ಮೇಲ್ಮನೆ ಸದಸ್ಯರಾಗಿ 45 ವರ್ಷ ಸೇವೆ: ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದ ಮಂಜುನಾಥ ಭಂಡಾರಿ

ಬೆಂಗಳೂರು: ವಿಧಾನಮಂಡಲದಲ್ಲಿ ಅತ್ಯಂತ ಹಿರಿಯರಾಗಿ ಸಭಾಪತಿ ಪೀಠದಲ್ಲಿ ಕುಳಿತಿರುವ ಬಸವರಾಜ ಹೊರಟ್ಟಿ ಅವರು ಮೇಲ್ಮನೆ ಸದಸ್ಯರಾಗಿ 45 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ನಿವಾಸದಲ್ಲಿ ಭೇಟಿಯಾಗಿ ಶುಭಾಶಯಗಳನ್ನು ಸಲ್ಲಿಸಿದರು. ಹೊರಟ್ಟಿಯವರು ಓರ್ವ ನಿಷ್ಠುರವಾದಿಯಾಗಿ ಸದನದಲ್ಲಿ ಜನರ ಪರವಾದ ಗಟ್ಟಿ ಧ್ವನಿಯಾಗಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ಮೇಲ್ನೋಟಕ್ಕೆ ಬಸವರಾಜ ಹೊರಟ್ಟಿಯವರು ಒರಟು ಮನಷ್ಯರಾಗಿ ಕಂಡರೂ ಅವರ ಮಾತು ಬಹಳ ಖಡಕ್. ವಿಶೇಷವಾಗಿ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಬಸವರಾಜ ಹೊರಟ್ಟಿಯವರು ʻಹೊರಟ್ಟಿ ಮಾಸ್ತರರು’ ಎಂದೇ […]
ಉಡುಪಿ: ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹ಅಡ್ವೈಸರ್ -3🔹ಮೆಕ್ಯಾನಿಕ್ -4🔹ಸ್ಪೇರ್ಸ್ ಮ್ಯಾನೇಜರ್ -1🔹ಫ್ಲೋರ್ ಮ್ಯಾನೇಜರ್ -1🔹ವಾಶ್ -1🔹ಹೆಲ್ಪರ್ಸ್ -3 ಅನುಭವ ಇರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ. ಫ್ರೆಷರ್ಸ್ ಕೂಡ ಅಪ್ಲೈ ಮಾಡಬಹುದು. ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಮೇಲ್ ಐಡಿಗೆ ಕಳುಹಿಸಿ[email protected] 📞+91 7996210666
ಧರ್ಮಸ್ಥಳದ ವಿರುದ್ದ ವ್ಯವಸ್ಥಿತ ಷಡ್ಯಂತ್ರ; ತನಿಖೆ ಬಗ್ಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ

ಧರ್ಮಸ್ಥಳ: ರಾಜ್ಯ ಹಾಗೂ ದೇಶದಲ್ಲಿ ಸಂಚಲನ ಮೂಡಿಸಿದ ಧರ್ಮಸ್ಥಳದ ತಲೆ ಬುರುಡೆ ಕೇಸ್ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರ ಅಂತ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಇದೆಲ್ಲ ಅನಾವಶ್ಯಕ ವಾಗಿ ಮಾಡಿದ ಪ್ರಯತ್ನ. ಕ್ಷೇತ್ರ, ಕ್ಷೇತ್ರದ ಇತಿಹಾಸ, ಗೌರವ ಹಾಗೇ ಇದೆ. ಕ್ಷೇತ್ರದ ಬಗ್ಗೆ ಹಿಂದಿನಿಂದಲೂ ಷಡ್ಯಂತ್ರ ಮಾಡಿದ್ದಾರೆ ಅಂತ ಹೇಳಿದ್ದಾರೆ. ಎಸ್ಐಟಿ ತನಿಖೆಯನ್ನು ಸ್ವಾಗತಿಸಿದ ಅವರು, ಇದು ಒಳ್ಳೆಯ ಕೆಲಸ. ಸತ್ಯ ಹೊರಗೆ […]
ನಾಯಿಯನ್ನು ರಕ್ಷಿಸಲು ಹೋದ ಸಬ್ ಇನ್ಸ್‌ಪೆಕ್ಟರ್ ರಸ್ತೆ ಅಪಘಾತದಲ್ಲಿ ಮೃತ್ಯು!

ಗಾಜಿಯಾಬಾದ್: ಗಾಜಿಯಾಬಾದ್ ನಲ್ಲಿ ಆ.18ರಂದು ರಸ್ತೆಗೆ ಅಡ್ಡ ಬಂದ ಬೀದಿ ನಾಯಿಯನ್ನು ರಕ್ಷಿಸಲು ಹೋಗಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಬ್ ಇನ್ಸ್‌ಪೆಕ್ಟರ್ ರಿಚಾ ಸಚನ್ (25). ರಿಚಾ ಅವರು ಕಾನ್ಪುರ ನಿವಾಸಿಯಾಗಿದ್ದು, ಇವರು ಸೋಮವಾರ ಕರ್ತವ್ಯ ಮುಗಿಸಿ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೀದಿ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದೆ ಈ ವೇಳೆ ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು […]
ಲೋ ಬಿಪಿಗೆ 6 ವರ್ಷದ ಬಾಲಕ ಮೃತ್ಯು!

ಚಾಮರಾಜನಗರ: ಕಡಿಮೆ ರಕ್ತದೊತ್ತಡದಿಂದ 6 ವರ್ಷದ ಪುಟ್ಟ ಪೋರ ಸಾವಿಗೀಡಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ವರದಿಯಾಗಿದೆ.ಬನ್ನಿತಾಳಪುರ ಗ್ರಾಮದ ಮಹೇಶ್ ಮತ್ತು ಸುಮಾ ದಂಪತಿ ಪುತ್ರ ಆರ್ಯ (6) ಮೃತ ಬಾಲಕ ಎಂದು ಗುರುತಿಸಲಾಗಿದೆ. ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈತನಿಗೆ ಹೃದಯ ಸಮಸ್ಯೆ ಇತ್ತು ಎಂದು ಹೇಳಲಾಗಿದೆ. ಸೋಮವಾರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ವಿಷಯ ತಿಳಿದ ಬಾಲಕನ ಹೆತ್ತವರು ಮತ್ತು ಕುಟುಂಬಸ್ಥರ […]