ಶಟಲ್ ಬ್ಯಾಡ್ಮಿಂಟನ್ ನಲ್ಲಿ ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ ಚಿಮ್ಮಿದ ಜನತಾ ವಿದ್ಯಾರ್ಥಿಗಳು.

ಕಿರಿಮಂಜೇಶ್ವರ: ಆಗಸ್ಟ್ 11 ರಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಯ್ಯಾಡಿ ಇವರ ಆತಿಥ್ಯದಲ್ಲಿ ನಡೆದ ಖಂಬದಕೋಣೆ ಹೋಬಳಿ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮೂರು ವಿದ್ಯಾರ್ಥಿಗಳು ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 14ರ ವಯೋಮಾನದ ಹುಡುಗರ ವಿಭಾಗದಲ್ಲಿ ಹರಿಜಿತ್(8ನೇ ತರಗತಿ ), ಸನ್ವಿತ್(8ನೇ ತರಗತಿ) ಮತ್ತು ತನಿಷ್( 8ನೇತರಗತಿ),ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. […]

ಆರ್‌ಟಿಐ ಮಾಹಿತಿ ನಿರಾಕರಿಸಿದ ನಿರ್ಮಿತಿ ಕೇಂದ್ರಕ್ಕೆ 50,000 ರೂ. ದಂಡ: ಹೈಕೋರ್ಟ್‌

ಬೆಂಗಳೂರು: ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ನಿರ್ಮಿತಿ ಕೇಂದ್ರ ಸಾರ್ವಜನಿಕ ಪ್ರಾಧಿಕಾರವಾಗಿದ್ದು, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಬರಲಿದೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಆರ್‌ಟಿಐ ಅಡಿ ಮಾಹಿತಿ ಒದಗಿಸಲು ನಿರಾಕರಿಸಿದ್ದ ಚಿತ್ರದುರ್ಗದ ನಿರ್ಮಿತಿ ಕೇಂದ್ರಕ್ಕೆ 50 ಸಾವಿರ ರು. ದಂಡ ವಿಧಿಸಿದೆ. ಆರ್‌ಟಿಐ ಅಡಿ ಕೋರಿದ್ದ ಮಾಹಿತಿ ಒದಗಿಸುವಂತೆ ಸೂಚಿಸಿ ರಾಜ್ಯ ಮಾಹಿತಿ ಹಕ್ಕು ಆಯೋಗ ಹೊರಡಿಸಿದ್ದ ಆದೇಶ ರದ್ದು ಕೋರಿ ಚಿತ್ರದುರ್ಗದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ […]

ಜನ ವಿರೋಧಕ್ಕೆ ಮಣಿದು ಮಿನಿಮಮ್ ಬ್ಯಾಲನ್ಸ್ ಮೊತ್ತ ಇಳಿಸಿದ ICICI ಬ್ಯಾಂಕ್: ಇನ್ನು ರೂ.15,000 ಖಾತೆಯಲ್ಲಿದ್ದರೆ ಸಾಕು!

ನವದೆಹಲಿ: ಮಹಾನಗರ ಹಾಗೂ ನಗರ ಪ್ರದೇಶಗಳ ಗ್ರಾಹಕರು ಉಳಿತಾಯ ಖಾತೆಯಲ್ಲಿ ಇಡಬೇಕಿದ್ದ ಮಿನಿಮಮ್ ಬ್ಯಾಲನ್ಸ್ ಮೊತ್ತವನ್ನು ಐಸಿಐಸಿಐ ಬ್ಯಾಂಕ್‌ ಇಳಿಕೆ ಮಾಡಿದೆ ಆ.9 ರಂದು ಗ್ರಾಹಕರು ಮಾಸಿಕ ಕನಿಷ್ಠ ಸರಾಸರಿ ಮೊತ್ತ 50,000 ರೂ. ಇಡಬೇಕೆಂದು ಬ್ಯಾಂಕ್‌ ಹೊಸ ನಿಯಮ ಪ್ರಕಟಿಸಿತ್ತು. ಆದರೆ ಜನರಿಂದ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಈಗ 15,000 ರೂ. ಇರಿಸಿದರೆ ಸಾಕು ಎಂದು ನಿಯಮವನ್ನು ಬದಲಾಯಿಸಿದೆ. ಆಗಸ್ಟ್‌ 1ರ ನಂತರ ಖಾತೆ ತೆರೆದವರಿಗೆ ಈ ನಿಯಮ ಅನ್ವಯವಾಗುತ್ತದೆ. ಮಿತಿಯನ್ನು 10,000 ರೂ.ಗಳಿಂದ […]

ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಸಿಟಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿ; ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಸಿಟಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ್ ಶಾಂತಿ ಅವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅವರಿಗೆ ಮನವಿ ಸಲ್ಲಿಸಿತು.ಈ ಸಂದರ್ಭಸಲ್ಲಿ ನೂತನ ಜಿಲ್ಲಾಧಿಕಾರಿಗಳಿಗೆ‌ ಅಭಿನಂದನೆ ಸಲ್ಲಿಸಲಾಯಿತು. ಉಪಾಧ್ಯಕ್ಷರಾದ ಮಧುಸೂದನ್ ಹೇರೂರು, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಕೋಶಾಧಿಕಾರಿ ಅಜಿತ್ ಕುಮಾರ್ ಪೈ, ನಿರ್ದೇಶಕರುಗಳಾದ ಜಾನ್ ರೆಬೆಲ್ಲೊ, ಶ್ರೀನಿವಾಸ್ ಶೆಟ್ಟಿ ತೊನ್ಸೆ, ಪ್ಲಾಸಿಡ್ ನಿಯೋಗದಲ್ಲಿ ಇದ್ದರು.

ಉಡುಪಿ: ಹೆಂಡತಿಗೆ ಬೈದು ಆಡಿಯೋ ವೈರಲ್ ಮಾಡಿದ್ದಕ್ಕೆ ಹತ್ಯೆ- ಎಸ್ಪಿ ಹರಿರಾಂ ಶಂಕ‌ರ್ ಮಾಹಿತಿ

ಉಡುಪಿ: ಉಡುಪಿ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತೂರು ಸುಬ್ರಹ್ಮಣ್ಯ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಈ ಕೊಲೆಯು ಕ್ಷುಲ್ಲಕ ಕಾರಣಕ್ಕೆ ನಡೆದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅವರು, ಮೂವರು ಬಂಧಿತ ಆರೋಪಿಗಳ ಪೈಕಿ ಇಬ್ಬರು ಈ ಮೊದಲೇ ಕೊಲೆ ಆರೋಪಿಗಳಾಗಿದ್ದಾರೆ ಮತ್ತು ಓರ್ವ ರೌಡಿಶೀಟ‌ರ್ ಕೂಡ ಆಗಿದ್ದ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಕೊಲೆಯಾದ ವ್ಯಕ್ತಿ […]