ಉಡುಪಿಯಲ್ಲಿ 3BHK ಫ್ಲ್ಯಾಟ್ ಮಾರಾಟಕ್ಕಿದೆ.

ಉಡುಪಿ:ಉಡುಪಿಯಲ್ಲಿ 3BHK ಫ್ಲ್ಯಾಟ್ ಮಾರಾಟಕ್ಕಿದ್ದು,ನೀವು ತಕ್ಷಣ ವಾಸಿಸಲು ಸಿದ್ಧ, ಹಾಗೂ ವಿಶಾಲ ಮನೆ ಹುಡುಕುತ್ತಿದ್ದರೆ, ಇದು ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಪ್ರಮುಖ ವೈಶಿಷ್ಟ್ಯಗಳು: ◾ಬಿಲ್ಟ್-ಅಪ್ ಪ್ರದೇಶ: 1650 ಚದರ ಅಡಿ ವಿಶಾಲ ವಾಸಸ್ಥಳ.◾ಬಾಗಿಲಿನ ದಿಕ್ಕು: ಪಶ್ಚಿಮ – ಪ್ರಕೃತಿಯ ಬೆಳಕು ಹಾಗೂ ಗಾಳಿಯ ಹರಿವು ಹೆಚ್ಚಿಸಲು ಸಹಕಾರಿಯಾಗಿದೆ.◾ಬಿಲ್ಡಿಂಗ್ ವರ್ಷ: 12, ಉತ್ತಮ ನಿರ್ವಹಣೆ ಹೊಂದಿದೆ.◾ಪಾರ್ಕಿಂಗ್: ನಿಗದಿತ ಕಾರ್ ಪಾರ್ಕಿಂಗ್.◾ಜಲ ಸಂಪನ್ಮೂಲ: ನಗರಪಾಲಿಕೆ ಲೈನ್ + ಸ್ವಂತ ಬಾವಿ ಇದೆ.◾ಶಾಂತ ವಸತಿ ಪ್ರದೇಶ: ಶಾಲೆಗಳು, ಮಾರುಕಟ್ಟೆಗಳು, ಉದ್ಯಾನಗಳು ಹಾಗೂ […]

ಆರೋಗ್ಯ ತಪಾಸಣೆ, ಜೀವನ ಶೈಲಿಯಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದ ಶೇ. 80ಕ್ಕಿಂತಲೂ ಹೆಚ್ಚು ಹೃದ್ರೋಗಗಳನ್ನು ತಡೆಯಲು ಸಾಧ್ಯ- ಖ್ಯಾತ ಹೃದ್ರೋಗ ತಜ್ಞರಾದ ಡಾ. ರಂಜನ್ ಶೆಟ್ಟಿ

ಉಡುಪಿ: ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಪ್ರಮಾಣವು ತೀವ್ರ ಕಳವಳಕಾರಿ ಸಂಗತಿಯಾಗಿದೆ. ನಮ್ಮ ದೇಶದಲ್ಲಿ ಹೃದಯಾಘಾತಕ್ಕೆ ತುತ್ತಾಗುವವರಲ್ಲಿ ಶೇ. 50ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಆಘಾತಕಾರಿ. ಆದರೆ, ಸಕಾಲಿಕ ಆರೋಗ್ಯ ತಪಾಸಣೆ ಮತ್ತು ಜೀವನಶೈಲಿಯಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದ ಶೇ. 80ಕ್ಕಿಂತಲೂ ಹೆಚ್ಚು ಹೃದ್ರೋಗಗಳನ್ನು ಖಂಡಿತವಾಗಿಯೂ ತಡೆಯಲು ಸಾಧ್ಯವಿದೆ ಎಂದು ಸ್ಪರ್ಶ್ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ. ರಂಜನ್ ಶೆಟ್ಟಿ ಹೇಳಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 20ರಿಂದ 30 ಅಥವಾ 40ನೇ […]

ವಸತಿ ಯೋಜನೆಗಳಲ್ಲಿ ನೀರು, ಒಳಚರಂಡಿ ನಿರ್ವಹಣೆ ಮಾಡೋದು ಬಿಲ್ಡರ್ ಗಳ ಹೊಣೆ!

ಬೆಂಗಳೂರು: ನಗರದ ವಸತಿ ಯೋಜನೆಗಳಲ್ಲಿ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವುದು ಬಿಲ್ಡರ್‌ಗಳು ಮತ್ತು ಭೂಮಾಲೀಕರ ಜಂಟಿ ಹೊಣೆಗಾರಿಕೆಯಾಗಿದ್ದು, ಈ ಯೋಜನೆಯಲ್ಲಿ ಡೆವಲಪರ್‌ಗಳು ವಿಫಲವಾದರೆ, ಭೂಮಾಲೀಕರು ಸಹ ಜವಾಬ್ದಾರರು ಎಂದು ಕರ್ನಾಟಕ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಆದೇಶ ನೀಡಿದೆ. ಅಲ್ಲದೆ, ಎಲ್ಲಾ ಮೂಲ ಯೋಜನಾ ದಾಖಲೆಗಳನ್ನು ಗೃಹ ಖರೀದಿದಾರರ ಸಂಘಕ್ಕೆ ಹಸ್ತಾಂತರಿಸಬೇಕು ಎಂದು ನಿರ್ದೇಶಿಸಿದೆ. ‘ಮನೆ ಖರೀದಿದಾರರಿಗೆ ನೀರು ಮತ್ತು ಒಳಚರಂಡಿ ಸಂಪರ್ಕ ಒದಗಿಸುವುದು ಸೇರಿ ಶಾಸನಬದ್ಧ ನಿಯಮಗಳ ಪಾಲನೆಗೆ ವಸತಿ ಯೋಜನೆ ನಿರ್ಮಾಣಕ್ಕೆ […]

ಡೇಟಿಂಗ್ ಆ್ಯಪ್ ಗಳಲ್ಲಿ ಸಂಗಾತಿಯನ್ನು ಹುಡುಕುವುದು ಮಹಾನ್ ನೀಚ ಕೆಲಸ: ಕಂಗನಾ ರಣಾವತ್

ಲಿವ್-ಇನ್ ಸಂಬಂಧಗಳು ಹೆಣ್ಣುಮಕ್ಕಳಿಗೆ ಯಾವುದೇ ಬೆಂಬಲ ನೀಡುವುದಿಲ್ಲ, ಸಾಂಪ್ರದಾಯಿಕ ವಿವಾಹ ಪದ್ಧತಿಯೇ ಉತ್ತಮ ಎಂದು ಕಂಗನಾ ಹೇಳಿದ್ದಾರೆ. ಡೇಟಿಂಗ್ ಆ್ಯಪ್‌ ಬಳಸುವವರ ಬಗ್ಗೆ ಕಂಗನಾ ಟೀಕೆ:ಡೇಟಿಂಗ್ ಆ್ಯಪ್‌ಗಳಲ್ಲಿ ಪಾರ್ಟ್ನರ್ ಹುಡುಕುವುದು ನೀಚ ಕೆಲಸ. ಡೇಟಿಂಗ್ ಆ್ಯಪ್‌ ಮತ್ತು ಅವುಗಳನ್ನು ಬಳಸುವವರ ಬಗ್ಗೆ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಟೀಕೆ ಮಾಡಿದ್ದು, ಈ ರೀತಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಪಾರ್ಟ್ನರ್ ಹುಡುಕೋದು ನೀಚ ಕೆಲಸ ಅಂತ ಕಂಗನಾ ಹೇಳಿದ್ದಾರೆ. ಡೇಟಿಂಗ್ ಆ್ಯಪ್‌ಗಳಲ್ಲಿ ಇರೋದಕ್ಕೆ ತಾನು ಎಂದಿಗೂ ಇಷ್ಟಪಟ್ಟಿಲ್ಲ. ಎಲ್ಲ ಹೆಣ್ಣುಮಕ್ಕಳಿಗೂ […]

ಮಂಗಳೂರು: ಎಂಸಿ.ಸಿ. ಬ್ಯಾಂಕಿನಲ್ಲಿ 79ನೇ ಸ್ವಾತಂತ್ರ‍್ಯೋತ್ಸ ದಿನಾಚರಣೆ

ಮಂಗಳೂರು: ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಚೇರಿಯಲ್ಲಿ 79 ನೇ ಸ್ವಾತಂತ್ರ‍್ಯೋತ್ಸವವನ್ನು ಆ.15ರಂದು ಆಚರಿಸಲಾಯಿತು. ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿ, ಗಣ್ಯರು ಮತ್ತು ಹಿತೈಷಿಗಳು ಹಾಜರಿದ್ದರು. ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾವಾದಿ ಮತ್ತು ನೋಟರಿ ಪಬ್ಲಿಕ್, ಕುದ್ರೋಳಿ ದೇವಸ್ಥಾನ ಟ್ರಸ್ಟ್ನ ಖಜಾಂಚಿ ಮತ್ತು ಸಮಾಜ ಸೇವಕ ಶ್ರೀ ಪದ್ಮರಾಜ್ ಆರ್. ಪೂಜಾರಿ, ಪ್ರಸಿದ್ಧ ನ್ಯಾಯಾವಾದಿ ಮತ್ತು ಕೋರ್ಟ್ ವಾರ್ಡ್ನ ಕಾರ್ಪೊರೇಟರ್ ಶ್ರೀ ಎ.ಸಿ. ವಿನಯರಾಜ್ ಅವರು ಮುಖ್ಯ […]