ಮಹಾರಾಷ್ಟ್ರ: ಒಂದು ವರ್ಷದ ಬಾಲಕಿಯ ಬರ್ತಡೇ ಪಾರ್ಟಿ ನಡೆಯುವಾಗಲೇ ಅಪಾರ್ಟ್ ಮೆಂಟ್ ಕುಸಿತ; 15 ಮಂದಿ ಮೃತ್ಯು

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ನಗರದಲ್ಲಿ ನಾಲ್ಕು ಅಂತಸ್ತಿನ ಅನಧಿಕೃತ ಅಪಾರ್ಟ್‌ಮೆಂಟ್ ಕುಸಿದ ಪರಿಣಾಮ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿರಾರ್ ಪ್ರದೇಶದ ವಿಜಯ್ ನಗರದಲ್ಲಿರುವ 50 ಫ್ಲಾಟ್‌ಗಳನ್ನು ಹೊಂದಿರುವ ‘ರಮಾಬಾಯಿ ಅಪಾರ್ಟ್‌ಮೆಂಟ್’ ಬುಧವಾರ ಮಧ್ಯಾಹ್ನ ಪಕ್ಕದಲ್ಲಿದ್ದ ಕಟ್ಟಡಗಳ ಮೇಲೆ ಕುಸಿದು ಬಿದ್ದಿತ್ತು. ‘ನಾಲ್ಕನೇ ಮಹಡಿಯಲ್ಲಿ ಒಂದು ವರ್ಷದ ಬಾಲಕಿಯ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದ ವೇಳೆಯೇ ಅಪಾರ್ಟ್‌ಮೆಂಟ್‌ನ ಒಂದು ಭಾಗ ಕುಸಿದು ಬಿದ್ದಿದೆ. ಫ್ಲಾಟ್‌ನಲ್ಲಿದ್ದ ನಿವಾಸಿಗಳು, ಅತಿಥಿಗಳು ಅವಶೇಷಗಳ […]
ಸೋಮೇಶ್ವರದಲ್ಲಿ ಹೊಂಡಕ್ಕೆ ಉರುಳಿದ ಖಾಸಗಿ ಬಸ್ಸು: ಪ್ರಯಾಣಿಕರು ಪಾರು!

ಉಡುಪಿ: ಕೊಪ್ಪದಿಂದ ಆಗುಂಬೆ ಮಾರ್ಗವಾಗಿ ಉಡುಪಿಯತ್ತ ಸಾಗುತ್ತಿದ್ದ ಖಾಸಗಿ ಬಸ್ಸೊಂದು ಸೋಮೇಶ್ವರದಲ್ಲಿ ಹೊಂಡಕ್ಕೆ ಉರುಳಿಬಿದ್ದ ಘಟನೆ ಆಗುಂಬೆ-ಸೋಮೇಶ್ವರ ಮಾರ್ಗದಲ್ಲಿ ಗುರುವಾರ ಸಂಭವಿಸಿದೆ.ಪಿಕ್ ಅಪ್ ವಾಹನವೊಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿತ್ತು.ಆಗ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸು, ನಿಯಂತ್ರಿಸಲು ಹೋಗಿ ಹೊಂಡಕ್ಕೆ ಉರುಳಿಬಿದ್ದಿದೆ. ಪಿಕ್ ಅಪ್ ವಾಹನದ ಚಾಲಕ ವೇಗವಾಗಿ, ನಿರ್ಲಕ್ಷದಿಂದ ಬಂದ ಪರಿಣಾಮವೇ ಬಸ್ಸು ಉರುಳಿಬೀಳುವಂತಾಯಿತು. ಖಾಸಗಿ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.
ಕಾಸರಗೋಡು: ಆರ್ಥಿಕ ಸಮಸ್ಯೆಯಿಂದ ಆ್ಯಸಿಡ್ ಸೇವಿಸಿ ಒಂದೇ ಕುಟುಂಬದ ಮೂವರು ಮೃತ್ಯು.

ಕಾಸರಗೋಡು: ಆ್ಯಸಿಡ್ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಆಘಾತಕಾರಿ ಘಟನೆ ಅಂಬಲತ್ತರ ಬಳಿಯ ಪರಕ್ಕಾಯಿಯಲ್ಲಿ ನಡೆದಿದೆ. ಮೃತರನ್ನು ಗೋಪಿ (58), ಅವರ ಪತ್ನಿ ಇಂದಿರಾ (54) ಮತ್ತು ಅವರ ಮಗ ರಂಜೇಶ್ (34) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮಗ ರಾಕೇಶ್ (27) ಸ್ಥಿತಿ ಗಂಭೀರವಾಗಿದ್ದು, ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಆರ್ಥಿಕ ಸಮಸ್ಯೆ ಕುಟುಂಬದ ಈ ಭೀಕರ ಘಟನೆಗೆ ಕಾರಣವಾಗಿರಬಹುದು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಂಬಂಧಿಕರೊಬ್ಬರಿಗೆ […]
ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಿಸಬೇಕು; RSS ಮುಖ್ಯಸ್ಥ ಮೋಹನ್ ಭಾಗವತ್

ನವದೆಹಲಿ: ಭಯೋತ್ಪಾದನೆಯಿಂದಾಗಿ ಭಾರತ ಮತ್ತು ಅದರ ಕೆಲವು ನೆರೆಯ ರಾಷ್ಟ್ರಗಳ ನಡುವೆ, ವಿಶೇಷವಾಗಿ ಪಾಕಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟಿದೆ. ಈ ನಡುವೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ನೆರೆಯ ಪ್ರದೇಶಗಳೊಂದಿಗೆ ಸಂಬಂಧವನ್ನು ಸುಧಾರಿಸಲು ಕರೆ ನೀಡಿದ್ದಾರೆ, ಅವುಗಳಲ್ಲಿ ಹಲವು ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದವು ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಒಂದು ಕಾಲದಲ್ಲಿ, ಭಾರತದ ಹೆಚ್ಚಿನ ನೆರೆಯ ದೇಶಗಳು ಭಾರತದ ಭಾಗವಾಗಿದ್ದವು. ಭೌಗೋಳಿಕತೆ ಒಂದೇ ಆಗಿದೆ, ನದಿ ಒಂದೇ ಆಗಿರುತ್ತದೆ, ಜನರು […]
ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ!

ಯಾದಗಿರಿ: ವಸತಿ ನಿಲಯವೊಂದರ ಶೌಚಾಲಯದಲ್ಲಿಯೇ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪೂರ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿರುವ ವಸತಿ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶಾಲೆಯ ಶೌಚಾಲಯದಲ್ಲೇ ಬಾಲಕಿಗೆ ಹೆರಿಗೆಯಾಗಿದ್ದು, ಗಂಡುಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ. ವಿದ್ಯಾರ್ಥಿನಿಗೆ ಹೆರಿಗೆಯಾದ ಸುದ್ದಿ ತಿಳಿದ ತಕ್ಷಣವೇ ನಗರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ […]