ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ, ಆಗಸ್ಟ್ 26: ಬ್ರಹ್ಮಾವರ ತಾಲೂಕು ಕಾವಡಿ ಗ್ರಾಮದ ನಿವಾಸಿ ಪ್ರಕಾಶ್ ಶೆಟ್ಟಿ (39) ಎಂಬ ವ್ಯಕ್ತಿಯು ಕಳೆದ 7 ತಿಂಗಳಿನಿ0ದ ನಾಪತ್ತೆಯಾಗಿರುತ್ತಾರೆ.5 ಅಡಿ 5 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೋಟ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2564155, ಮೊ.ನಂ: 9480805454, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2561966, ಮೊ.ನಂ:9480805432 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೋಟ ಪೊಲೀಸ್ ಠಾಣಾಧಿಕಾರಿಗಳ […]

ಉಡುಪಿ:ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಹೊರಾಂಗಣ ಮೇಲ್ಛಾವಣಿ ಸಮರ್ಪಣೆ

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾದ ತೀರ್ಥಮಂಟಪದ ಮೇಲ್ಛಾವಣಿಯನ್ನು ಜಿ. ಶಂಕ‌ರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್, ಹೊರಾಂಗಣ ಮೇಲ್ಛಾವಣಿಯನ್ನು ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿ ಪಿ. ಶಶಿಕಾಂತ್ ತಂತ್ರಿ, ಗುಂಡಿಬೈಲು ವಾಸ್ತು ತಜ್ಞ ಸುಬ್ರಹ್ಮಣ್ಯ ಭಟ್, ಬನ್ನಂಜೆ ವಾರ್ಡ್‌ನ ನಗರಸಭಾ ಸದಸ್ಯೆ ಸವಿತಾ ಹರೀಶ್‌ ರಾಮ್, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ […]

ಕುಂದಾಪುರ: ಗಣಪತಿಯ ಮರಳು ಶಿಲ್ಪಾ ಕಲಾಕೃತಿ ರಚನೆ

ಉಡುಪಿ: ಗಣೇಶ ಚತುರ್ಥಿಯ ಅಂಗವಾಗಿ ನಾಡಿನ ಜನತೆಗೆ ಶುಭಾಷಯ ಸಾರುವ ಗಣಪತಿಯ ಮರಳು ಶಿಲ್ಪಾ ಕಲಾಕೃತಿಯನ್ನು ಕುಂದಾಪುರದ ಕೋಟೇಶ್ವರ ಹಳೆಅಳಿವೆ ಕಡಲ ತೀರದಲ್ಲಿ ರಚಿಸಲಾಯಿತು. ಜೈ ಗಣೇಶ ಎಂಬ ಶೀರ್ಷಿಕೆಯೊಂದಿಗೆ 4 ಅಡಿ ಮತ್ತು 6 ಅಡಿ ಎತ್ತರ ಅಗಲಗಳುಳ್ಳ ಈ ಕಲಾಕೃತಿಯನ್ನು ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿದರು.

ಉಡುಪಿ ಸಿಟಿ ಸೆಂಟರ್ ಮಾಲ್‌ಗೆ ‘ಟಿಪ್ ಟಾಪ್ ಸಿಟಿ ಸೆಂಟರ್ ಮಾಲ್’ ಮರುನಾಮಕರಣ

ಉಡುಪಿ: ಉದ್ಯಮಿ ಕೋಡಿ ಇಬ್ರಾಹಿಂ ಮೊಹಮ್ಮದ್ ಅವರ ಪೂರ್ಣಪ್ರಮಾಣದ ಬೆಂಬಲದೊಂದಿಗೆ ಉಡುಪಿ ನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಸಿಟಿ ಸೆಂಟರ್ ಮಾಲ್ ಅನ್ನು `ಟಿಪ್ ಟಾಪ್ ಸಿಟಿ ಸೆಂಟರ್ ಮಾಲ್’ ಎಂಬುದಾಗಿ ಮರು ನಾಮಕರಣ ಮಾಡಲಾಗಿದೆ ಎಂದು ಸಿಟಿ ಸೆಂಟರ್ ಮಾಲಕ ಜಮಾಲುದ್ದೀನ್ ತಿಳಿಸಿದ್ದಾರೆ. ಉಡುಪಿ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018ರಲ್ಲಿ ಕೋಡಿ ಇಬ್ರಾಹಿಂ ಮೊಹಮ್ಮದ್ ಸಿಟಿ ಸೆಂಟರ್ ಮಾಲ್‌ಗೆ ಬೃಹತ್ ಮೊತ್ತದ ಹೂಡಿಕೆ ಮಾಡಿದ್ದು, ಇದೀಗ ಈ ಮಾಲ್‌ನಲ್ಲಿ ಪೂರ್ಣಪ್ರಮಾಣದ ಬೆಂಬಲವನ್ನು […]

ಉಡುಪಿ: ಗಣೇಶ ಚತುರ್ಥಿ ಹಾಗೂ ವಿಸರ್ಜನಾ ಮೆರವಣಿಗೆ; ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶ

ಉಡುಪಿ: ಗಣೇಶ ಹಬ್ಬದ ಪ್ರಯುಕ್ತ ಆ. 27ರಿಂದ ಜಿಲ್ಲೆಯಾದ್ಯಂತ ಉಡುಪಿ, ಕುಂದಾಪುರ ಮತ್ತು ಕಾರ್ಕಳ ಉಪ-ವಿಭಾಗದಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಗಣೇಶ ವಿಗ್ರಹ ವಿಸರ್ಜನೆ ನಡೆಯಲಿದೆ. ಈ ಪ್ರಯುಕ್ತ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಗಣೇಶ ವಿಗ್ರಹ ವಿಸರ್ಜನೆ ನಡೆಯುವ ಸಂದರ್ಭದಲ್ಲಿ ಮದ್ಯಪಾನ ಮಾಡಿ ಗಲಭೆ ಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಅವರು, ಆ.27ರಂದು ಜಿಲ್ಲೆಯಾದ್ಯಂತ ಬೆಳಿಗ್ಗೆ 6 […]