ಮಣಿಪಾಲ:ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿಯಲ್ಲಿ ಸ್ತನ ಪುನರ್ನಿರ್ಮಾಣ ಮತ್ತು ಟಮ್ಮಿ ಟಕ್ (ಹೊಟ್ಟೆ ಗಾತ್ರ ಕಡಿಮೆಗೊಳಿಸುವ/ಬಿಗಿಗೊಳಿಸುವ)ಶಿಬಿರ

ಉಡುಪಿ: ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹಯೋಗದೊಂದಿಗೆ, ಆಗಸ್ಟ್ 28, 2025 ರ ಗುರುವಾರ ಬೆಳಿಗ್ಗೆ 9:00 ರಿಂದ ಸಂಜೆ 4:30 ರವರೆಗೆ ಆಸ್ಪತ್ರೆ ಆವರಣದಲ್ಲಿ ಸ್ತನ ಪುನರ್ನಿರ್ಮಾಣ ಮತ್ತು ಟಮ್ಮಿ ಟಕ್ (ಹೊಟ್ಟೆ ಗಾತ್ರ ಕಡಿಮೆಗೊಳಿಸುವ/ಬಿಗಿಗೊಳಿಸುವ ) ಶಿಬಿರವನ್ನು ಆಯೋಜಿಸಲಿದೆ. ಈ ಶಿಬಿರವನ್ನು ಈ ಕೆಳಗಿನ ಪರಿಸ್ಥಿತಿಗಳಿಗೆ ಪರಿಹಾರಗಳನ್ನು ಹುಡುಕುತ್ತಿರುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ: ಶಿಬಿರದಲ್ಲಿ ತಜ್ಞರ ಸಮಾಲೋಚನೆ ಉಚಿತವಾಗಿದೆ. ಅವಶ್ಯ ಪರೀಕ್ಷೆಗಳ ಹಾಗೂ ಶಸ್ತ್ರ ಚಿಕಿತ್ಸೆಗಳ […]
ಹೊಟೇಲ್ ನಲ್ಲಿ ಊಟದ ಬಳಿಕ ಸೋಂಪು ಕಾಳು ಯಾಕೆ ಕೊಡ್ತಾರೆ? ಅಸಲಿ ಕಾರಣ ಇಲ್ಲಿದೆ ನೋಡಿ !

ಹೊಟೇಲ್ ನಲ್ಲಿ ಊಟ ಮಾಡಿ ಬಿಲ್ ಕೊಡುವ ಸಮಯ ಬಂದಾಗ ಸೋಂಪು ಕಾಳಿನ ಜೊತೆಗೆ ಪುಟ್ಟ ಪುಟ್ಟ ಕಲ್ಲುಸಕ್ಕರೆಯನ್ನು ಕೊಡುವ ಕ್ರಮನ್ನು ನೀವು ನೋಡಿರುತ್ತೀರಿ. ಆ ಸೋಂಪು ಮತ್ತು ಕಲ್ಲುಸಕ್ಕರೆ ತಿಂದದ್ದೇ ಊಟ ಪರಿಪೂರ್ಣ ಆಯ್ತು ಎನ್ನುವ ಭಾವನೆ ನಿಮ್ಮಲ್ಲಿ ಮೂಡಿರುತ್ತೆ.ಆದ್ರೆ ಸೋಂಪು ಮತ್ತು ಕಲ್ಲು ಸಕ್ರೆ ಯಾಕೆ ಕೊಡ್ತಾರೆ ಇದರಿಂದ ನಮಗೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆದಾಗುತ್ತಾ ಎನ್ನುವ ಕುರಿತು ತಿಳ್ಕೊಳ್ಳೋಣ. ಹೋಟೆಲ್‌ನಲ್ಲಿ ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ನಂತರ, ನಿಮಗೆ ಹೊಟ್ಟೆಯಲ್ಲಿ ಭಾರ, ಅನಿಲ […]
ಕಾರ್ಕಳ ಕ್ರೈಸ್ಟ್ಕಿಂಗ್: ಟೇಬಲ್ ಟೆನ್ನಿಸ್‌ನಲ್ಲಿ ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ 14/17 ರ ವಯೋಮಿತಿಯ ಬಾಲಕಿಯರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಉಳಿದಂತೆ ಆರನೇ ತರಗತಿಯ ಡೆಲ್ಸಿಯಾ ಡಿ’ಸೋಜ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಮೂಡುಬಿದಿರೆ: ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು.

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಬೆಳುವಾಯಿಯಲ್ಲಿ ಇತ್ತೀಚೆಗೆ ನಡೆದಿದ್ದ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ನಿವಾಸಿ ಸಂದೀಪ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಗಸ್ಟ್ 24ರಂದು ಮೃತಪಟ್ಟಿದ್ದಾರೆ. ಅಗಸ್ಟ್ 16ರಂದು ಸಂದೀಪ್ ಹಾಗೂ ಆತನ ಮೂವರು ಸ್ನೇಹಿತರು ಕಾರಿನಲ್ಲಿ ಮೂಡುಬಿದಿರೆಯಿಂದ ಕಾರ್ಕಳಕ್ಕೆ ಹೋಗುವಾಗ ಬೆಳುವಾಯಿಯಲ್ಲಿ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ವೇಣೂರು ಪೆರ್ಮಡೆ ನಿವಾಸಿ ಸುಮಿತ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರೊಂದಿಗೆ ಇದ್ದ ಸಂದೀಪ್ ಸಹಿತ ಇತರರು ಗಾಯಗೊಂಡಿದ್ದರು. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ […]
ವಿಕೆ ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ 4ನೇ ವರ್ಷದ ಮಕ್ಕಳಿಗಾಗಿ ರಾಧಾ ಕೃಷ್ಣ ಆನ್ಲೈನ್ ಫೋಟೋ ಸ್ಪರ್ಧೆ.

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ, ವಿಕೆ ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ ಮಕ್ಕಳಿಗಾಗಿ 4ನೇ ವರ್ಷದ ಆನ್ಲೈನ್ ರಾಧಾ-ಕೃಷ್ಣ ಫೋಟೋ ಸ್ಪರ್ಧೆ ಘೋಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ರಾಧಾ ಅಥವಾ ಕೃಷ್ಣರಂತೆ ಸಿಂಗರಿಸಿ ಫೋಟೋಗಳನ್ನು ಕಳುಹಿಸಲು ಆಹ್ವಾನಿಸಲಾಗಿದೆ. ಸ್ಪರ್ಧೆಯು: 0 ರಿಂದ 1 ವರ್ಷ, 1-3, ಮತ್ತು 3 ರಿಂದ 5 ವರ್ಷ ವಯೋಮನಾದ ಮಕ್ಕಳಿಗೆ ಮಾತ್ರವಾಗಿದ್ದು, ಪೋಷಕರು ತಮ್ಮ ಮಗುವಿನ ಕನಿಷ್ಠ ಎರಡು ಫೋಟೋಗಳನ್ನು, ವಯಸ್ಸಿನ ಪುರಾವೆ ಮತ್ತು ಸಂಪರ್ಕ ವಿವರಗಳೊಂದಿಗೆ, ವಾಟ್ಸಾಪ್ […]