ಅಮೇರಿಕಾದ ಹೊಸ ಸುಂಕ ನೀತಿಯಿಂದ ಭಾರತದ ಶೇ.55 ಉತ್ಪನ್ನಗಳಿಗೆ ಹೊಡೆತ!

ಮುಂಬೈ : ಭಾರತದಿಂದ ಅಮೆರಿಕಗೆ ರಫ್ತಾಗುವ ಶೇ 55ರಷ್ಟು ಉತ್ಪನ್ನಗಳ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ವಿಧಿಸಿರುವ ಸುಂಕವು ಪರಿಣಾಮ ಬೀರಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡಿದ್ದರ ಪರಿಣಾಮ ಭಾರತೀಯ ಸರಕುಗಳ ಮೇಲೆ ಟ್ರಂಪ್ ಸರ್ಕಾರ ಹೆಚ್ಚುವರಿ ಶೇ 25ರಷ್ಟು ಸುಂಕವನ್ನು ಹೇರಿತ್ತು. ಇದು ಅಮೆರಿಕದ ವ್ಯಾಪಾರ ಪಾಲುದಾರ ದೇಶದ ಮೇಲೆ ವಿಧಿಸಿದ ಅತ್ಯಧಿಕ ತೆರಿಗೆಯಾಗಿದೆ. ಅಮೆರಿಕವು ಈ ಮೊದಲು ಭಾರತೀಯ ಸರಕುಗಳ ಮೇಲೆ ವಿಧಿಸಿದ್ದ ಶೇ 25 ರಷ್ಟು […]

ಮಣಿಪಾಲ: ಅಡ್ಡಾದಿಡ್ಡಿಯಾಗಿ ಅಪಾಯಕಾರಿ ರೀತಿಯಲ್ಲಿ ಕಾರು ಚಾಲನೆ: ಚಾಲಕ, ಕಾರು ವಶಕ್ಕೆ

ಉಡುಪಿ: ಸಂಪೂರ್ಣ ಟಿಂಟ್ ಅಳವಡಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ತೆರಳುತ್ತಿದ್ದ ಕಾರೊಂದನ್ನು ಮಣಿಪಾಲ ಪೊಲೀಸರು ತಡೆದು ಚಾಲಕ ಹಾಗೂ ಕಾರನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಕಣ್ಣೂರು ಶೋಬೈಲ್ ನೀಲಾಕತ್(26) ಎಂಬಾತ ನೀಲಿ ಬಣ್ಣದ ಕಾರನ್ನು ಉಡುಪಿ ನಗರದಿಂದ ಹಿರಿಯಡಕ ಕಡೆ ಅಪಾಯಕಾರಿಯಾಗಿ ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ ಅಪಘಾತ ಉಂಟು ಮಾಡುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದನು. ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ವಿಪರೀತ ಕರ್ಕಶ ಶಬ್ದ ಮಾಡಿಕೊಂಡು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಈತನನ್ನು ಬೆನ್ನಟ್ಟಿದ ಮಣಿಪಾಲ ಪೊಲೀಸರು ಎಂಐಟಿ […]

ಯುಎಇ ಯಕ್ಷಗಾನ ಕೇಂದ್ರದಿಂದ ಯಕ್ಷಗಾನಾರ್ಚಣೆ, ಯಕ್ಷದರ್ಪಣ ಬಿಡುಗಡೆ ಸಾಧಕರಿಗೆ ಯಕ್ಷ ಶ್ರೀರಕ್ಷಾ ಗೌರವಾರ್ಪಣೆ

ಉಡುಪಿ: ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಯುಎಇಯಲ್ಲಿ ನೆಲೆಸಿರುವ ಕನ್ನಡಿಗರು, ತುಳುವರು ಅಲ್ಲಿಯೇ ಯಕ್ಷಗಾನ ಅಭ್ಯಾಸ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಈ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ ಎಂದು ಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಶ್ರೀಕ್ಷೇತ್ರ ಕಟೀಲಿನ ರಥಬೀದಿಯ ಸರಸ್ವತಿ ಸದನದಲ್ಲಿ ಯುಎಇ -ಮಧ್ಯಪ್ರಾಚ್ಯದ ಏಕೈಕ ಮತ್ತು ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಸಡಗರದ ಪ್ರಯುಕ್ತ ಕೇಂದ್ರದ ಕಲಿಕಾ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ […]

ಆಂಧ್ರದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ರಾಜ್ಯಾದ್ಯಂತ ಆ.15ರಿಂದ ಜಾರಿ.

ಅಮರಾವತಿ: ಕರ್ನಾಟಕದ ಶಕ್ತಿ ಯೋಜನೆಯಂತೆ ಆಂಧ್ರಪ್ರದೇಶದಲ್ಲಿಯೂ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಜಾರಿಗೊಳಿಸಲು ಚಂದ್ರಬಾಬು ನಾಯ್ಡು ಸರ್ಕಾರ ನಿರ್ಧರಿಸಿದೆ. ಉಚಿತ ಪ್ರಯಾಣ:ಚಂದ್ರಬಾಬು ನಾಯ್ಡು ಸರ್ಕಾರ 2024ರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಇದೇ ಆ.15ರಿಂದ `ಸ್ತ್ರೀ ಶಕ್ತಿ’ ಯೋಜನೆ ಆರಂಭಿಸಲಿದೆ. ಈ ಯೋಜನೆಯಡಿ ಎಲ್ಲ ಬಾಲಕಿಯರು, ಮಂಗಳಮುಖಿಯರು ಉಚಿತ ಬಸ್ ಪ್ರಯಾಣ ಮಾಡಬಹುದು. ಆಂಧ್ರದಲ್ಲಿ ವಾಸಿಸುವ ಪ್ರಮಾಣೀಕೃತ ದಾಖಲೆ ತೋರಿಸಿ ಆಂಧ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಈ ಕುರಿತು ರಾಜ್ಯ […]

ಉಡುಪಿ:ತೋಟಗಾರಿಕೆ ದಿನ ಆಚರಣೆ

ಉಡುಪಿ: ತೋಟಗಾರಿಕೆ ಇಲಾಖೆ, ಉಡುಪಿ ಇವರ ವತಿಯಿಂದ ತೋಟಗಾರಿಕೆ ಪಿತಾಮಹ ಡಾ||ಎಂ.ಹೆಚ್. ಮರಿಗೌಡರವರ 109 ನೇ ಜನ್ಮ ದಿನಾಚರಣೆಯನ್ನು, ತೋಟಗಾರಿಕೆ ದಿನವನ್ನಾಗಿ ಉಡುಪಿಯ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಸಸಿಗಳನ್ನು ನೆಡುವ ಮೂಲಕ ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೆಚ್.ಕೆ. ಬೀಳಗಿ, ಹೇಮಂತ್ ಕುಮಾರ್, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಉಡುಪಿ ತಾಲೂಕಿನ ರೈತರು ಹಾಗೂ ಮತ್ತಿತರರು ಭಾಗವಹಿಸಿದ್ದರು.