ಬಂಟಕಲ್: ಸೋದೆ ಶಿಕ್ಷಣ ಸಂಸ್ಥೆ ಸಮೂಹ ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ, (ಮಾಹೆ) ಜೊತೆ ಒಡಂಬಡಿಕೆ

ಉಡುಪಿ, ಬಂಟಕಲ್: ಶ್ರೀ ಸೋದೆ ವಾದಿರಾಜ ಮಠಶಿಕ್ಷಣ ಸಂಸ್ಥೆ ಸಮೂಹ ಮತ್ತು ಮಣಿಪಾಲ ಉನ್ನತ ಶಿಕ್ಷಣಅಕಾಡೆಮಿ, (ಮಾಹೆ) ಮಣಿಪಾಲ ಜೊತೆ ದಿನಾಂಕ 22 ಆಗಸ್ಟ್2025 ರಂದು ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಒಪ್ಪಂದವು ಶೈಕ್ಷಣಿಕ ಕ್ಷೇತ್ರದಲ್ಲಿ ನವೀನತೆ,ಸಂಶೋಧನೆಯಲ್ಲಿ ಉತ್ಕೃಷ್ಟತೆ ಮತ್ತು ಉದ್ಯಮಶೀಲತೆಯಕ್ಷೇತ್ರದಲ್ಲಿ ಅಭಿವೃದ್ಧಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಜ್ಞಾನವನ್ನುಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ.ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಹ್ಯಾಕಥಾನ್, ಇಂಟರ್ನ್ಶಿಪ್, ಮತ್ತು ಸಣ್ಣ ಪ್ರಾಜೆಕ್ಟ್ಗಳ ಮೂಲಕ ತಮ್ಮ ಕೌಶಲ್ಯಗಳನ್ನು ಮತ್ತು ವೃತ್ತಿಪರ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳುವಂತಹ […]
ಕಾರ್ಕಳ ಕ್ರೆಸ್ಟ್ ಕಿಂಗ್: ಶಗುನ್ ಎಸ್ ವರ್ಮ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ರಾಷ್ಟ್ರೀಯ ವಾಲಿಬಾಲ್ ತಂಡದ ಅರ್ಹತಾ ಶಿಬಿರಕ್ಕೆ ಆಯ್ಕೆ

ಕಾರ್ಕಳ: ಇಲ್ಲಿನ ಕ್ರೈಸ್ಟ್ಕಿಂಗ್ ಆಂಗ್ಲಮಾಧ್ಯಮಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಶಗುನ್ ಎಸ್ ವರ್ಮ ಹೆಗ್ಡೆ ರಾಷ್ಟ್ರೀಯ ಸ್ಕೂಲ್ ಗೇಮ್ಸ್ಫೆಡರೇಶನ್‌ನವರು ನಡೆಸುವ 15ರ ವಯೋಮಿತಿಯಬಾಲಕಿಯರ ವಿಭಾಗದ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಕರ್ನಾಟಕದ ಎಲ್ಲಾ ಜಿಲ್ಲೆಗಳ ಆಟಗಾರರು ಭಾಗವಹಿಸಿದ್ದು ಅದರಲ್ಲಿ ಎಂಟು ಆಟಗಾರರು ಆಯ್ಕೆಯಾಗಿದ್ದರು. ಇದರಲ್ಲಿ ಉಡುಪಿ ಜಿಲ್ಲೆಯಿಂದ ಏಕೈಕ ಆಟಗಾರಳಾಗಿ ಶಗುನ್ ಆಯ್ಕೆಯಾಗಿದ್ದಾಳೆ. ಭಾರತವನ್ನು ಪ್ರತಿನಿಧಿಸುವ ರಾಷ್ಟೀಯ ತಂಡದ ಆಯ್ಕೆಪ್ರಕ್ರಿಯೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿದ್ದುಇಲ್ಲಿ ಆಯ್ಕೆಯಾದ ತಂಡವು ಮುಂದಿನ ಅಂತರಾಷ್ಟ್ರೀಯಪಂದ್ಯವನ್ನು ಚೀನಾದ ಶಾಂಗ್ಲೋದಲ್ಲಿ ಆಡಲಿದೆ. ಈಕೆಕಲ್ಲೊಟ್ಟೆ ನಿವಾಸಿ […]
ಗಣೇಶ ಹಬ್ಬಕ್ಕೆ ಹೆಚ್ಚುವರಿ ವಿಶೇಷ ಬಸ್ ಓಡಿಸಲು KSRTC ರೆಡಿ: ಯಾವ ರೂಟ್ ಗೆ?

ಬೆಂಗಳೂರು: ಗೌರಿ ಮತ್ತು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ನಗರಗಳಿಗೆ ತೆರಳುವ ಜನರ ಸಂಖ್ಯೆ ಹೆಚ್ಚಿರುವ ಕಾರಣ ಕೆಎಸ್‌ಆರ್‌ಟಿಸಿಯು 1500 ಹೆಚ್ಚುವರಿ ವಿಶೇಷ ಬಸ್ ಸೇವೆಗಳನ್ನು ಆರಂಭಿಸುವುದಾಗಿ ತಿಳಿಸಿದೆ. ಹೆಚ್ಚುವರಿ ಬಸ್ಸುಗಳು ಆ.25 ಮತ್ತು 26ರಿಂದ ಬೆಂಗಳೂರಿನ ವಿವಿಧ ಕಡೆಗಳಿಂದ ರಾಜ್ಯ ಮತ್ತು ಹೊರರಾಜ್ಯಗಳ ನಿಗದಿತ ಸ್ಥಳಗಳಿಗೆ ಸೇವೆ ನೀಡಲಿವೆ. ಹಾಗೆಯೇ, ಆ.27 ಮತ್ತು ಆ.31ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಕಾರ್ಯಾಚರಣೆ ಮಾಡಲಾಗುತ್ತದೆ. ಈ ಬಸ್‌ಗಳಿಗೆ ಪ್ರಯಾಣಿಕರು www.ksrtc.karnataka.gov.in ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ. […]
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು: ಎನ್ಎಸ್ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ

ಉಡುಪಿ, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಇದರ 2025-26ರ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಮಹತ್ವದ ಕುರಿತು ಮಾಹಿತಿ ಕಾರ್ಯಕ್ರಮ ಆಗಸ್ಟ್ 21ರಂದು ಜರುಗಿತು. ಸಾಹಿತಿ, ಉಪನ್ಯಾಸಕಿ ಶ್ರೀಮತಿ ವಾಸಂತಿ ಅಂಬಲಪಾಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಗೈದು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಪರೋಪಕಾರ ತಾಳ್ಮೆ, ಸಂವೇದನಾಶೀಲ ಗುಣವಿರಬೇಕು. ಧನಾತ್ಮಕ ಚಿಂತನೆ, ಆತ್ಮ ವಿಶ್ವಾಸಯುಕ್ತ ನಡವಳಿಕೆ ಯಶಸ್ಸು ಸಾಧಿಸಲು ಪೂರಕ. ಶಿಸ್ತು ಸಂಯಮ ಭಾವನಾತ್ಮಕ ಸಂಬಂಧಗಳ ಅರಿವು ಹಾಗೂ ಹೊಂದಾಣಿಕೆ ಮನೋಭಾವಗಳ […]
ನ್ಯಾಯಾಲಯಕ್ಕೆ ಹಾಜರಾದ ತಿಮರೋಡಿ: ಎರಡು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ

ಉಡುಪಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು. ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಾಳಬಗಿ ಸಹಿತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು. ಮಹೇಶ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಕಸ್ಟಡಿಗೆ ಕೇಳಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 1.30ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಎರಡು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ […]