ಗೋಲ್ಡ್ ಮ್ಯಾನ್ ಗೆ ಒಲಿದ ಇಂಟರ್ ನ್ಯಾಶನಲ್ ಗೋಲ್ಡ್ ಅವಾರ್ಡ್

ಉಡುಪಿಯ ಆಭರಣ ಜ್ಯುವೆಲ್ಲರ್ಸ್ ನಿರ್ದೇಶಕ ಸುಭಾಶ್ ಎಂ. ಕಾಮತ್ ಕೀನ್ಯಾದ ಮಸೈಮಾರಾದಲ್ಲಿ ಸೆರೆಹಿಡಿದಿರುವ ಎರಡು ಚೀತಾಗಳು ತನ್ನ ಬೇಟೆಯನ್ನು ಬೆನ್ನು ಹತ್ತುವ “ಹಂಗರ್ ವರ್ಸಸ್ ಹೋಪ್” ಛಾಯಾಚಿತ್ರಕ್ಕೆ ಓರಾ ಡಿ ಫ್ರೇಮ್ ಸರ್ಕ್ಯುಟ್ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯ ವನ್ಯಜೀವಿ ವಿಭಾಗದಲ್ಲಿ ಕ್ಲಬ್ ಗೋಲ್ಡ್ ಅವಾರ್ಡ್ ಪಡೆದಿರುತ್ತಾರೆ. ಐವತ್ತಕ್ಕೂ ಹೆಚ್ಚು ದೇಶಗಳ ಛಾಯಾಗ್ರಾಹಕರು ಭಾಗವಹಿಸಿರುವ ಈ ಸ್ಪರ್ಧೆಯು ಪ್ರತಿಷ್ಟಿತ ಎಫ್. ಐ. ಎ. ಪಿ ಮಾನ್ಯತೆಯನ್ನು ಪಡೆದಿರುತ್ತದೆ. ಉಡುಪಿಯ ಪ್ರಸಿದ್ಧ ಉದ್ಯಮಿಯಾಗಿರುವ ಸುಭಾಶ್ ಕಾಮತ್ ಕೋವಿಡ್ ಲಾಕ್ ಡೌನ್ […]
ಅಮೆರಿಕದ ಐ ಸಿ ಎಸ್ ಇಂಟರ್‌ನ್ಯಾಷನಲ್‌ನಿಂದ ಆಸ್ಟ್ರೋ ಮೋಹನ್ ಅವರಿಗೆ ಗೌರವ ಫೆಲೋಶಿಪ್

ಉಡುಪಿ, ಆಗಸ್ಟ್ 19: ವಿಶ್ವ ಛಾಯಾಗ್ರಹಣ ದಿನದಂದು, ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಇಮೇಜ್ ಕಾಲಿಗ್ ಸೊಸೈಟಿ ಇಂಟರ್‌ನ್ಯಾಷನಲ್ (ICS) ವತಿಯಿಂದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಹಾನರರಿ ಫೆಲೋಶಿಪ್ (Hon.FICS) ಅನ್ನು ಪ್ರದಾನ ಮಾಡಲಾಗಿದೆ. ಶ್ರೀ ಟೋನಿ ಲೀ ಕಿಮ್ ಥುವಾನ್ APSA, Hon.EFIAP, ಕು. ಸಾರಾ ತೈ ಮೇ ಲಿನ್ ARPS ಹಾಗೂ ICS ಗೌರವ ಸಮಿತಿ ಅವರ ನೇತೃತ್ವದಲ್ಲಿ ನೀಡಲಾದ ಈ ಪ್ರಶಸ್ತಿ, ಛಾಯಾಗ್ರಹಣ ಕಲೆ ಹಾಗೂ ಸಂಸ್ಕೃತಿಯ ಅಭಿವೃದ್ದಿಗೆ, […]
ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ಮೂಡುಬಿದಿರೆ: ತುಮಕೂರಿನ ಭಾರತೀಯ ಮೆಡಿಕಲ್ ಅಸೋಸಿಯೇಷನ್, ತುಮಕೂರಿನ ಬ್ಯಾಡ್ಮಿಂಟನ್ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದ್ದ 28ನೇ ಸೋಮಣ್ಣ ಸ್ಮಾರಕ ಶಟಲ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಮೂಡುಬಿದಿರೆಯ ಡಾ.ವಿನಯ್ ಆಳ್ವ ಹಾಗೂ ಡಾ ಕಾರ್ತಿಕ್ ಆರ್ ಚಂದ್ರರ ಜೋಡಿ ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಿತು. ಈ ಜೋಡಿ ಫೈನಲ್ಸ್ನಲ್ಲಿ 21-18, 15-21, 21-10 ಸೆಟ್‌ಗಳ ಅಂತರದಲ್ಲಿ ಜಯಿಸಿ ಮೊದಲ ಸ್ಥಾನ ಪಡೆಯಿತು. ಕಳೆದ ಸಾಲಿನಲ್ಲಿ ಇದೇ ಜೋಡಿ ಬೆಂಗಳೂರಿನ ಆಕ್ಸ್ಫರ್ಡ್ ಮೆಡಿಕಲ್ […]
ಕೇಂದ್ರ ಸರಕಾರದ ಹಿಂದಿ ಸಲಹಾ ಸಮಿತಿಗೆ ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ ಡಾ.ದಯಾನಂದ ಎನ್ ಬಾಯಾರ್ ನೇಮಕ

ಕಾರ್ಕಳ: ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಕಂದಾಯ, ವೆಚ್ಚ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ಇಲಾಖೆಗಳ ಅಧಿಕೃತ ಭಾಷಾ ಸಮಿತಿಯ ಹಿಂದಿ ಸಲಹಾ ಸಮಿತಿಗೆ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ದಯಾನಂದ ಎನ್ ಬಾಯಾರ್ ಇವರು ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುತ್ತಾರೆ. ಇವರು ಮೂಲತಃ ಕಾಸರಗೋಡು ಜಿಲ್ಲೆಯ ಬಾಯಾರಿನವರಾಗಿರುತ್ತಾರೆ.
ಕಾರ್ಕಳ ಕ್ರೈಸ್ಟ್ ಕಿಂಗ್: ಫುಟ್ಬಾಲ್ ಪಂದ್ಯಾಟದಲ್ಲಿ ಐದು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ.

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ, ಜೇಸಿಸ್ ವಿದ್ಯಾಸಂಸ್ಥೆ ಕಾರ್ಕಳ ಇವರ ಆಶ್ರಯದಲ್ಲ್ಲಿ ನಿಟ್ಟೆಯ ಬಿ.ಸಿ.ಆಳ್ವ ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಬಾಲಕರ ಮತ್ತು ಬಾಲಕಿಯರ ವಿಭಾಗಗಳ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಒಟ್ಟು 16 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ತಂಡವು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರೆ ಬಾಲಕರ ವಿಭಾಗದಲ್ಲಿ […]