ಹಬ್ಬಕ್ಕೆ ಬಟ್ಟೆ ಖರೀದಿಸುತ್ತಿದ್ದಾಗ ಕುಸಿದು ಬಿದ್ದು ಪ್ರಥಮ ಪಿಯುಸಿ ವಿದ್ಯಾರ್ಥಿ ಮೃತ್ಯು.

ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಒಬ್ಬ ತಂದೆ-ತಾಯಿ ಜೊತೆ ಹಬ್ಬಕ್ಕೆ ಬಟ್ಟೆ ಖರೀದಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಮಲ್ಲಿಗೆರೆ ಗ್ರಾಮದ ಚಿರಾಗ್ (17) ಮೃತ ವಿದ್ಯಾರ್ಥಿ. ಬೆಂಗಳೂರು ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ಸೋಮವಾರ (ಆ.25) ಸಂಜೆ ಚಿರಾಗ್ ಹಬ್ಬಕ್ಕೆ ಬಟ್ಟೆ ಖರೀದಿಸಲು ತಂದೆ-ತಾಯಿ ಜೊತೆ ಹೋಗಿದ್ದನು. ಈ ವೇಳೆ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಉಡುಪಿ:ಆ.31 ರಂದು 16 ನೇ ಆವೃತ್ತಿಯ “ಕಲ್ಲಚ್ಚು ಪ್ರಶಸ್ತಿ ಪ್ರದಾನ” ಸಮಾರಂಭ

ಉಡುಪಿ:ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬೆಳ್ಳಿ ಹಬ್ಬ ” ರಜತ ರಂಗು” ಸಂಭ್ರಮದಲ್ಲಿರುವ ” ಕಲ್ಲಚ್ಚು ಪ್ರಕಾಶನದ” 16 ನೇ ಆವೃತ್ತಿಯ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 31 ಭಾನುವಾರ ಸಂಜೆ 4.00 ಗಂಟೆಗೆ ಮಂಗಳೂರಿನ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದ ಎದುರಿನ ಹ್ಯಾಟ್ ಹಿಲ್ ನಲ್ಲಿ ಇರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಲಿದೆ. ಈಗಾಗಲೇ ಕರ್ನಾಟಕದ ಪಂಚ ಸಾಧಕರಾದ ಡಾ. ಎಸ್ ಎಮ್ ಶಿವಪ್ರಕಾಶ್, ಜಬೀವುಲ್ಲಾ ಎಂ ಅಸದ್, […]
ಉಡುಪಿ:ನೋವೆಲ್ಟಿ ಜುವೆಲ್ಲರಿಯಲ್ಲಿ ಆ.1 ರಿಂದ ಅ.5 ರವರೆಗೆ ಗೋಲ್ಡ್ ಫೆಸ್ಟಿವಲ್

ಉಡುಪಿ: ನೋವೆಲ್ಟಿ ಜುವೆಲ್ಲರಿ ಉಡುಪಿ ಇಲ್ಲಿ ಆಗಸ್ಟ್ 1ರಿಂದ ಅಕ್ಟೋಬರ್ 5 ರವರೆಗೆ ಗೋಲ್ಡ್ ಫೆಸ್ಟಿವಲ್ ನಡೆಯಲಿದೆ. ಇದರ ಅನ್ವಯ ಪ್ರತಿ 2,000 ರೂ. ಖರೀದಿಗೆ 1 ಕೂಪನ್ ನೀಡಲಾಗುವುದು. ಬಂಪರ್ ಬಹುಮಾನವಾಗಿ 1 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 100 ವಜ್ರದ ಉಂಗುರಗಳು, 1 ವಜ್ರದ ನೆಕ್ಲೆಸ್ ನೀಡಲಾಗುವುದು. ಹಾಗೆಯೇ 1 ಕೆಜಿ ಚಿನ್ನದಲ್ಲಿ 250 ಗ್ರಾಂ 2 ವಿಜೇತರಿಗೆ, 50 ಗ್ರಾಂ ಚಿನ್ನ 10 ವಿಜೇತರಿಗೆ ನೀಡಲಾಗುವುದು. 5 ಕೆ.ಜಿ ಬೆಳ್ಳಿಯಲ್ಲಿ 1000 […]
ಉಡುಪಿ ಪರ್ಯಾಯ ಮಹೋತ್ಸವಕ್ಕೆ 50 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವಂತೆ ಸಿಎಂ ಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ

ಉಡುಪಿ: ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಉಡುಪಿ ನಗರದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 50 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ಸಿಎಂ ಸಿದ್ದರಾಮಯ್ಯ ರವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವ ನಾಡಹಬ್ಬ ಮಾದರಿಯಲ್ಲಿ ಅತ್ಯಂತ ವೈಭವಪೂರ್ಣವಾಗಿ ನಡೆಯುತ್ತಿದ್ದು ದೇಶ ವಿದೇಶದ ಲಕ್ಷಾಂತರ ಭಕ್ತರು ಉಡುಪಿಗೆ ಭೇಟಿ ನೀಡುತ್ತಾರೆ. 2026ನೇ ಇಸವಿಯ ಜನವರಿಯ ದಿನಾಂಕ 17 ಮತ್ತು […]
ಆನಂದತೀರ್ಥ ವಿದ್ಯಾಲಯದಲ್ಲಿ ರಾಜ್ಯಮಟ್ಟದ ಕಬ್ ಮತ್ತು ಬುಲ್‌ಬುಲ್ ಉತ್ಸವದ ತಯಾರಿ ಆರಂಭ.

ಉಡುಪಿ: ಪಾಜಕದ ಆನಂದತೀರ್ಥ ವಿದ್ಯಾಲಯದಲ್ಲಿ ಪ್ರತಿಷ್ಠಿತ ರಾಜ್ಯಮಟ್ಟದ ಕಬ್ ಮತ್ತು ಬುಲ್‌ಬುಲ್ ಉತ್ಸವವನ್ನು ಆತಿಥ್ಯ ವಹಿಸಲು ತಯಾರಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಶಾಲಾ ಆವರಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಹಲವು ಗಣ್ಯರು ಪಾಲ್ಗೊಂಡು ಸಭೆ ನಡೆಸಿದರು. ಡಾ. ಪಿ. ಜಿ. ಆರ್. ಸಿಂಧಿಯಾ, ರಾಜ್ಯ ಮುಖ್ಯ ಆಯುಕ್ತರು, ಜಯಕರ ಶೆಟ್ಟಿ ಇಂದ್ರಾಳಿ , ಉಡುಪಿ ಜಿಲ್ಲಾ ಮುಖ್ಯ ಆಯುಕ್ತರು, ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು, ಹಾಗೂ ಪ್ರಭಾಕರ ಭಟ್, ರಾಜ್ಯ ಸಂಘಟನಾ ಕಾರ್ಯದರ್ಶಿ, […]