ಸುಂಕ ಹೇರಿಕೆ ಪರಿಣಾಮ: ಅಮೇರಿಕಕ್ಕೆ ಅಂಚೆ ಸೇವೆಯನ್ನೇ ಅಮಾನತುಗೊಳಿಸಿದ ಭಾರತ

ನವದೆಹಲಿ: ಅಂಚೆ ಇಲಾಖೆಯು ಅಮೆರಿಕಕ್ಕೆ ಕೆಲವು ವಸ್ತುಗಳ ರವಾನೆ ಸೇವೆಯನ್ನು ಅಮಾನತಿನಲ್ಲಿ ಇರಿಸಿದೆ.ಅಮೆರಿಕದ ಸೀಮಾಸುಂಕ ಇಲಾಖೆಯು ಹೊರಡಿಸಿರುವ ಹೊಸ ನಿಯಮಗಳ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಅಮೆರಿಕಕ್ಕೆ ತೆರಳುವ ವಿಮಾನಗಳು ವಸ್ತುಗಳನ್ನು ಒಯ್ಯಲು ಒಪ್ಪುತ್ತಿಲ್ಲ. ಹೀಗಾಗಿ ಅಂಚೆ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ ಎಂದು ಸಂವಹನ ಸಚಿವಾಲಯವು ಶನಿವಾರ ಹೇಳಿದೆ. ಆದರೆ ಪತ್ರಗಳು, ಕಡತಗಳು ಹಾಗೂ 100 ಡಾಲರ್‌ಗಿಂತ ಕಡಿಮೆ ಮೌಲ್ಯದ ಉಡುಗೊರೆಗಳನ್ನು ಅಮೆರಿಕಕ್ಕೆ ಕಳುಹಿಸಿಕೊಡುವ ಸೇವೆಗಳು ಮುಂದುವರಿಯುತ್ತವೆ ಎಂದು ಅದು ಸ್ಪಷ್ಟಪಡಿಸಿದೆ. ಅಮೆರಿಕದ ಆಡಳಿತವು 2025ರ […]

ಆ.26ರಂದು ಮಣಿಪಾಲದಲ್ಲಿ “ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಉದ್ಘಾಟನೆ”

ಉಡುಪಿ: ಮಣಿಪಾಲ ಕೌಶಲಾಭಿವೃದ್ಧಿ ಕೇಂದ್ರ (ಎಂಎಸ್‌ಡಿಸಿ), ವಿಷನ್ ಡಿಜಿಟಲ್ ಇಂಡಿಯಾ, ಇಂಟೆಲ್ ಮತ್ತು ಗ್ಲೋಬಲ್ ಎಐ ಸೊಸೈಟಿ ಸಹಯೋಗದಲ್ಲಿ ಇದೇ 26ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ ಸಭಾಂಗಣದಲ್ಲಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರದ ಉದ್ಘಾಟನೆ ನಡೆಯಲಿದೆ ಎಂದು ಎಂಎಸ್‌ಡಿಸಿ ಅಧ್ಯಕ್ಷ ಬ್ರಿಗೇಡಿಯ‌ರ್ ಸುರ್ಜಿತ್ ಪಾಬ್ಲಾ ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮದಲ್ಲಿ ಎಐಸಿಟಿಇ ಅಧ್ಯಕ್ಷ ಟಿ.ಜಿ. ಸೀತಾರಾಂ, ಇಂಟೆಲ್ ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷ ಸಿಯಾಂಗ್ ಬೂನ್ ನ್ಯೂ, […]

ಉಡುಪಿ: ಕೆಜಿಎಫ್ ಖ್ಯಾತಿಯ ನಟ, ಕಲಾನಿರ್ದೇಶಕ ದಿನೇಶ್ ಮಂಗಳೂರು ನಿಧನ

ಉಡುಪಿ: ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು ಅವರು ನಿಧನರಾಗಿದ್ದಾರೆ. ಇಂದು (ಆಗಸ್ಟ್ 25) ಕುಂದಾಪುರ ಸಮೀಪದ ಕೋಟೇಶ್ವರ ಸರ್ಜನ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ‘ಆ ದಿನಗಳು’, ‘ಕೆಜಿಎಫ್’ ‘ಉಳಿದವರು ಕಂಡಂತೆ’, ‘ಕಿಚ್ಚ’, ‘ಕಿರಿಕ್ ಪಾರ್ಟಿ’ ಮುಂತಾದ ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ಅವರು ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ದಿನೇಶ್ ಮಂಗಳೂರು ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಕೆಲ ದಿನಗಳ ಹಿಂದೆ ಅವರಿಗೆ ಸ್ಟ್ರೋಕ್ ಆಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು […]

ಹೆಮ್ಮಾಡಿ ಜನತಾ ಪಿಯು ಕಾಲೇಜಿನಲ್ಲಿ ಜನತಾ ದಿಬ್ಬಣ ಕಾರ್ಯಕ್ರಮ

ಹೆಮ್ಮಾಡಿ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ವಿಜ್ಞಾನಿ, ಡಾಕ್ಟರ್ ಆಗಿ ದೇಶಕ್ಕೆ ಕೊಡುಗೆ ನೀಡಿ ಎಂದು ವಿ ವಿ ವಿ ಮಂಡಳಿ.ರಿ. ಹೆಮ್ಮಾಡಿ ಇದರ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಹೇಳಿದರು. ಅವರು ಹೆಮ್ಮಾಡಿ ಜನತಾ ಪಿಯು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಜನತಾ ದಿಬ್ಬಣಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಮಾತನಾಡಿ ಅವಕಾಶ ಸಿಕ್ಕಾಗ ಬಳಸಿಕೊಳ್ಳಿ ಪ್ರತಿಭೆಗೆ ಇರುವ ಸೌಂದರ್ಯ […]

ಕುಂದಾಪುರ: ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿಯಲ್ಲಿ ದಂತ ಆರೈಕೆ ಜಾಗೃತಿ ಕಾರ್ಯಕ್ರಮ

ಕುಂದಾಪುರ: ಮೂಡ್ಲಕಟ್ಟೆಯ ವಿದ್ಯಾ ಅಕಾಡೆಮಿಯಲ್ಲಿ, ಕೋಟೇಶ್ವರ ಶ್ರೀದೇವಿ ಡೆಂಟಲ್ ಕ್ಲಿನಿಕ್‌ನ ಡಾ. ಜಗದೀಶ್ ಹಾಗೂ ಅವರ ತಂಡವು ದಂತ ಆರೈಕೆ ಮತ್ತು ಹಲ್ಲುಗಳ ಸ್ವಚ್ಛತೆಯ ಕುರಿತ ವಿಶೇಷ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಗೆ , ಹಲ್ಲುಗಳನ್ನು ಸರಿಯಾಗಿ ಬ್ರಷ್ ಮಾಡುವ ವಿಧಾನ ಹಾಗೂ ದಂತ ಆರೋಗ್ಯದ ಮಹತ್ವವನ್ನು ದಂತಪಂಗ್ತಿಯ ವಿಶೇಷ ಆಕರ್ಷಕ ಮಾಡೆಲ್ ಗಳೊಂದಿಗೆ ಕೋಟೇಶ್ವರದ ಶ್ರೀದೇವಿ ದಂತ ಚಿಕಿತ್ಸಾಲಯದ ಡಾ. ಜಗದೀಶ್ ರವರು ಮನೋಜ್ಞವಾಗಿ ವಿವರಿಸಿ ಅರ್ಥೈಸಿದರು. ವಿದ್ಯಾ ಅಕಾಡೆಮಿಯ ಮಕ್ಕಳು ಅತ್ಯುತ್ಸಾಹದಿಂದ […]