ಉಡುಪಿಯ ಪ್ರಸಿದ್ಧ ಕಾರುಗಳ ಶೋರೂಮ್ ನಲ್ಲಿ ಉದ್ಯೋಗವಕಾಶ!

ಉಡುಪಿ: ಉಡುಪಿಯ ಪ್ರಸಿದ್ಧ ಕಾರ್ ಶೋರೂಂನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ▪HR ಎಕ್ಸಿಕ್ಯೂಟಿವ್▪ಅಕೌಂಟೆಂಟ್▪ ಬ್ಯಾಕ್ ಆಫೀಸ್ ಎಕ್ಸಿಕ್ಯೂಟಿವ್▪ ಸರ್ವಿಸ್ ಅಡ್ವೈಸರ್▪ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್▪ ಟೆಕ್ನಿಷಿಯನ್ / ಮೆಕ್ಯಾನಿಕ್ ಅತ್ಯುತ್ತಮ ವೇತನದೊಂದಿಗೆ PF-ESI ಸೌಲಭ್ಯವಿದೆ. ಮಾಹಿತಿಗಾಗಿ ಸಂಪರ್ಕಿಸಿ: 9606968198, 9663312304
ಉಡುಪಿ: ಉಚಿತ ಸೇವೆಯ ಆಂಬುಲೆನ್ಸ್ ವಾಹನದ ವಾರ್ಷಿಕ ವಿಮಾ ಕಂತು ಪಾವತಿಸಲು ನೆರವು

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಉಚಿತ ಸೇವೆಯ ಆಂಬುಲೆನ್ಸ್ ವಾಹನದ ವಾರ್ಷಿಕ ವಿಮಾ ಕಂತನ್ನು ಪಾವತಿಸಲು ಉಡುಪಿ ತಾಲೂಕು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ನೆರವು ನೀಡಿತು. 13,450 ರೂ ಮೊತ್ತದ ಚೆಕ್ ಅನ್ನು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ ಅವರು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಸ್ಥೆಯ ಸಿಬ್ಬಂದಿಗಳಾದ ಗ್ಲೋರಿಯಾ, ಸನಾಲಿ ಶೆಟ್ಟಿ, ರಮೇಶ್ ದೇವಾಡಿಗ ಉಪಸ್ಥಿತರಿದ್ದರು. ಹಾಗೆಯೇ ಆಂಬುಲೆನ್ಸ್ ವಾಹನಕ್ಕೆಅಳವಡಿಸಲು ಉದ್ಯಮಿ ಉದಯ್ ಕುಮಾರ್ […]
ಇನ್ಫೋಸಿಸ್‌ನ ವಾರ್ಷಿಕ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಮಂಗಳೂರಿನ ಇನ್ಫೋಸಿಸ್ ಕ್ಯಾಂಪಸಿನಲ್ಲಿ 21 ಆಗಸ್ಟ್, 2025 ರಂದು ನಡೆದ ಇನ್ಫೋಸಿಸ್ ವಾರ್ಷಿಕ ಪ್ರಾಜೆಕ್ಟ್ ಪ್ರದರ್ಶನ-2025 ರಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. “ಗಾರ್ಡಿಯನ್ : ರಿಯಲ್- ಟೈಮ್ ಪ್ರೋಟೆಕ್ಷನ್, ರಿಯಲ್- ವರ್ಲ್ಡ್ ಇಂಪ್ಯಾಕ್ಟ್” ಎಂಬ ಶೀರ್ಷಿಕೆಯ ಈ ಯೋಜನೆಯನ್ನು ಭೂಷಣ್ ಪೂಜಾರಿ, ಪ್ರಜ್ವಲ್ ಗುಲ್ವಾಡಿ, ಅಮೃತ ಅಭಿವೃದ್ಧಿ ಪಡಿಸಿದರು. ಗಾರ್ಡಿಯನ್ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳು, ಹಿಂಸೆ, ಅಪಘಾತಗಳು, ಅನುಮಾನಾಸ್ಪದ ನಡವಳಿಕೆ, […]
ಆ.27 ರಿಂದ ಡೊನಾಲ್ಡ್ ಟ್ರಂಪ್ ಸುಂಕ ಬರೆ; ದೇಶದ 4.22 ಲಕ್ಷ ಕೋಟಿ ರೂ. ಸರಕುಗಳಿಗೆ ಸುಂಕ ಹೊಡೆತ

ಹೊಸದಿಲ್ಲಿ: ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಹೇರಿರುವ ಶೇ. 25ರ ಹೆಚ್ಚುವರಿ ಸುಂಕವು ಬುಧವಾರದಿಂದ ಜಾರಿಗೆ ಬರಲಿದೆ. ಅದರಂತೆ ವಿನಾಯಿತಿ ಇರುವ ಕೆಲವು ಸರಕುಗಳನ್ನು ಹೊರತುಪಡಿಸಿ ಅಮೆರಿಕದ ಮಾರುಕಟ್ಟೆಯನ್ನು ಪ್ರವೇಶಿಸುವ ಭಾರತದ ಇತರ ಉತ್ಪನ್ನ ಗಳ ಸುಂಕ ಬುಧವಾರದಿಂದ ಶೇ. 50ಕ್ಕೆ ಏರಲಿದೆ. ಅಮೆರಿಕಕ್ಕೆ ಭಾರತದಿಂದ ರಫ್ತಾಗುವ 4.22 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳ ಮೇಲೆ ಇದು ಪರಿಣಾಮ ಬೀರಲಿದೆ. ಆರಂಭದಲ್ಲಿ ಆ. 7ರಂದು ಟ್ರಂಪ್ ಆಡಳಿತವು ಭಾರತದ ಮೇಲೆ ಶೇ. 25 ಪ್ರತಿಸುಂಕ ವಿಧಿಸಿತ್ತು. […]
ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಅದಿತಿ ಮೆಹೆಂದಳೆ ರಾಜ್ಯಕ್ಕೆ ಪ್ರಥಮ ರ್ಯಾಂಕ್

ಉಡುಪಿ: ಅದಿತಿ ಮೆಹೆಂದಳೆ ಅವರು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಈ ವರ್ಷದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 91.8 % ದೊಂದಿಗೆ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದ ಸಂಸ್ಥಾಪಕಿ ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯಾಗಿದ್ದು, ಉಡುಪಿಯ ಕೇಶವ್ ಮೆಹೆಂದಳೆ ಹಾಗು ರಂಜನಾ ಇವರ ಪುತ್ರಿ ಆಗಿದ್ದಾರೆ. ಪ್ರಸ್ತುತ ಮಣಿಪಾಲದ ಮಾಹೆ ಅಡಿಯಲ್ಲಿ ಬರುವ ಮಣಿಪಾಲ ಇನ್ಸ್ಟಿಟ್ಯೂಟ್ ಓಫ್ ಕಮ್ಯುನಿಕೇಷನ್ ಇಲ್ಲಿ ಬ್ಯಾಚುಲರ್ ಇನ್ ಮೀಡಿಯಾ […]