ಜಾಹೀರಾತು ನೀತಿ ಪರಿಷ್ಕರಣೆಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬಿಜೆಪಿ ಸದಸ್ಯ ಡಿ.ಎಸ್‌.ಅರುಣ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಜಾಹೀರಾತು ಅನುಷ್ಠಾನ ನಿಯಮಗಳು ಜಾರಿಗೆ ಬಂದು 10 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಜಾಹೀರಾತು ಅನುಷ್ಠಾನ ನಿಯಮಗಳನ್ನು ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಪರಿಷ್ಕೃತ ಕರಡು ಜಾಹೀರಾತು ಅನುಷ್ಠಾನ ನಿಯಮಗಳನ್ನು ತಯಾರಿಸಲಾಗಿದ್ದು, ಸರ್ಕಾರದಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳು ಹಾಗೂ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವಂತೆ […]

ಸಾಮಾಜಿಕ ಜಾಲತಾಣದಲ್ಲಿ ಜಾತಿನಿಂದನೆ ಮಾಡಿದ ಆರೋಪ; ವಕೀಲ ಜಗದೀಶ್ ಬಂಧನ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಜಾತಿನಿಂದನೆ ಮಾಡಿದ ಆರೋಪ ಮಾಡಿದ ಆರೋಪದ ಮೇಲೆ ವಕೀಲ ಜಗದೀಶ್ ಅವರನ್ನು ಶುಕ್ರವಾರದಂದು ನಗರಲದಲ್ಲಿರುವ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಗದೀಶ್ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಮಂಜುನಾಥ್ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಬಿಎನ್‍ಎಸ್ 196 ಮತ್ತು 299 ಅಡಿಯಲ್ಲಿ ಜಗದೀಶ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಗುರುವಾರ ನೋಟಿಸ್ ನೀಡಲು ಜಗದೀಶ್ ಅವರ ಮನೆಗೆ ಪೊಲೀಸರು ಹೋದಾಗ ಬಾಗಿಲು ತೆಗೆಯದೆ ನೊಟೀಸ್ […]

ಉಡುಪಿ ಪೂರ್ಣಪ್ರಜ್ಞ ಇನ್ ಸ್ಟಿಟೂಟ್ ಆಫ್ ಮ್ಯಾನೇಜ್ ಮೆಂಟ್: ಪ್ರವೇಶಾತಿ ಆರಂಭ

ಉಡುಪಿ: ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (PIM), ಉಡುಪಿ, ತರಗತಿ ಕೊಠಡಿಗಳನ್ನು ಮೀರಿದ ಎಂಬಿಎ ಕಾರ್ಯಕ್ರಮದೊಂದಿಗೆ ವ್ಯವಹಾರ ಶಿಕ್ಷಣವನ್ನು ಮರು ವ್ಯಾಖ್ಯಾನಿಸುತ್ತಿದೆ. ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಬೆಂಬಲದೊಂದಿಗೆ, ಈ ಸಂಸ್ಥೆಯು ಶೈಕ್ಷಣಿಕ ಆಳವನ್ನು ನಾವೀನ್ಯತೆ, ಡಿಜಿಟಲ್ ಕೌಶಲ್ಯಗಳು ಮತ್ತು ನೈಜ-ಪ್ರಪಂಚದ ಮಾನ್ಯತೆಯೊಂದಿಗೆ ಸಂಯೋಜಿಸುತ್ತದೆ. PIM ನ MBA ಡ್ಯುಯಲ್ ಸ್ಪೆಷಲೈಸೇಶನ್, SWAYAM ನಿಂದ ಪ್ರಮಾಣೀಕರಣಗಳು, ಉದ್ಯಮ ಮತ್ತು ಕಂಪನಿ ವಿಶ್ಲೇಷಣೆಯ ಕುರಿತು ಹಕ್ಕುಸ್ವಾಮ್ಯ-ಮಾನ್ಯತೆ ಪಡೆದ ಯೋಜನೆಗಳು ಮತ್ತು ಪೇಟೆಂಟ್‌ಗಳನ್ನು ಪ್ರಕಟಿಸುವ ಅವಕಾಶಗಳೊಂದಿಗೆ ಭಿನ್ನವಾಗಿದೆ. […]

ಉಡುಪಿ:ಡಾ. ಶಿವರಾಮ ಕಾರಂತ ಜನ್ಮ ದಿನಾಚರಣೆ : ವಿವಿಧ ಸ್ಪರ್ಧೆಗಳು

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಡಾ. ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಪ್ರಾಥಮಿಕ ಶಾಲಾ ಮಕ್ಕಳಿಗೆ ಕಾರಂತರ ಬಾಲಪ್ರಪಂಚದ ಚಿತ್ರಗಳನ್ನು ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಾಲಪ್ರಪಂಚದ ಚಿತ್ರಗಳ ರಂಗವಲ್ಲಿಯನ್ನು ಸ್ಥಳದಲ್ಲೇ ಬಿಡಿಸುವ ಸ್ಪರ್ಧೆ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನನ್ನ ದೃಷ್ಟಿಯಿಂದ ಕಾರಂತರ ಬದುಕು ಮತ್ತು ಬರಹ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ, ಕಾರಂತರ ಯಾವುದಾದರೂ ಒಂದು ಕೃತಿಯ […]

ಉಡುಪಿ:ದೀಕ್ಷಾ ಭೂಮಿ ಯಾತ್ರೆಗೆ ಡಾ.ಬಿ.ಆರ್. ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ : ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಡಾ.ಬಿ.ಆರ್ ಅಂಬೇಡ್ಕರ್ ರವರ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರ ದೀಕ್ಷಾ ಭೂಮಿಯಲ್ಲಿ ಅಕ್ಟೋಬರ್ 2ರಂದು ನಡೆಯುವ ಪರಿವರ್ತನಾ ದಿನಕ್ಕೆ ಭೇಟಿ ನೀಡಲು ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಇಲಾಖೆಯ ವೆಬ್‌ಸೈಟ್ https://swd.karnataka.gov.in/ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 9 ಕೊನೆಯ ದಿನ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಂಬಂಧಿಸಿದ ಸೂಕ್ತ ದಾಖಲೆಯೊಂದಿಗೆ ಎರಡು ದಿನಗಳ ಒಳಗಾಗಿ ಉಪನಿರ್ದೇಶಕರ ಕಚೇರಿ, […]