾಷಣಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತ ಧಾರ್ಮಿಕ ಭಾಷಣಗಾರರಾದ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ರವರಿಂದ ಪ್ರೌಡೋಜ್ವಲವಾದ ಪ್ರಭಾಷಣದ ವೇದಿಕೆ ಸಮಾರಂಭದಲ್ಲಿ ಬಿ.ಜೆ.ಎo ಮಸೀದಿಯ ಅಧ್ಯಕ್ಷರಾದ ಡಾ.ಯು.ಎಂ ಫಾರೂಕ್ ಚಂದ್ರನಗರ ಇವರ ನೇತೃತ್ವದಲ್ಲಿ ಮಸೀದಿ ಸಭಾಂಗಣದಲ್ಲಿ ನಡೆಯಿತು. ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮಾತನಾಡಿ ಈ ಮಸೀದಿಯ ಅಧ್ಯಕ್ಷರಾದ ಡಾ.ಫಾರುಕ್ ಚಂದ್ರನಗರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಕೆಲಸಗಳು ಉತ್ತಮ ರೀತಿಯಲ್ಲಿ […]
ಗೌರಿ ಗಣೇಶ ಹಬ್ಬಕ್ಕೆ ತವರುಮನೆಯಿಂದ ಆಹ್ವಾನ ಬಂದಿಲ್ಲವೆಂದು ಗೃಹಿಣಿ ಆತ್ಮಹತ್ಯೆ!

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಒಂದು ಮನೆಯಲ್ಲಿ ಶೋಕ ಆವರಿಸಿದೆ. ಗೌರಿ ಗಣೇಶ ಹಬ್ಬಕ್ಕೆ ತನ್ನ ತವರು ಮನೆಯವರು ಕರೆಯಲಿಲ್ಲ ಎನ್ನುವ ಕಾರಣಕ್ಕೆ ಮನನೊಂದಿದ್ದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೀವನದಲ್ಲಿ ಭಾರೀ ಜಿಗುಪ್ಸೆಗೊಂಡಿದ್ದ ಗೃಹಿಣಿ, ಹಬ್ಬಕ್ಕೆ ತವರು ಮನೆಗೆ ಹೋಗಿ ಸಂಭ್ರಮ ಪಡುವ ಖುಷಿಯಲ್ಲಿದ್ದಳು. ಆದರೆ, ತವರು ಮನೆಯಿಂದ ಯಾವುದೇ ಆಹ್ವಾನ ಬರದ ಕಾರಣ ಮನನೊಂದು ಈ ಕೃತ್ಯ ಎಸಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು 26 ವರ್ಷದ ರಶ್ಮಿ ಎಂದು ಗುರುತಿಸಲಾಗಿದೆ. ಮಧುವನಹಳ್ಳಿ […]