ಜನ ಬೆಂಬಲವಿದ್ದರೆ ಸರಕಾರದ ಯೋಜನೆಯ ಜೊತೆ ಭಿಕ್ಷುಕರ ನಿರ್ಮೂಲನೆ ಸಾಧ್ಯ: ಕೇಂದ್ರ ಸಚಿವ ವೀರೇಂದ್ರ ಕುಮಾರ್

ನವದೆಹಲಿ: ದೇಶದ ಬೀದಿಗಳಿಂದ ಭಿಕ್ಷುಕರ ನಿರ್ಮೂಲನೆಗೆ ಸರ್ಕಾರದ ಯೋಜನೆಯ ಜೊತೆಗೆ ಜನರ ಬೆಂಬಲ ಹಾಗೂ ಸಮುದಾಯದ ಭಾಗವಹಿಸುವಿಕೆಯ ಅಗತ್ಯವಿದೆ’ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಹೇಳಿದರು. ಭಿಕ್ಷುಕರ ನಿಗಮದ ಸಂಸ್ಥಾಪಕ ಡಾ. ಚಂದ್ರ ಮಿಶ್ರಾ ಅವರ ‘ಕೊನೆಯ ಭಿಕ್ಷುಕ’ ಪುಸ್ತಕದ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಸಚಿವರು, ವಾರಾಣಸಿ ಮತ್ತು ಇಂದೋರ್‌ನಲ್ಲಿನ ಭಿಕ್ಷುಕರ ಪುನರ್ವಸತಿಯನ್ನು ಉದಾಹರಿಸಿದರು. ‘ವಾರಾಣಸಿಯಲ್ಲಿ ಭಿಕ್ಷುಕರಿಗೆ ವ್ಯಾಪಾರ ತರಬೇತಿ ನೀಡಿದ ನಂತರ ಅವರು ಭಿಕ್ಷೆ ಬೇಡುವುದನ್ನು ತೊರೆದು, […]

ದರ್ಶನ್ ಜಾಮೀನು ರದ್ದು ವಿಚಾರ: ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು- ಸಚಿವೆ ಹೆಬ್ಬಾಳ್ಕರ್

ಉಡುಪಿ: ನಟ ದರ್ಶನ್ ಜಾಮೀನು ರದ್ದು ವಿಚಾರಕ್ಕೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ನ್ಯಾಯಾಲಯವು ನ್ಯಾಯ ದೊರಕಿಸಿಕೊಡಲು ಈಗಾಗಲೇ ಒಮ್ಮೆ ತೀರ್ಪು ಕೊಟ್ಟಿದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು. ಕೆ.ಎನ್. ರಾಜಣ್ಣನ ಪುತ್ರನಿಗೆ ಸಚಿವ ಸ್ಥಾನ ಕೊಡುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರ ಇದೆ. ಆದರೆ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಹೈಕಮಾಂಡ್ ಹೇಳಿದ್ದೆ […]

ಉಡುಪಿ:ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆ.14ರಿಂದ 30 ರವರೆಗೆ ಜನನಿ ಎಂಟರ್ಪ್ರೈಸಸ್ ನಲ್ಲಿ ಸ್ವಾತಂತ್ರ್ಯ ಉತ್ಸವ ಮಾರಾಟ

ಬ್ರಹ್ಮಾವರ:ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆ.14ರಿಂದ 30 ರವರೆಗೆ ಬ್ರಹ್ಮಾವರ ಹಾಗೂ ಕುಂದಾಪುರದ ಜನನಿ ಎಂಟರ್ಪ್ರೈಸಸ್ ನಲ್ಲಿ ಸ್ವಾತಂತ್ರ್ಯ ಉತ್ಸವ ಮಾರಾಟ ನಡೆಯಲಿದೆ. ಕ್ರೆಡಿಟ್ ಕಾರ್ಡ್‌ಗಳ ಮೇಲೆ ಆಕರ್ಷಕ ಕ್ಯಾಶ್ ಬ್ಯಾಕ್, ಹಾಗೂ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಅಂಡ್ ಮ್ಯಾಟ್ರೆಸೆಸ್, ಹೋಂ ಅಪ್ಲೈಯನ್ಸಸ್, ಕಿಚನ್ ಅಪ್ಲೈನ್ಸಸ್, ಮೊಬೈಲ್ ಫೋನ್ಸ್, ಸೋಲಾರ್ ಅಂಡ್ ಇನ್ವರ್ಟರ್ ಸಿಸ್ಟಮ್ ಗಳ ಮೇಲೆ ವಿಶೇಷ ರಿಯಾಯಿತಿ ಇರಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಬ್ರಹ್ಮಾವರ: 0820- 2987075| 9972013221 ಕುಂದಾಪುರ: 7619473221 | 903632421 ಸ್ವಾತಂತ್ರ್ಯ ಉತ್ಸವ ಮಾರಾಟ

ಕಣ್ಮರೆಯಾದನು ಕಂಬಳ ಲೋಕದ ಚಿನ್ನ, ಕೊಳಚೂರು ಕೊಂಡೊಟ್ಟು”ಚೆನ್ನ”: ಅತೀ ಹೆಚ್ಚು ಪ್ರಶಸ್ತಿ ಗೆದ್ದಿದ್ದ ಕಂಬಳ ಪ್ರಿಯರ ಮುದ್ದಿನ ಕೋಣ ಇನ್ನಿಲ್ಲ

ಕಾರ್ಕಳ: ಕಂಬಳಲೋಕದಲ್ಲಿ ಈ ಚೆನ್ನನಿಗೆ ತುಂಬಾ ಮಂದಿ ಅಭಿಮಾನಿಗಳಿದ್ದರು. ಚೆನ್ನನ ಹೆಸರು ಕೇಳಿದಾಕ್ಷಣ ಎಲ್ಲರೂ ಕುಣಿದಾಡುತ್ತಿದ್ದರು. ಎಷ್ಟೋ ಪ್ರಶಸ್ತಿಗಳ ಪಟ್ಟವೇರಿದ್ದ ಈ ಚೆನ್ನ ಈಗ ಕಣ್ಮರೆಯಾಗಿದ್ದಾನೆ. ಕಂಬಳ ಕೂಟದಲ್ಲಿ ಈತನ ಓಟ ಕಂಡು ಆನಂದಪಟ್ಟಿದ್ದ ಅಭಿಮಾನಿಗಳು ಕೂಡ ಈತ ಅಸುನೀಗಿದ್ದಕ್ಕೆ ಕಂಬನಿಮಿಡಿಯುತ್ತಿದ್ದಾರೆ. ಕಂಬಳ ಕೂಟದ ಅತ್ಯಂತ ಜನಪ್ರಿಯ, ಅತಿ ಹೆಚ್ಚು ಪ್ರಶಸ್ತಿ ವಿಜೇತ ಪಟ್ಟಿಯಲ್ಲಿ ಅಗ್ರಗಣ್ಯ ಎನ್ನಿಸಿಕೊಂಡಿದ್ದ ಕೊಳಚೂರು ಕೊಂಡೊಟ್ಟು ಸುಕುಮಾರ್‌ ಶೆಟ್ಟಿ ಅವರ ʼಚೆನ್ನʼ ಎಂಬ ಹೆಸರಿನ ಕೋಣ ಗುರುವಾರ (ಆ.14) ಅಸುನೀಗಿದೆ. ಸುಮಾರು 25 […]

ಉಡುಪಿ: ಶೂನ್ಯ ಬಂಡವಾಳದೊಂದಿಗೆ ನಿಮ್ಮ ವ್ಯವಹಾರ ಆರಂಭಿಸಬೇಕೆಂದಿದ್ದೀರಾ? ಹಾಗಾದರೆ ಇಲ್ಲಿದೆ ಒಂದು ಉತ್ತಮ ಅವಕಾಶ

ಉಡುಪಿ:ಉಡುಪಿಯಲ್ಲಿ ನಿಮ್ಮದೇ ಊರಿನಲ್ಲಿ ಬಿಡುವಿನ ಸಮಯದಲ್ಲಿ ಶೂನ್ಯ ಬಂಡವಾಳದೊಂದಿಗೆ ನಿಮ್ಮ ವ್ಯವಹಾರ ಆರಂಭಿಸಲು ಇಲ್ಲಿದೆ ಒಂದು ಉತ್ತಮ ಅವಕಾಶ. ಮಾಹಿತಿಗಾಗಿ ಕರೆ ಮಾಡಿ: 8 4 3 1 2 5 3 1 2 7