ಕಾಪು: ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತ- ಖ್ಯಾತ ಡಿಜೆ ಮರ್ವಿನ್ ಮೃತ್ಯು

ಉಡುಪಿ: ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತವಾಗಿದ್ದು ಖ್ಯಾತ ಡಿಜೆ ಮರ್ವಿನ್ ಸಾವನ್ನಪ್ಪಿದ್ದು ಮತ್ತಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಕಾಪು ತಾಲೂಕಿನ ಮೂಳೂರು ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಪ್ರಜ್ವಲ್ ಮತ್ತು ಪ್ರಸಾದ್ ಗಾಯಗೊಂಡವರು.ಗಾಯಾಳು ಗಳನ್ನು ಉಡುಪಿ ಆಸ್ಪತ್ರೆಗೆ ಉಚ್ಚಿಲ ಆ್ಯಂಬುಲೆನ್ಸ್ ನ ಜಲಾಲುದ್ದೀನ್, ಹಮೀದ್, ಕೆ ಎಂ ಸಿರಾಜ್ ಮತ್ತು ಅನ್ವರ್ ಕೋಟೇಶ್ವರ ಸಾಗಿಸಿದರು. ಉಡುಪಿ, ಮಂಗಳೂರಿನ ಪ್ರಸಿದ್ದ ಡಿಜೆಯಾಗಿದ್ದ ಮರ್ವಿನ್ ಮೆಂಡೋನ್ಸಾ ಹಲವಾರು ಕೊಂಕಣಿ ಮ್ಯೂಸಿಕ್ ವಿಡಿಯೋಗಳನ್ನು ಕೂಡಾ ನಿರ್ದೇಶನ ಮಾಡಿದ್ದರು. […]

ಉಡುಪಿ:ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ : ಅರ್ಜಿ ಆಹ್ವಾನ

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನಾವೀನ್ಯತೆ, ತಾರ್ಕಿಕ ಸಾಧನೆಗಳು, ಕ್ರೀಡೆ, ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಸಾಧಾರಣಾ ಸಾಧನೆ ಮಾಡಿದ 5 ರಿಂದ 18 ವರ್ಷದೊಳಗಿನ ಮಕ್ಕಳಿಂದ ಜಿಲ್ಲಾ ಮಟ್ಟದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಪ್ರತಿ ಮಗುವಿಗೆ ತಲಾ ರೂ.10,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾಗುವ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು ಸಾಧನೆ ಅಸಾಧಾರಣವೆಂದು ಸಮರ್ಥಿಸಲು ಪೂರಕ […]

ಉಡುಪಿ:ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಣೆಗೆ ಸೂಚನೆ

ಉಡುಪಿ: ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು. ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಕೆರೆ, ಬಾವಿ ಹಾಗೂ ಇನ್ನಿತರ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಅವುಗಳ ಭೌತಿಕ ಹಾಗೂ ರಾಸಾಯನಿಕ ಸ್ಥಿತಿಗಳ ಬದಲಾವಣೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಇತರೇ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಅಲ್ಲದೇ ಇಂತಹ ಕಲುಷಿತ ನೀರಿನಿಂದ ಸಾರ್ವಜನಿಕ ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ. […]