ಬಂಟ್ವಾಳ ಮಡಿವಾಳರ “ಕೂಡು ಕುಟುಂಬ -2025”

ಬಂಟ್ವಾಳ : ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ, ಮಡಿವಾಳ ಯುವ ಬಳಗ, ಮಹಿಳಾ ಘಟಕದ ಸಹಯೋಗದಲ್ಲಿ ಸಮಾಜ ಬಾಂಧವರ ಸಮ್ಮಿಲನದ ಕಾರ್ಯಕ್ರಮ ” ಕೂಡು ಕುಟುಂಬ 2025″ ಕಂದೂರಿನ ಮಡಿವಾಳ ಮಾಚಿದೇವ ಸಭಾಭವನದಲ್ಲಿ ಜರುಗಿತು.
ಆಟವಾಡುತ್ತಿರುವಾಗ ಆಯಾತಪ್ಪಿ ಬಾವಿಗೆ ಬಿದ್ದು ಬಾಲಕಿ ಮೃತ್ಯು.

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧನಸಿಂಗ್ ತಾಂಡಾದಲ್ಲಿ ಆಟವಾಡಲು ಹೋಗಿದ್ದ ಬಾಲಕಿಯೋರ್ವಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಬಾಲಕಿ ಅರ್ಚನಾ ದೀಪಕ್ ರಾಠೋಡ (8). ಸೋಮವಾರ ಸಂಜೆ ಬಾಲಕಿ ತನ್ನ ತಾಯಿಯೊಂದಿಗೆ ಕುರಿ ಮೇಯಿಸಲು ಹೋಗಿದ್ದಳು. ಈ ವೇಳೆ ಆಟವಾಡುತ್ತಿದ್ದ ಬಾಲಕಿ ಆಯಾತಪ್ಪಿ ಬಾವಿಗೆ ಬಿದ್ದಿದ್ದಾಳೆ. ಬಾಲಕಿ ಬಾವಿಗೆ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿ ಸದ್ಯ ಬಾಲಕಿಯ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಕುರಿತು […]
ರೈಲ್ವೇ ನಿಲ್ದಾಣದಲ್ಲಿ ಇನ್ಮುಂದೆ ಸಿಗುತ್ತೆ ಉಚಿತ ಹೈ ಸ್ಪೀಡ್ ವೈಫೈ: ಹೇಗೆ ಪಡೆದುಕೊಳ್ಳೋದು ಈ ಸೇವೆ?

ಬೆಂಗಳೂರು: ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ಈಗಾಗಲೇ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಒದಗಿಸುತ್ತಿರುವ ಭಾರತ ಸರ್ಕಾರ, ಈಗ ಅದನ್ನು ಇನ್ನಷ್ಟು ವೇಗಗೊಳಿಸಲಿದೆ. ಈ ನಿಟ್ಟಿನಲ್ಲಿ, ದೇಶಾದ್ಯಂತ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಹೈ-ಸ್ಪೀಡ್ ಉಚಿತ ವೈಫೈ ಒದಗಿಸಲಾಗುವುದು. ರಾಜ್ಯಸಭೆಯಲ್ಲಿ ರೈಲ್ವೆ ಸೌಲಭ್ಯಗಳ ಕುರಿತು ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರೈಲ್ವೆ ಸಚಿವ ಪ್ರಕಾರ, ಇನ್ನು ಮುಂದೆ, ದೇಶಾದ್ಯಂತ ಸುಮಾರು 6,115 ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅತ್ಯಂತ ವೇಗದ […]
ಶಾಲೆಯಲ್ಲಿ ಮೊಟ್ಟೆ ನೀಡಿದ್ದಕ್ಕೆ 70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯನ್ನೇ ಬದಲಾಯಿಸಿದ್ರು!

ಮಂಡ್ಯ: ಮಂಡ್ಯದ ಆಲಕೆರೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೊಟ್ಟೆ ಕೊಡುವ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದಾಗಿನಿಂದ ಈ ಗ್ರಾಮದ ಜನರು, ಶಾಲೆಯಲ್ಲಿ ಮೊಟ್ಟೆ ಕೊಡುವುದು ಬೇಡಾ ಎಂದು ಒಕ್ಕೊರಲಿನಿಂದ ತೀರ್ಮಾನ ಮಾಡಿದ್ದರು. ಏಕೆಂದರೆ ಈ ಶಾಲೆ ಇರುವ 100 ಮೀಟರ್ ಅಂತರದಲ್ಲಿ ವೀರಭದ್ರಸ್ವಾಮಿ ದೇವಸ್ಥಾನವಿದೆ. ಹೀಗಾಗಿ, ದೇವಸ್ಥಾನದ ಸುತ್ತಮುತ್ತ ಮಾಂಸಾಹಾರ ಹಾಗೂ ಮೊಟ್ಟೆಯನ್ನು ಸೇವನೆ ಮಾಡಲ್ಲ. ಶಾಲೆಯಲ್ಲೂ ಮೊಟ್ಟೆಯ ಬದಲಿಗೆ ಇಷ್ಟು ದಿನ ಕಡ್ಲೆ ಮಿಠಾಯಿ ಹಾಗೂ ಬಾಳೆಹಣ್ಣನ್ನು ಕೊಡಲಾಗುತ್ತಿತ್ತು. ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ:ಕಳೆದ […]
ಅಪಘಾತದ ಸಂದರ್ಭ ಯಾರೂ ಸಹಾಯ ಮಾಡದ್ದಕ್ಕೆ ನೊಂದು ಪತ್ನಿಯ ಮೃತ ದೇಹವನ್ನು ಬೈಕ್ ನಲ್ಲೇ ಸಾಗಿಸಿದ ಪತಿ!

ನಾಗ್ಪುರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ದೇಹ ಸಾಗಿಸಲು ಯಾರಿಂದಲೂ ಸಹಾಯ ಸಿಗದ ಕಾರಣ, ದೇಹವನ್ನು ಬೈಕ್‌ಗೆ ಕಟ್ಟಿ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.ಲಾರಿ ಹರಿದು ಮಹಿಳೆ ಮೃತಪಟ್ಟಿದ್ದರು. ಆಗಸ್ಟ್ 9 ರಂದು ನಾಗ್ಪುರ–ಜಬಲ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಬೈಕ್‌ಗೆ ದೇಹವನ್ನು ಕಟ್ಟಿ ಸಾಗಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಬೈಕ್ ಅನ್ನು ತಡೆದು ನಿಲ್ಲಿಸುವ ಮುನ್ನ ಪೊಲೀಸರೇ ಈ ವಿಡಿಯೊ ಚಿತ್ರೀಕರಿಸಿದ್ದಾಗಿ […]