ಉಡುಪಿಯಲ್ಲಿ ಲಭ್ಯವಿದೆ ಅವಿವಾ ಪವರ್ ವಾಲ್!

ಉಡುಪಿ:ಉಡುಪಿ ಹಾಗೂ ಮಂಗಳೂರು ಪ್ರದೇಶದ ಜನರಿಗೆ ಸೂರ್ಯಭಾಗ್ಯ ಸೋಲಾರ್ ತನ್ನ ಕಲ್ಸಂಕ ಶಾಖೆಯಲ್ಲಿ ಅವಿವಾ ಪವರ್ ವಾಲ್ ಅನ್ನು ಪರಿಚಯಿಸಿದೆ. ಇದು ಲಿಥಿಯಮ್ ಆಯರನ್ ಫಾಸ್ಫೇಟ್ (LFP) ಬ್ಯಾಟರಿ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಸೌರ ಶಕ್ತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಅಗತ್ಯವಿದ್ದಾಗ ಮನೆಗಳಿಗೆ ನಿರಂತರ ವಿದ್ಯುತ್ ಒದಗಿಸುತ್ತದೆ. ಜೊತೆಗೆ, ಇದು ಪವರ್ ಸ್ಟೆಬಿಲೈಸರ್ ಆಗಿ ಕೆಲಸ ಮಾಡಿ, ನಿಮ್ಮ ಮನೆ ಉಪಕರಣಗಳಿಗೆ ಸಮತೋಲನದ ವಿದ್ಯುತ್ ಪೂರೈಕೆ ಮಾಡುತ್ತದೆ. ಅವಿವಾ ಪವರ್ ವಾಲ್ ಮೂಲಕ ವಿದ್ಯುತ್ ಕಡಿತದ ಸಂದರ್ಭದಲ್ಲೂ ಜೀವನ ವ್ಯತ್ಯಯವಾಗದೇ […]
ಉಡುಪಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕಾರಿಗೆ ಗುದ್ದಿದ ಪ್ರಕರಣ; ಮೂವರ ಬಂಧನ

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸಿಗೆ ಸಂಬಂಧಿಸಿದಂತೆ ಇಂದು ಆರೋಪಿತನಾದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆದು ಬ್ರಹ್ಮಾವರ ಠಾಣೆಗೆ ಕರೆತರುತ್ತಿರುವ ಸಂದರ್ಭದಲ್ಲಿ ಅವರ ಬೆಂಬಲಿಗರೆನ್ನಲಾದ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕಾರಿಗೆ ಗುದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಉಜಿರೆಯ ನಿವಾಸಿಗಳಾದ ಸೃಜನ್ ಎಲ್., ಹಿತೇಶ್ ಶೆಟ್ಟಿ, ಸಹನ್ ಎಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜೊತೆಗೆ ಆರೋಪಿಗಳು ಕೃತ್ಯಕ್ಕೆ ಬಳಸಿದ […]
ಉಡುಪಿ:ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ

ಉಡುಪಿ: ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ಎನ್.ಟಿ.ಇ.ಪಿ) ವನ್ನು ರಾಷ್ಟ್ರೀಯ ಆರೋಗ್ಯಮಿಷನ್ (ಎನ್.ಹೆಚ್.ಎಂ) ಆಶ್ರಯದಲ್ಲಿ ಜಾರಿಗೊಳಿಸಲಾಗಿದೆ. ರೋಗನಿರ್ಣಯ ಮಾಡದ ಕ್ಷಯರೋಗ ಪ್ರಕರಣಗಳನ್ನು ಗುರುತಿಸಲು, ಕ್ಷಯರೋಗ ಸಂಬಂಧಿತ ಸಾವುಗಳನ್ನು ಕಡಿಮೆ ಮಾಡಲು ಮತ್ತು ದೇಶಾದ್ಯಂತ ಹೊಸ ಸೋಂಕುಗಳನ್ನು ತಡೆಗಟ್ಟಲು, ದುರ್ಬಲ ಜನಸಂಖ್ಯೆಯ ಮ್ಯಾಪಿಂಗ್, ಎದೆಯ ಎಕ್ಸ್-ರೇ ಮೂಲಕ ತಪಾಸಣೆ, ಎಲ್ಲಾ ಶಂಕಿತ ಕ್ಷಯರೋಗ ಪ್ರಕರಣಗಳಿಗೆ ಮುಂಗಡ ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆ (ಎನ್.ಎ.ಎ.ಟಿ), ತ್ವರಿತ ಮತ್ತು ಸೂಕ್ತವಾದ ಚಿಕಿತ್ಸೆಯನ್ನು ಪ್ರಾರಂಭಿಸುವುದು, ಹೆಚ್ಚಿನ ಅಪಾಯದ ಕ್ಷಯರೋಗಪ್ರಕರಣಗಳನ್ನು ನಿರ್ವಹಿಸಲು ವಿಭಿನ್ನವಾದ ಕ್ಷಯರೋಗ […]
ಉಡುಪಿ:ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನೂತನವಾಗಿ ನಿರ್ಮಿಸಿದ್ದ ಅಕ್ಕ ಕೆಫೆ ಪ್ರಾರಂಭವಾಗಿದ್ದು, ಸಂಜೀವಿನಿ ಮಹಿಳೆಯರು ತಯಾರಿಸಿದ ಉಟೋಪಹಾರ ದೊರೆಯಲಿದೆ. ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಅನುಷ್ಠಾನಕ್ಕೆ ತಂದ ಅಕ್ಕ ಕೆಫೆ ಯೋಜನೆಯು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವುದರ ಜೊತೆಗೆ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಕಲ್ಯಾಣಪುರ ಗ್ರಾಮ ಪಂಚಾಯತ್‌ನ ಬ್ರಹ್ಮಶ್ರೀ ಸಂಜೀವಿನಿ ಒಕ್ಕೂಟದ ಮಹಿಳೆಯರು ಅಕ್ಕ […]
ಉಡುಪಿ:ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆ :ಅರ್ಜಿ ಆಹ್ವಾನ

ಉಡುಪಿ:ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ನಾಗರೀಕ ಸೇವಾ ಸಮಾಜದಿಂದ ಒಬ್ಬ ಸದಸ್ಯರನ್ನು ನೇಮಕಮಾಡಬೇಕಾಗಿರುವ ಹಿನ್ನೆಲೆ, ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಬಯೋ ಡಾಟಾ (ವೈಯಕ್ತಿಕ ಮಾಹಿತಿ) ಹಾಗೂ ಸಹಮತಿ ಪತ್ರ ಸಹಿತ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 4 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಆಡಳಿತ ಶಾಖೆ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ:0820-2574925 ಅನ್ನು ಸಂಪಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ […]