ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕ ರಾಜ್ಯ ಪ್ರಶಸ್ತಿಗೆ ಜಿ.ಎಸ್.ಕಿರಣ್ ಕುಮಾರ್ ಆಯ್ಕೆ

ಉಡುಪಿ: ಕರ್ನಾಟಕ ಯುವ ರಕ್ಷಣಾ ವೇದಿಕೆಯು ವತಿಯಿಂದ ಕೊಡಮಾಡುವ 2025 ನೇ ಸಾಲಿನ ಸಮಾಜ ಸೇವೆ ಹಾಗೂ ಕಾರ್ಪೋರೇಟ್ ಉದ್ಯಮ ಕ್ಷೇತ್ರದ ಅತ್ಯುನ್ನತ ರಾಜ್ಯ ಪುರಸ್ಕಾರವಾದ ‘ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕ ಪ್ರಶಸ್ತಿ’ ಗೆ ಕುಂದಾಪುರದ ಪ್ರತಿಷ್ಠಿತ ಸೇವಾ ಸಿಂಚನ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಿರ್ದೇಶಕರು, ಜಿ.ಬಿ.ಪಿ.ಎಸ್.ಕೆ ಸಮೂಹದ ಸಂಸ್ಥಾಪಕ ಆಡಳಿತ ನಿರ್ದೇಶಕರಾದ ಜಿ.ಎಸ್. ಕಿರಣ್ ಕುಮಾರ್ ಕರ್ನಾಟಕದ ಏಕೈಕ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗ್ರಾಮದ ಶ್ರೀಮತಿ ಗಿರಿಜಾ ಮತ್ತು […]
ಉಡುಪಿ: ಅನಾರೋಗ್ಯದಿಂದ 12 ವರ್ಷದ ಬಾಲಕ ಮೃತ್ಯು.

ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕ ಕೋಟ ಹಂದಟ್ಟು ನಿವಾಸಿ ಕ್ಷಿತಿಜ್ ಪೈ. (12) ಚಿಕಿತ್ಸೆ ಫಲಕಾರಿಯಾಗದೆ ಆ. 12ರಂದು ಮೃತಪಟ್ಟಿದ್ದಾನೆ. ಈತ ಸಾಲಿಗ್ರಾಮದಲ್ಲಿ ನಂದಿನಿ ಮಿಲ್ಕ್ ಸ್ಟಾಲ್ ಮಾಲಕ ಪುಂಡಲೀಕ ಪೈ. ಅವರ ಪುತ್ರನಾಗಿದ್ದು, ತಂದೆ, ತಾಯಿ ಮತ್ತು ತಂಗಿಯನ್ನು ಅಗಲಿದ್ದಾನೆ. ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ.
ಉಡುಪಿ:ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕರಾವಳಿ ಆಟೋಮೊಬೈಲ್ಸ್ ನಲ್ಲಿ 35000/- ದವರೆಗೆ ವಿಶೇಷ ಪ್ರಯೋಜನಗಳು

ಉಡುಪಿ:ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕರಾವಳಿ ಆಟೋಮೊಬೈಲ್ಸ್ ನಲ್ಲಿ 35000/- ದವರೆಗೆ ವಿಶೇಷ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಪ್ರಯೋಜನಗಳು:▪ಫ್ರೀ ವಾರೆಂಟಿ▪ಫ್ರೀ ಸರ್ವಿಸ್▪ಫ್ರೀ ಆರ್.ಎಸ್.ಎ (RSA)▪ಫ್ರೀ RTO ದಾಖಲೆ▪ಕಡಿಮೆ ಡೌನ್‌ಪೇಮೆಂಟ್▪ಕಡಿಮೆ ಬಡ್ಡಿದರ▪ಯಾವುದೇ ಕಮಿಷನ್ ಇಲ್ಲ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:+91 8050092644/46 www.karavaliautomobiles.in
ದ.ಕ, ಉಡುಪಿ ಜಿಲ್ಲೆಯ ವಿಶೇಷ ಕಾರ್ಯಪಡೆ ತಾತ್ಕಾಲಿಕ, ಶಾಂತಿ ನೆಲೆಸಲು ಜನರ ಶ್ರಮವೂ ಬೇಕು: ಗೃಹಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಂತಿ ನೆಲೆಸಬೇಕೆಂದೇ ವಿಶೇಷ ಕಾರ್ಯಪಡೆ (ಎಸ್‌ಎಎಫ್) ರಚಿಸಿದ್ದೇವೆ. ಅದು ಶಾಶ್ವತವೂ ಅಲ್ಲ. ಆದರೆ, ಜನಪ್ರತಿನಿಧಿಗಳ ಸಹಕಾರ ಅಗತ್ಯ. ಇಲ್ಲದಿದ್ದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನವಿ ಮಾಡಿದರು. ಬಿಜೆಪಿಯ ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರಿಸಿ, ಎರಡೂವರೆ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ 30 ಕೊಲೆ ಪ್ರಕರಣಗಳ ಪೈಕಿ 24 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, 6 ಪ್ರಕರಣಗಳ ತನಿಖೆ ನಡೆಯುತ್ತಿದೆ. ಉಡುಪಿ […]
ಉಡುಪಿಯ ಹೆಸರಾಂತ ಫಾರ್ಮಾ ಮತ್ತು ಎಕ್ಸ್ ಪೋರ್ಟ್ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿಯ ಹೆಸರಾಂತ ಫಾರ್ಮ ಮತ್ತು ಎಕ್ಸ್ ಪೋರ್ಟ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 🔹ಏರಿಯಾ ಸೇಲ್ಸ್ ಮ್ಯಾನೇಜರ್🔹ಮೆಟೀರಿಯಲ್ ಇನ್ ಚಾರ್ಜ್🔹ಅಕೌಂಟೆಂಟ್🔹ಎಲೆಕ್ಟ್ರಿಷಿಯನ್ (ITI)🔹ಬಿಲ್ಲಿಂಗ್ (ಕಂಪ್ಯೂಟರ್ ಆಪರೇಟರ್)🔹ಕ್ಯಾಶಿಯರ್ (B.Com)🔹ಡ್ರೈವರ್ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7019891796, 7975861846