ಮಣಿಪಾಲ ಜ್ಞಾನಸುಧಾ : ಸ್ವಾತಂತ್ರ್ಯ ದಿನಾಚರಣೆ; ದೇವ ಭಕ್ತಿಗೂ ಮಿಗಿಲು ದೇಶಭಕ್ತಿ : ಮುನಿರಾಜ ರೆಂಜಾಳ

ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಹಾಗೂಮಣಿಪಾಲ ಪ್ರಿ ಯುನಿವರ್ಸಿಟಿ ಕಾಲೇಜುಗಳ ಸಂಯಕ್ತಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನುಆಚರಿಸಲಾಯಿತು. ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸಂಚಾಲಕರಾದ ಶ್ರೀ ಪ್ರಕಾಶ್ ಶೆಟ್ಟಿಯವರುಧ್ವಜಾರೋಹಣಗೈದರು. ಸ್ವಾತಂತ್ರ್ಯೋತ್ಸವದ ಶುಭಸಂದರ್ಭದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತ ಶ್ರೀಮುನಿರಾಜ ರೆಂಜಾಳ ಅವರು ಸ್ವಾತಂತ್ರ್ಯದ ನೆಲೆ ಬೆಲೆವಿಷಯದ ಕುರಿತು ಮಾತನಾಡಿದರು. “ದೇವರಿಗೆ ಮುಖಕ್ಕೆ ನೇರವಾಗಿ ಕೈ ಮುಗಿದರೆ ಆಕಾಶದೆತ್ತರಕ್ಕೆ ಹಾರುವ ತ್ರಿವರ್ಣ ಧ್ವಜಕ್ಕೆ ತಲೆ ಎತ್ತಿ ಸೆಲ್ಯೂಟ್ ಮಾಡುವ ಮೂಲಕ ‘ದೇವ ಭಕ್ತಿಗೂ ಮಿಗಿಲು ದೇಶಭಕ್ತಿ […]

ಸ್ವಾತಂತ್ರ್ಯ ದಿನದಂದೇ ಬಳ್ಳಾರಿ ಪಿಎಸ್‌ಐ ಪತ್ನಿ ನೇಣುಬಿಗಿದು ಆತ್ಮಹತ್ಯೆ!

ಬಳ್ಳಾರಿ: ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಳ್ಳಾರಿಯ ಮೋಕಾ ಪೊಲೀಸ್ ಠಾಣೆಯ ಪಿಎಸ್‌ಐ ಕಾಳಿಂಗ ಅವರ ಪತ್ನಿ ಚೈತ್ರಾ (36) ಮನೆಯಲ್ಲಿ ನೇಣುಬಿಗಿದು ಸಾವಿಗೆ ಶರಣಾದ ದಾರುಣ ಘಟನೆ ನಡೆದಿದೆ. ಚೈತ್ರಾ ಅವರು ಬೆಳಗ್ಗೆ ಯಾರೂ ಇಲ್ಲದ ವೇಳೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದರು. ತಮ್ಮ ಪತಿ ಕಾಳಿಂಗ ಹಾಗೂ ಮಕ್ಕಳನ್ನು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕಳುಹಿಸಿದ ಬಳಿಕ, ಮನೆಯಲ್ಲಿ ನೇಣುಬಿಗಿದುಕೊಂಡಿದ್ದಾರೆ. ಈ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಚೈತ್ರಾ ಇತ್ತೀಚಿಗೆ ತೀವ್ರ ಮಾನಸಿಕ ಖಿನ್ನತೆಯಿಂದ […]

ಮಂಗಳೂರು:ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು:79ನೇ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು:ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿರಾಜಕೀಯವನ್ನು ಮೀರಿ ದೇಶಸೇವೆಗಾಗಿ ನಮ್ಮ ಪೂರ್ವಜರು ತೊಡಗಿಸಿಕೊಂಡಿದ್ದರು, ಅಂತೆಯೇ ಇಂದು ವಿದ್ಯಾರ್ಥಿಗಳು ಹೊಸ ರಾಷ್ಟ್ರವನ್ನು ಕಟ್ಟುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಂಗಳೂರು ನಗರ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಶ್ರೀಮತಿ ಗೀತಾ ಕುಲಕರ್ಣಿ ಅವರು ಹೇಳಿದರು. ಅವರು ಮಂಗಳೂರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಎಕ್ಸ್ಪೋಢಿಯಂನಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಅವರು ಮಾತನಾಡುತ್ತ ಸ್ವಾತಂತ್ರ್ಯವು ಒಂದು ಘಟನೆಯಲ್ಲ ಅದು ನಮ್ಮ ದೈನಂದಿನ ಕರ್ತವ್ಯವೆಂದು ವಿದ್ಯಾರ್ಥಿಗಳಿಗೆ […]

ಕಾರ್ಕಳ ಕ್ರೈಸ್ಟ್ ಕಿಂಗ್: 79ನೇ ಸ್ವಾತಂತ್ರ್ಯ ದಿನಾಚರಣೆ

ಕಾರ್ಕಳ: ಇಲ್ಲಿನ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾರತೀಯ ವಾಯುಸೇನೆಯ ಮಾಜಿ ಯೋಧ ಡಾ.ನವೀನ್ ಅಮಾನ್ನ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು “ಸ್ವಾತಂತ್ರ್ಯ ಎಂದರೆ ಕೇವಲ ಬೇಡಿಗಳಿಂದ ಮುಕ್ತವಾಗುವುದು ಮಾತ್ರವಲ್ಲ, ಅದು ಜವಾಬ್ಧಾರಿಯ ಪ್ರತೀಕವಾಗಿದೆ. ನಾವು ಪ್ರತಿಯೊಬ್ಬರೂ ದೇಶವನ್ನು ಪ್ರಗತಿಯ ಮಾರ್ಗದಲ್ಲಿ ಕೊಂಡೊಯ್ಯುವ ಸೇನಾನಿಗಳಾಗಬೇಕು” ಎಂದು ಹೇಳಿದರು. ಹತ್ತನೇ ತರಗತಿಯ ಶೆಹ್ನುಮ್ ಫಾತಿಮಾ, ಪ್ರಥಮ ವಿಜ್ಞಾನ ವಿಭಾಗದ ಬ್ರೋವಿನ್ ಅಗೇರ ಸ್ವಾತಂತ್ರ್ಯ ದಿನಾಚರಣೆಯ ಕುರಿತು ತಮ್ಮ […]

ಮೂಡುಬಿದಿರೆ:ಪ್ರತಿಯೊಬ್ಬರ ಶ್ರಮದಿಂದ ಆಧುನಿಕ ಭಾರತ ನಿರ್ಮಾಣ ಸಾಧ್ಯ:ಲೆ. ಜನರಲ್ ಅರುಣ್ ಅನಂತ ನಾರಾಯಣ್

ಮೂಡುಬಿದಿರೆ: ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತ ನಿರ್ಮಿಸುವಲ್ಲಿ ಶ್ರಮವಹಿಸುತ್ತಿದ್ದಾರೆ  ಎಂದು ಭಾರತೀಯ ಸೇನೆ ನಿವೃತ್ತ ಅಧಿಕಾರಿ ಲೆ. ಜನರಲ್ ಅರುಣ್ ಅನಂತನಾರಾಯಣ್ ಹೇಳಿದರು. ವಿದ್ಯಾಗಿರಿಯ ಕೆ. ವಿ. ಸುಬ್ಬಣ್ಣ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವತಿಯಿಂದ ನಡೆದ 79ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಗೈದು ಮಾತನಾಡಿದ ಅವರು, ಇಂದಿನ ಪೀಳಿಗೆಗೆ ಸ್ವಾತಂತ್ರ‍್ಯವೆಂದರೆ ಏನನ್ನಾದರೂ ಸಾಧಿಸುವ ಅವಕಾಶ  ಎಂದು ಭಾಸವಾಗಬಹುದು, ಆದರೆ ನಮ್ಮ ಹಿರಿಯರು ಸರಿಯಾದ ಶಿಕ್ಷಣ ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ […]