ಬಡಜನರು ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆ ಅನುಕೂಲ‌

ಉಡುಪಿ: ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಬಡಜನರು ಬದುಕು ಕಟ್ಟಿಕೊಳ್ಳಲು ಅನುಕೂಲ‌ ಆಗಿದೆ. ಪಂಚ ಗ್ಯಾರಂಟಿ ಯೋಜನೆಯಿಂದ ಜನರ ಖರೀದಿ ಸಾಮರ್ಥ್ಯ ಕೂಡ ಹೆಚ್ಚಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿಯ‌ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಮಂಡಿಸಿರುವ 4.9 ಲಕ್ಷ ಕೋಟಿ ರೂ. ಬಜೆಟ್ ನಲ್ಲಿ 1 ಲಕ್ಷ ಕೋಟಿ ರೂ. ಗ್ಯಾರಂಟಿ ಯೋಜನೆ ಸಹಿತ ವಿವಿಧ ಯೋಜನೆಗಳ ಮೂಲಕ ಜನರಿಗೆ ವರ್ಗಾವಣೆ ಆಗುತ್ತಿದೆ. […]

ಗಂಡು ಮಗುವಿನ ವ್ಯಾಮೋಹಕ್ಕೆ ಒಂದು ವರ್ಷದ ಹೆಣ್ಣು ಮಗಳಿಗೇ ವಿಷ ನೀಡಿದ ತಂದೆ!

ತ್ರಿಪುರಾದ ಖೋವಾಯ್ ಜಿಲ್ಲೆಯ ಬೆಹಲಬರಿ ಗ್ರಾಮದಲ್ಲಿ ಗಂಡು ಮಗುವಿನ ಮೋಹದಿಂದ ತಂದೆಯೊಬ್ಬ ಒಂದು ವರ್ಷದ ಮುದ್ದಾದ ಪುಟ್ಟ ಹೆಣ್ಣು ಮಗುವಿಗೆ ವಿಷ ಉಣಿಸಿ ಜೀವ ಬಲಿಪಡೆದಿರುವ ಪೈಶಾಚಿಕ ಘಟನೆ ನಡೆದಿದೆ. ಮಗುವನ್ನು ಕೊಂದ ಆರೋಪಿಯನ್ನು ತ್ರಿಪುರಾ ಸ್ಟೇಟ್‌ ರೈಫಲ್ಸ್‌ನ 10 ನೇ ಬೆಟಾಲಿಯನ್‌ನ ರತೀಂದ್ರ ದೇಬ್ಬರ್ಮಾ ಎಂದು ಗುರುತಿಸಲಾಗಿದೆ. ಪ್ರಸ್ತುತ ಈತ ಎಡಿಸಿ ಖುಮುಲ್ವ್ಂಗ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆತನನ್ನು ಭಾನುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯವು ಆತನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಈತ […]

ಕುಡಿಯೋದನ್ನು ನಿಲ್ಲಿಸಿದ ಒಂದೇ ದಿನದಲ್ಲಿ ನಿಮ್ಮಲ್ಲಾಗುತ್ತೆ ಈ ಪಾಸಿಟಿವ್ ಬದಲಾವಣೆಗಳು: ಕುಡಿಯೋ ಅಭ್ಯಾಸ ಇರುವವರು ಒಮ್ಮೆ ಓದಿ

ದಿನನಿತ್ಯ ಮದ್ಯಪಾನ ಮಾಡುವ ಅಭ್ಯಾಸ ಶೇ.50 ರಷ್ಟು ಮಂದಿಗೆ ಇದೆ ಎನ್ನಲಾಗಿದೆ. ಮದ್ಯಪಾನದಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳು ಸಂಭವಿಸುತ್ತೆ ಎನ್ನುವ ಸತ್ಯ ಗೊತ್ತಿದ್ದರೂ ತುಂಬಾ ಮಂದಿ ಮದ್ಯಪಾನದತ್ತ ಆಕರ್ಷಿತರಾಗುತ್ತಾರೆ. ನಾವಿಲ್ಲಿ ಬರೀ ಒಂದು ದಿನ ಮದ್ಯಪಾನ ಬಿಟ್ಟರೆ ಏನೆಲ್ಲಾ ಒಳ್ಳೆಯ ಬದಲಾವಣೆಗಳು ನಮ್ಮ ದೇಹದ ಮೇಲಾಗುತ್ತದೆ? ಆಮೇಲೆ ಒಂದು ತಿಂಗಳು, ಮೂರು ತಿಂಗಳು, ಒಂದು ವರ್ಷ ಬಿಡುವುದರಿಂದ ಯಾವೆಲ್ಲಾ ಒಳ್ಳೆಯ ಬದಲಾವಣೆಗಳು ನಮ್ಮ ದೇಹದ ಮೇಲಾಗುತ್ತದೆ ಎನ್ನುವುದನ್ನು ವಿವರಿಸುತ್ತೇವೆ. 24 ಗಂಟೆಯಲ್ಲಿ ನೀವು ಮದ್ಯಪಾನ ಮಾಡುವುದನ್ನು ನಿಲ್ಲಿಸಿದ […]

ಉಡುಪಿ: ಪೋಕ್ಸೋ ಪ್ರಕರಣದ ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ; ನ್ಯಾಯಾಲಯ ತೀರ್ಪು

ಉಡುಪಿ: 2024 ರಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯವು ಇಬ್ಬರು ಪುರುಷರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬೈಂದೂರು ಪೊಲೀಸ್ ಪ್ರಕರಣದಲ್ಲಿ ಬೈಂದೂರಿನ ಗಂಗನಾಡು ಮೂಲದ ರಾಘವೇಂದ್ರ ಗೊಂಡ (35) ಮತ್ತು ಪಡುಬಿದ್ರಿ ಪೊಲೀಸ್ ಪ್ರಕರಣದಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಮಂಜುನಾಥ ಪಾತ್ರೋಟ್ (23) ಶಿಕ್ಷೆಗೊಳಗಾದವರು. ಜುಲೈ 2025 ರಲ್ಲಿ, ಜಿಲ್ಲೆಯಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 320 ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು, ಅವುಗಳಲ್ಲಿ 188 ಪ್ರಕರಣಗಳು […]

ಉಡುಪಿ: ಪ್ರತಿ ತಿಂಗಳು ಕನಿಷ್ಠ 10 ಸಾವಿರ ಗೌರವಧನ ನೀಡಿ: ಆಶಾ ಕಾರ್ಯಕರ್ತೆಯರ ಆಗ್ರಹ

ಉಡುಪಿ: 2025ರ ಎಪ್ರಿಲ್ ತಿಂಗಳಿನಿಂದ ಅನ್ವಯಿಸುವಂತೆ ಪ್ರತಿ ತಿಂಗಳು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ 10 ಸಾವಿರ ಗೌರವಧನ ನೀಡಬೇಕು‌ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗದಲ್ಲಿ ಮಂಗಳವಾರ ಧರಣಿ ನಡೆಸಿದರು.ನೂರಾರು ಸಂಖ್ಯೆಯಲ್ಲಿ ಸೇರಿದ್ದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆಯ ಮೂಲಕ‌ ಸರಕಾರಕ್ಕೆ ಆಗ್ರಪಡಿಸಿದರು. ಧರಣಿ ಉದ್ದೇಶಿಸಿ […]