ವಿಚ್ಛೇದನಕ್ಕೆ ಮುಂದಾದ ಸ್ಯಾಂಡಲ್ ವುಡ್ ಖ್ಯಾತ ನಟ ಅಜಯ್ ರಾವ್ ! ನಟನ ವಿರುದ್ದ ಪತ್ನಿಯೇ ದೂರು ನೀಡಿದ್ರಾ?

ಬೆಂಗಳೂರು: ಸ್ಯಾಂಡಲ್ ವುಡ್ ನಟ ಎಕ್ಸ್‌ಕ್ಯೂಸ್ ಮಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ದಂಪತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಅಜಯ್ ರಾವ್ ಇತ್ತೀಚೆಗಷ್ಟೇ ಯುದ್ಧಕಾಂಡ 2 ಸಿನಿಮಾ ನಿರ್ಮಿಸಿ, ನಟಿಸಿದ್ದರು. ಅಲ್ಲದೇ ಅಜಯ್ ರಾವ್ ಅವರಿಗೆ ಸಾಕಷ್ಟು ಸಾಲವಿದ್ದು, ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದಕ್ಕೆ ಹೇಳಿಕೆ ನೀಡಿದ್ದ ನಟ, ಅದೆಲ್ಲ ಸುಳ್ಳು ಎಂದಿದ್ದರು. ಆದರೆ ಈಗ ಮತ್ತೆ ವಿಚ್ಛೇದನದ ಸುದ್ದಿ […]

ಉಡುಪಿ:SBI ನಲ್ಲಿ ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗೆ ನೇಮಕಾತಿ

ಉಡುಪಿ:SBI ನಲ್ಲಿ ಜೂನಿಯರ್ ಅಸೋಸಿಯೇಟ್ಸ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಹುದ್ದೆಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26.08.2025. ಈ ಲಿಂಕ್ ಅನ್ನು ಬಳಸಿ 🔗: https://bank.sbi/web/careers/current-openings

ಸೆ. 6, 7ರಂದು ದುಬೈನಲ್ಲಿ ‘ಅಂತರಾಷ್ಟ್ರೀಯ ಜಾನಪದ ಉತ್ಸವ’

ಉಡುಪಿ: “ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕದ ಉದ್ಘಾಟನೆ ಹಾಗೂ ಅಂತರಾಷ್ಟ್ರೀಯ ಜಾನಪದ ಉತ್ಸವ” ಸೆಪ್ಟೆಂಬರ್ 6ಮತ್ತು 7ರಂದು ಯುಎಇ ದುಬೈನ ರಾಮಿಡ್ರಿಮ್ ಪಂಚತಾರಾ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉತ್ಸವದ ನಿರ್ದೇಶಕ, ಕಟಪಾಡಿ ವನಸುಮ ಟ್ರಸ್ಟ್ ಅಧ್ಯಕ್ಷ ಬಾಸುಮ ಕೊಡಗು ಅವರು, ಕರ್ನಾಟಕದ ಜಾನಪದ ಪ್ರಕಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಈ ಜಾನಪದ ಉತ್ಸವವನ್ನು ಆಯೋಜಿಸಲಾಗಿದೆ‌. ರಾಜ್ಯದ ಹತ್ತಕ್ಕೂ ಹೆಚ್ಚು ಜಾನಪದ ತಂಡಗಳನ್ನು ದುಬೈಗೆ ಆಮಂತ್ರಿಸಿ, ಜಗತ್ತಿನ […]

ಆ.17ರಂದು ಮಂದಾರ್ತಿಯಲ್ಲಿ “ಕಿರಾಡಿ ಯಕ್ಷ ಪ್ರಣತಿ- 2025”

ಉಡುಪಿ: ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ ಇದರ ತೃತೀಯ ವಾರ್ಷಿಕೋತ್ಸವ ಅಂಗವಾಗಿ “ಕಿರಾಡಿ ಯಕ್ಷ ಪ್ರಣತಿ- 2025” ಕಾರ್ಯಕ್ರಮವನ್ನು ಇದೇ ಆಗಸ್ಟ್ 17ರಂದು ಮಂದಾರ್ತಿ ಶೇಡಿಕೊಡು ದುರ್ಗಾ ಸನ್ನಿಧಿಯಲ್ಲಿ ಆಯೋಜಿಸಲಾಗಿದೆ ಎಂದು ಯಕ್ಷ ನಕ್ಷತ್ರ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಮೊಗವೀರ ಕಿರಾಡಿ ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿವರ್ಷದಂತೆ ನೀಡಲಾಗುವ 2025 ಯಕ್ಷ ನಕ್ಷತ್ರ ಪ್ರಶಸ್ತಿಗೆ ಖ್ಯಾತ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಹಾಗೂ 2025 ರ ಯಕ್ಷ ನಕ್ಷತ್ರ […]

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಮಹಿಳೆ!

ಮುಂಬೈ: ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಒಂದು ಲೀಟರ್ ಹಾಲನ್ನು ಆರ್ಡರ್ ಮಾಡಲು ಪ್ರಯತ್ನಿಸುವಾಗ ತಮ್ಮ ಬ್ಯಾಂಕ್ ಖಾತೆಗಳಿಂದ 18.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ವಡಾಲಾ ನಿವಾಸಿಯಾಗಿರುವ ಮಹಿಳೆ (71 ವರ್ಷ) ಈ ತಿಂಗಳ ಆರಂಭದಲ್ಲಿ ಆನ್‌ಲೈನ್ ವಿತರಣಾ ಅಪ್ಲಿಕೇಶನ್‌ನಿಂದ ಹಾಲನ್ನು ಆರ್ಡರ್ ಮಾಡಲು ಪ್ರಯತ್ನಿಸಿದಾಗ ಎರಡು ದಿನಗಳಲ್ಲಿ ಅವರ ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನು ದೋಚಿ ವಂಚಿಸಲಾಗಿದೆ. ಹಾಲು ಕಂಪನಿಯ ಕಾರ್ಯನಿರ್ವಾಹಕ ದೀಪಕ್ ಎಂದು ಗುರುತಿಸಿಕೊಂಡ ವ್ಯಕ್ತಿಯಿಂದ ಆಗಸ್ಟ್ 4 ರಂದು ಮಹಿಳೆಗೆ ಕರೆ […]