2 ವರ್ಷ 7 ತಿಂಗಳಲ್ಲಿ ಮಹಿಳೆಯರು,ಮಕ್ಕಳ ಮೇಲಿನ ದೌರ್ಜನ್ಯ: ಒಟ್ಟು 43,052 ಪ್ರಕರಣ

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹಲವು ಕಾನೂನುಗಳು ಇದ್ದರೂ, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಎರಡು ವರ್ಷ, ಏಳು ತಿಂಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ 43,053 ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. 2023 ರಿಂದ 2025ರ ಜುಲೈ ಅವಧಿಯಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ ಹಾಗೂ ಸಾವು, ಗಂಡನಿಂದ ಕಿರುಕುಳ, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012), ಬಾಲ್ಯ ವಿವಾಹ, ಬಾಲ ಕಾರ್ಮಿಕ, […]
ಕೃಷ್ಣ ಜನ್ಮಾಷ್ಟಮಿ ಮೆರವಣಿಗೆ ವೇಳೆ ವಿದ್ಯುತ್ ಅವಘಡಕ್ಕೆ ಐವರು ಸಾವು!

ಹೈದರಾಬಾದ್: ಶ್ರೀಕೃಷ್ಣಾ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಮೆರವಣಿಗೆಯ ವೇಳೆ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಐವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್ ನ ರಾಮಂತಪುರದ ಗೋಕುಲೇನಗರದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ. ಶ್ರೀಕೃಷ್ಣಾ ಜನ್ಮಾಷ್ಟಮಿ ಆಚರಣೆ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು ಈ ವೇಳೆ ರಥವನ್ನು ಎಳೆಯುತ್ತಿದ್ದ ವಾಹನ ಕೆಟ್ಟು ನಿಂತಿದ್ದರಿಂದ, ಯುವಕರೆಲ್ಲರೂ ಸೇರಿ ಕೈಯಿಂದಲೇ ದೂಡಿಕೊಂಡು ಮೆರವಣಿಗೆ ಮುನ್ನೆಡೆಸುತ್ತಿದ್ದ ಸಂದರ್ಭ ರಥ ರಸ್ತೆ ಬದಿ ಹಾದುಹೋದ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ ಈ ವೇಳೆ ರಥ ದೂಡುತ್ತಿದ್ದ ಒಂಭತ್ತು […]
ಅಫಘಾತದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ AI

ನಾಗ್ಪುರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅಪಘಾತದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಎಐ (ಕೃತಕ ಬುದ್ಧಿಮತ್ತೆ) ಬಳಸಿಕೊಂಡು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹ ಸಾಗಿಸಲು ಯಾರಿಂದಲೂ ಸಹಾಯ ಸಿಗದ ಕಾರಣ, ದೇಹವನ್ನು ಬೈಕ್‌ಗೆ ಕಟ್ಟಿ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಕಳೆದ ವಾರ ನಡೆದಿತ್ತು. ಆಗಸ್ಟ್ 9 ರಂದು ನಾಗ್ಪುರ–ಜಬಲ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಬೈಕ್‌ಗೆ ದೇಹವನ್ನು ಕಟ್ಟಿ ಸಾಗಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ […]
ಎಂ.ಸಿಸಿ. ಬ್ಯಾಂಕಿನ ಕುಲಶೇಖರ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮತ್ತು 11ನೇ ಎಟಿಎಮ್ ಉದ್ಘಾಟನೆ

ಮಂಗಳೂರು: ತನ್ನ ಗೌರವಾನ್ವಿತ ಗ್ರಾಹಕರ ಅನುಕೂಲಕ್ಕಾಗಿ, ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯನ್ನು ಆಗಸ್ಟ್ 17 ರಂದು ಮಂಗಳೂರಿನ ಕಲ್ಪನೆಯಲ್ಲಿರುವ ಸ್ಪೆಕ್ಟ್ರಮ್ ಬಿಸಿನೆಸ್ ಸೆಂಟರ್‌ನ ಕೆಳ ಮಹಡಿಯಲ್ಲಿರುವ ಹೊಸದಾಗಿ ಖರೀದಿಸಿದ ಸ್ವಂತ ನಿವೇಶನಕ್ಕೆ ಸ್ಥಳಾಂತರಿಸಲಾಯಿತು. ಹೊಸ ಕಛೇರಿಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಮಂಗಳೂರಿನ ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಶ್ರೈನ್‌ನ ನಿರ್ದೇಶಕ ವಂದನೀಯ ಸ್ಟಿಫನ್ ಪಿರೇರಾ, ಒಸಿಡಿ ಅವರು ದೀಪ ಬೆಳಗಿಸುವ ಮೂಲಕ ಪ್ರಾರಂಬಿಸಿದರ. ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ನ ಧರ್ಮಗುರುಗಳಾದ […]
ಶ್ರೀ ಹಟ್ಟಿಯಂಗಡಿ ಮೇಳ ತಿರುಗಾಟದ ದಶಮಾನೋತ್ಸವ ಮೇಳಕ್ಕೆ ಹತ್ತು ವರ್ಷ ಒಂದು ಮಹಾನ್ ಸಾಧನೆ: ಡಾ.ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ : ಯಕ್ಷಗಾನವನ್ನು ನಾವು ಕೂತು ಚೆನ್ನಾಗಿ ಆಸ್ವಾದಿಸಬಹುದು, ಬೇಕಾಬಿಟ್ಟಿ ಟೀಕೆ ಕೂಡಾ ಮಾಡಬಹುದು. ಆದರೆ ಮೇಳಗಳನ್ನು ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಇದೊಂದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಶ್ರೀ ಹಟ್ಟಿಯಂಗಡಿ ಮೇಳ ತಿರುಗಾಟದ ದಶಮಾನೋತ್ಸವ ಆಚರಿಸುತ್ತಿರುವುದು ಮಹಾನ್ ಸಾಧನೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ದ್ಯುತಿಪರ್ವ ಯಕ್ಷ ಟ್ರಸ್ಟ್ ಕುಂದಾಪುರ ಹಾಗೂ ನಮ್ಮ ಕಲಾಕೇಂದ್ರ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಶ್ರೀ ಹಟ್ಟಿಯಂಗಡಿ ಮೇಳದ ತಿರುಗಾಟದ […]