ಉಡುಪಿ: ಹೆದ್ದಾರಿಯಲ್ಲಿ ಸ್ಕೂಟಿಗೆ ಅಡ್ಡ ಬಂದ ನಾಯಿ; ಸ್ಕೂಟಿ ಸವಾರ ಮೃತ್ಯು.

ಪಡುಬಿದ್ರಿ: ಹೆದ್ದಾರಿಗಡ್ಡ ಬಂದ ಶ್ವಾನಕ್ಕೆ ಢಿಕ್ಕಿಯಾಗಿ ಆ. 12ರಂದು ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾಮಾಜಿಕ ಹೋರಾಟಗಾರ, ದಲಿತ ನಾಯಕ ಪಡುಬಿದ್ರಿ ಅಬ್ಬೇಡಿ ಸುಜ್ಲಾನ್ ಕಾಲನಿಯ ಉಮಾನಾಥ ಅವರು ಆ. 23ರಂದು ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಉಮಾನಾಥ ಅವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯಗಳಾಗಿದ್ದವು. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಮಾತನಾಡುತ್ತಿರಲಿಲ್ಲ. ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು […]
ನೀವು ಕಾಫಿ ಪ್ರಿಯರೇ? ಕಾಫಿ ಇಷ್ಟ ಅಂತ ಬೇಕಾಬಿಟ್ಟಿ ಕಾಫಿ ಕುಡಿಬೇಡಿ!

ಕಾಫಿ ಇಷ್ಟ ಅಂತ ಹೇಳಿ ಮಿತಿಮೀರಿ ಕಾಫಿ ಕುಡಿಯುವವರಿದ್ದಾರೆ. ಆದರೆ ಕಾಫಿ ಅತಿಯಾದರೆ ದೀರ್ಘಕಾಲಿಕ ರೋಗಗಳನ್ನು ತಂದೊಡ್ಡುವ ಸಾಧ್ಯತೆಗಳಿದ್ದು. ಎಚ್ಚರವಹಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅತಿಯಾದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಹಾಗೂ ಆತಂಕ (Anxiety) ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಏನಂತಾರೆ ವೈದ್ಯರು? ಆತಂಕ (Anxiety) ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬರುವ ಸಾಕಷ್ಟು ರೋಗಿಗಳು ಸಾಮಾನ್ಯವಾಗಿ ಅತಿಯಾದ ಕಾಫಿ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಏಕೆಂದರೆ ಕೆಲಸ ಸಮಯದಲ್ಲಿ ಕಾಫಿ ಸುಲಭವಾಗಿ ಲಭ್ಯವಿರುವ ಕಾರಣ ಅಭ್ಯಾಸವನ್ನು […]
ಎಂ ಐ ಟಿ ಕೆ ಯಲ್ಲಿ ಎಂ ಬಿ ಎ ವಿದ್ಯಾರ್ಥಿಗಳಿಗೆ ಕಾರ್ಯಗಾರ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂ.ಬಿ.ಎ ವಿಭಾಗದ ವತಿಯಿಂದ ಇತ್ತೀಚೆಗೆ ಮೈಕ್ರೋ ಸೆಷನ್ ಆನ್ ಎಂಟ್ರೆಪ್ರೆನರ್ ಶಿಪ್ ಎಂಡ್ ಇಂಡಸ್ಟ್ರಿ ಟ್ರೆಂಡ್ಸ್ ಎಂಬ ವಿಷಯದ ಬಗ್ಗೆ ಕಾರ್ಯಗಾರವನ್ನು ನಡೆಸಲಾಯಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಶ್ರುತಿ ದಿನಕರ್, ಫೌಂಡರ್, ಸಿಇಒ ಅವಿನ್ಯ ಟ್ಯಾಲೆಂಟ್ (ಕೆನಡಾ) ಇವರು ಆಗಮಿಸಿ ಇಂದಿನ ಎ ಐ ಯುಗದಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಇರುವ ಉದ್ಯೋಗಾವಕಾಶ ಹಾಗೂ ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಹೇಗೆ ಒಬ್ಬ ಯಶಸ್ವೀ ಎಂಟ್ರೇ ಪ್ರೇನರ್ ಆಗಬಹುದು ಅನ್ನುವುದರ […]