ಮಣಿಪಾಲದ MSDC ಯಲ್ಲಿ “Center of Excellence in Artificial Intelligence” ಉದ್ಘಾಟನಾ ಸಮಾರಂಭ

ಉಡುಪಿ: ಕೃತಕ ಮತ್ತು ಬುದ್ಧಿಮತ್ತೆ ಇಡೀ ದೇಶದಲ್ಲಿಯೇ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಇದರ ಅಳವಡಿಕೆ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಲಿದೆ. ಇಂದು ಕೃಷಿ, ಶಿಕ್ಷಣ, ವ್ಯವಹಾರ, ರಕ್ಷಣಾ ಕ್ಷೇತ್ರ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೃತಕ ಬುದ್ಧಿಮತ್ತೆ ಅವಶ್ಯಕವಾಗಿದೆ. ಭವಿಷ್ಯದಲ್ಲಲ್ಲ, ವರ್ತಮಾನದಲ್ಲಿಯೇ ಕೃತಕ ಬುದ್ಧಿಮತ್ತೆ ನಮಗೆ ಅರಿವಾಗದಂತೆಯೇ ಎಲ್ಲಾ ಕ್ಷೇತ್ರಗಳಲ್ಲಿಯೂ ಜಾಗ ಪಡೆಯುತ್ತಿದೆ ಎಂದು AICTE ಯ ಅಧ್ಯಕ್ಷರಾದ ಪ್ರೊ.ಡಾ. ಟಿ.ಜಿ.ಸೀತಾರಾಮ್ ಹೇಳಿದ್ದಾರೆ. ಅವರು ಮಣಿಪಾಲ ಕೌಶಲ್ಯಾಭಿವೃದ್ದಿ ಕೇಂದ್ರ(MSDC)ದಲ್ಲಿ “Center of Excellence in Artificial Intelligence” […]

ಮಂಗಳೂರು:ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.)ಬೆಳ್ತಂಗಡಿ ಶಾಖೆ ಶೀಘ್ರದಲ್ಲಿ ಆರಂಭ

ಮಂಗಳೂರು : ಮಂಗಳೂರಿನ ಬೆಂದೂರ್‌ವೆಲ್ ಇಲ್ಲಿ ಕೇಂದ್ರ ಕಛೇರಿ ಹೊಂದಿರುವ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಇದರ ಬೆಳ್ತಂಗಡಿ ಶಾಖೆಯು ಶೀಘ್ರದಲ್ಲಿ ಅಂದರೆ ಮುಂದಿನ ನವರಾತ್ರಿ ದಸರಾದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.

ಕಾರ್ಕಳ: ಹುಡುಗಿ ವಿಚಾರದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಉಡುಪಿ: ಕಾರ್ಕಳದ ಕುಂಟಲ್ಪಾಡಿಯಲ್ಲಿ ನಡೆದ ವ್ಯಕ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪರೀಕ್ಷಿತ್ ಸಂಜೀವ್ ಗೌಡ ಎಂದು ಗುರುತಿಸಲಾಗಿದೆ. ನವೀನ್ ಪೂಜಾರಿ ಕೊಲೆಯಾದ ವ್ಯಕ್ತಿ. ಆರೋಪಿಗೂ ಕೊಲೆಯಾದ ವ್ಯಕ್ತಿಗೂ ಪರಿಚಯ ಇತ್ತು. ಇಬ್ಬರೂ ವಿವಾಹಿತರಾಗಿದ್ದು ಬೇರೆ ಬೇರೆ ಕಾರಣಗಳಿಂದ ಪತ್ನಿಯೊಂದಿಗೆ ಮುನಿಸಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಆರೋಪಿ ಪರೀಕ್ಷಿತ್ ಸಂಜೀವ್ ಗೌಡನ ಗೆಳತಿಯೊಂದಿಗೆ ಕೊಲೆಯಾದ ನವೀನ್‌ ಪೂಜಾರಿ ಪರಿಚಯ ಮಾಡಿಕೊಂಡಿದ್ದು, ಇತ್ತೀಚೆಗೆ ಆತ್ಮೀಯತೆ ಬೆಳೆದಿದೆ. ಅವರಿಬ್ಬರು ಮತ್ತಷ್ಟು […]

ತೆಕ್ಕಟ್ಟೆ ಸರಕಾರಿ ಪ. ಪೂ. ಕಾಲೇಜಿನಲ್ಲಿ 2009-10ನೇ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿವಿಧ ಪರಿಕರಗಳ ಹಸ್ತಾಂತರ ಕಾರ್ಯಕ್ರಮ

ಕುಂದಾಪುರ: ತೆಕ್ಕಟ್ಟೆ ಸರಕಾರಿ ಪ. ಪೂ. ಕಾಲೇಜಿನಲ್ಲಿ, ಪ್ರೌಢಶಾಲಾ ವಿಭಾಗದ ವತಿಯಿಂದ 2009-10ನೇ ಸಾಲಿನ SSLC ವಿದ್ಯಾರ್ಥಿಗಳಿಂದ ಶಾಲೆಗೆ ಪ್ರೊಜೆಕ್ಟರ್ ಹಾಗೂ ಟ್ರ್ಯಾಕ್ ಸೂಟ್ ಮೌಸ್ ಮತ್ತು ಕೀಬೋರ್ಡ್ ಹಸ್ತಾಂತರ ಕಾರ್ಯಕ್ರಮ ಆ.29 ರಂದು ಬೆಳಿಗ್ಗೆ 10.30 ಕ್ಕೆ ಜರಗಲಿದೆ. ಕಾರ್ಯಕ್ರಮದಲ್ಲಿ ಶೋಭನಾ ಶೆಟ್ಟಿ ಅಧ್ಯಕ್ಷರು, ಗ್ರಾಮ ಪಂಚಾಯತ್, ತೆಕ್ಕಟ್ಟೆ, ಶಿವರಾಮ ಶೆಟ್ಟಿ ಅಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ,  ವಿಜಯ ಭಂಡಾರಿ ಸದಸ್ಯರು, ಗ್ರಾಮ ಪಂಚಾಯತ್, ತೆಕ್ಕಟ್ಟೆ, ಶಾರದಾ ಹೊಳ್ಳ ಪ್ರಭಾರ ಪ್ರಾಂಶುಪಾಲರು, ಸ.ಪ.ಪೂ. ಕಾಲೇಜು ತೆಕ್ಕಟ್ಟೆ, […]

ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ, ಆಗಸ್ಟ್ 26: ನಗರದ ಲಾಡ್ಜ್ವೊಂದರಲ್ಲಿ ಕಳೆದ ಎರಡು ತಿಂಗಳಿನಿoದ ಮ್ಯಾನೆಜರ್ ಕೆಲಸ ಮಾಡಿಕೊಂಡಿದ್ದಸೈಯದ್ ಇಮ್ರಾನ್ (41) ಎಂಬ ವ್ಯಕ್ತಿಯು 2024 ರ ಫೆಬ್ರವರಿ 23 ರಂದು ಲಾಡ್ಜ್ನಿಂದ ಕೆಲಸದ ನಿಮಿತ್ತ ಹೊರಗೆ ಹೋದವರು ವಾಪಾಸು ಬಾರದೇ, ತನ್ನ ಊರಿಗೂ ಹೋಗದೇ ನಾಪತ್ತೆಯಾಗಿರುತ್ತಾರೆ.170 ಸೆಂ.ಮೀ ಎತ್ತರ, ದಪ್ಪ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಉರ್ದು ಭಾಷೆಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ನಗರ […]