ಧರ್ಮಸ್ಥಳ ಪ್ರಕರಣವನ್ನು ಎನ್ಐಎ‘ಗೆ ವಹಿಸಿ: ಬಿ.ವೈ. ವಿಜಯೇಂದ್ರ

ಬೆಂಗಳೂರು: ಧರ್ಮಸ್ಥಳ ಪ್ರಕರಣವನ್ನು ಎನ್ಐಎ‘ಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.1 ರಂದು ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದು ಧರ್ಮಸ್ಥಳದ ಎಲ್ಲ ಭಕ್ತರು ಇದರಲ್ಲಿ ಭಾಗವಹಿಸಬಹುದು. ಸೆ2 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಧರ್ಮಸ್ಥಳದ ಪ್ರಕರಣದಲ್ಲಿ ಚಿನ್ನಯ್ಯ ಒಬ್ಬ ನಿಮಿತ್ತ ಮಾತ್ರ ಇದರ ಹಿಂದಿರುವ ವ್ಯವಸ್ಥಿತ ಜಾಲವನ್ನು ಪತ್ತೆ ಮಾಡಲು ‘ಎನ್ಐಎ‘ ತನಿಖೆಗೆ ಒಪ್ಪಿಸಬೇಕು ಎಂದು ಹೇಳಿದರು. ಇದರ ಹಿಂದೆ ಷಡ್ಯಂತ್ರ ಇದೆ ಎಂದು […]

ಸ್ಕೌಟ್ಸ್​ ಚಟುವಟಿಕೆಗಳಲ್ಲಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಸೇರ್ಪಡೆಗೊಳಿಸವ ಚಿಂತನೆ: ಪಿ ಜಿ ಆರ್ ಸಿಂದ್ಯಾ

ಉಡುಪಿ: ಸ್ಕೌಟ್ಸ್​ ಚಟುವಟಿಕೆಗಳಲ್ಲಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಸೇರ್ಪಡೆಗೊಳಿಸವ ಚಿಂತನೆ ಇದೆ. ಇದರಿಂದ ಮಕ್ಕಳ ಜ್ಞಾಪನಾ ಸಾಮರ್ಥ್ಯವೂ ವೃದ್ಧಿಸಲಿದೆ ಎಂದು ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್​. ಸಿಂಧ್ಯಾ ಹೇಳಿದರು. ಬೋರ್ಡ್​ ಹೈಸ್ಕೂಲಿನಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಭಾರತ್​ ಸೌಟ್ಸ್​ ಮತ್ತು ಗೈಡ್ಸ್​ ಸಂಯುಕ್ತಾಶ್ರಯದಲ್ಲಿ ಉಡುಪಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ, ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕ- ಮತ್ತು ಉಪನ್ಯಾಸಕಿಯರಿಗೆ ರೋವರಿಂಗ್​ ಮತ್ತು ರೇಂಜರಿಂಗ್​ ಪ್ರಾರಂಭಿಕ ಶಿಬಿರ […]

ಮೂಡ್ಲಕಟ್ಟೆ ಕಾಲೇಜಿನಲ್ಲಿ ಮಾದಕ ದ್ರವ್ಯ ಜಾಗೃತಿ ಸಭೆ ಮತ್ತು ಪ್ರತಿಜ್ಞೆ ಸ್ವೀಕಾರ

ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ಐಎಂಜೆ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು, ಮೂಡ್ಲಕಟ್ಟೆ ಪ್ಯಾರಾಮೆಡಿಕಲ್ ಸೈನ್ಸಸ್ ಇನ್ಸ್ಟಿಟ್ಯೂಟ್ ಮತ್ತು ಮೂಡ್ಲಕಟ್ಟೆ ಕಾಲೇಜ್ ಆಫ್ ಫಿಸಿಯೋತೆರೇಪಿ ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ಜಾಗೃತಿ ಸಭೆ ಮತ್ತು ಪ್ರತಿಜ್ಞೆ ಸ್ವೀಕಾರ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಭೀಮಶಂಕರ್ ಸಿನ್ನೂರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕುಂದಾಪುರ ರೂರಲ್ ಪೊಲೀಸ್ ಸ್ಟೇಷನ್ ಕಂಡ್ಲೂರು ಅವರು, ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜೆನ್ನಿಫರ್ ಫ್ರೀಡಾ ಮೆನೆಜಸ್ ಹಾಗೂ ಉಪ […]

ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಸೌಜನ್ಯ ಹೋರಾಟ ಸಮಿತಿಯಿಂದ ವಿಶೇಷ ಪೂಜೆ

ಉಡುಪಿ: ‘ಸೌಜನ್ಯಾಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಅತ್ಯಾಚಾರ ನಡೆಸಿದವರಿಗೆ ಕಾನೂನಿನ ಮೂಲಕ ಶಿಕ್ಷೆಯಾಗಬೇಕು’ ಎಂದು ಪ್ರಾರ್ಥಿಸಿ ಇಲ್ಲಿನ ಅಮೃತೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಸೌಜನ್ಯಾ ಹೋರಾಟ ಸಮಿತಿ ವಿಶೇಷ ಪೂಜೆ ಸಲ್ಲಿಸಿತು. ಸಮಿತಿಯ ಪ್ರಮುಖ ಕೋಟ ದಿನೇಶ ಗಾಣಿಗ ಮಾತನಾಡಿ, ಈವರೆಗೆ ಸೌಜನ್ಯಾಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಾಕಷ್ಟು ಹೋರಾಟಗಳು ನಡೆಸಿದ್ದೇವೆ. ಆದರೆ ಮುಂದೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಸೌಜನ್ಯಾಳ ಅತ್ಯಾಚಾರ ಎಸಗಿದ ಆರೋಪಿಗಳು, ಅವರ ಪರವಾಗಿ ನಿಂತವರು ಸರ್ವನಾಶವಾಗಬೇಕು ಎಂದು ರಾಜ್ಯದ 25 […]

ಅರ್ಬಿ ಕೋಡಿ ಬ್ರಹ್ಮರಾಮೇಶ್ವರ ಭಜನಾ ಮಂಡಳಿ: ಆಡಳಿತ ಕಚೇರಿ ನಿರ್ಮಾಣ ಸಹಿತ ಇತರ ಕಾಮಗಾರಿಗಳ ಮನವಿ ಬಿಡುಗಡೆ ಕಾರ್ಯಕ್ರಮ

ಮಣಿಪಾಲ: ಉಡುಪಿ ಜಿಲ್ಲೆಯ 80ನೇ ಬಡಗಬೆಟ್ಟು ಗ್ರಾಮದ ಅರ್ಬಿ ಕೋಡಿಯ ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿ (ರಿ.) ಇದರ ವತಿಯಿಂದ ಅಶ್ವತ್ಥ ಕಟ್ಟೆಯ ನವೀಕರಣ, ಭಜನಾ ಮಂದಿರದ ವಠಾರದಲ್ಲಿ ಶಾಶ್ವತ ತಗಡು ಚಪ್ಪರ ನಿರ್ಮಾಣ, ನೆಲಹಾಸು, ಆಡಳಿತ ಕಛೇರಿ ಹಾಗೂ ಇತರ ಕಾಮಗಾರಿಗಳ ಮನವಿ ಬಿಡುಗಡೆ ಕಾರ್ಯಕ್ರಮವು ದಿನಾಂಕ ಅಗಸ್ಟ್ 24 ರಂದು ಜರಗಿತು. ಅಧ್ಯಕ್ಷತೆಯನ್ನು 80ನೇ ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ […]