ದೇವಸ್ಥಾನದ ಬಳಿ ಶವ ಹೂಳುವುದು ಭಾರತೀಯ ಸಂಸ್ಕೃತಿ: ಹೇಳಿಕೆ ನೀಡಿದ ಜನಾರ್ಧನ ಪೂಜಾರಿ.

ಉಳ್ಳಾಲ (ದಕ್ಷಿಣ ಕನ್ನಡ): ‘ದೇವಸ್ಥಾನದ ವಠಾರದಲ್ಲಿ ಶವ ಹೂಳುವುದು ಭಾರತದ ಸಂಸ್ಕೃತಿ. ಮಸೀದಿ, ಚರ್ಚ್‌ಗಳಲ್ಲೂ ಹೂಳಲಾಗುತ್ತದೆ’ ಎಂದು ಹಿರಿಯ ರಾಜಕಾರಣಿ ಬಿ.ಜನಾರ್ದನ ಪೂಜಾರಿ ಹೇಳಿದರು.ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟಿನಲ್ಲಿ ಭಾನುವಾರ ಏರ್ಪಡಿಸಿದ್ದ ‘ಮುದ್ದುಕೃಷ್ಣ -2025’ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ‘ಧರ್ಮಸ್ಥಳದ ವಠಾರದಲ್ಲಿ ಎಸ್‌ಐಟಿಯವರು ಅಗೆಯುತ್ತಿದ್ದಾರೆ. ಆರೋಪ ಆಧರಿಸಿ ಶವಗಳನ್ನು ಹುಡುಕುತ್ತಿದ್ದಾರೆ. ಅಲ್ಲಿ ಏನೂ ಸಿಗಲಿಲ್ಲ. ಎಷ್ಟು ಹುಡುಕಿದರೂ ಸಿಗುವುದಿಲ್ಲ. ಆದರೆ, ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ. ಆದರೂ ಮುಖ್ಯಮಂತ್ರಿ ಏಕೆ ಬಾಯಿ ಬಿಡುತ್ತಿಲ್ಲ. ಅವರು ಏನು ಮಾಡುತ್ತಿದ್ದಾರೆ’ […]

ಅಗಸ್ಟ್ 26ಕ್ಕೆ ‘ಉದಯಗಿರಿ’ ಹಾಗೂ ‘ಹಿಮಗಿರಿ’ ಯುದ್ಧನೌಕೆಗಳು ನೌಕಾಪಡಕ್ಕೆ ಸೇರ್ಪಡೆ.

ನವದೆಹಲಿ: ರಹಸ್ಯ ಕಾರ್ಯಾಚರಣೆ ಉದ್ದೇಶದ ‘ಉದಯಗಿರಿ’ ಹಾಗೂ ‘ಹಿಮಗಿರಿ’ ಯುದ್ಧನೌಕೆಗಳನ್ನು ವಿಶಾಖಪಟ್ಟಣದಲ್ಲಿ ಆಗಸ್ಟ್‌ 26ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ನೌಕಾಪಡೆಗೆ ಸೇರ್ಪಡೆ ಮಾಡಲಾಗುವುದು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.‘ಪ್ರಾಜೆಕ್ಟ್‌ 17ಎ’ ಭಾಗವಾಗಿ ಈ ನೌಕೆಗಳನ್ನು ನಿರ್ಮಿಸಲಾಗಿದೆ. ಈ ಯೋಜನೆ ಭಾಗವಾಗಿ ನಿರ್ಮಿಸಿರುವ ಮೊದಲ ಯುದ್ಧನೌಕೆ ‘ನೀಲಗಿರಿ’ಯನ್ನು ಜನವರಿಯಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಗೆ ಸೇರ್ಪಡೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಈ ಯುದ್ಧನೌಕೆಯನ್ನು ಮಜಗಾಂವ್‌ ಡಾಕ್‌ ಶಿಪ್‌ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್‌) ನಿರ್ಮಿಸಿದೆ. ಇದೇ ಶ್ರೇಣಿಯ […]

ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ಹಣ: ಬಸನಗೌಡ ಪಾಟೀಲ್ ಯತ್ನಾಳ್

ಕೊಪ್ಪಳ: ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ ಲಕ್ಷ ರೂ. ಕೊಡುವೆವು ಎನ್ನುವ ಅಭಿಯಾನ ಆರಂಭಿಸಲಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿದ್ದಾರೆ. ಕೊಪ್ಪಳದಲ್ಲಿ ಹತ್ಯೆಯಾದ ಗವಿಸಿದ್ದಪ್ಪ ನಾಯಕ್ ಅವರ ಮನೆಗೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರ ಜೊತೆ ಭೇಟಿ ನೀಡಿ ಯತ್ನಾಳ್‌ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿರುವುದು ಮುಸ್ಲಿಂ ಪರ ಸರ್ಕಾರವಾಗಿದೆ. ಸಿದ್ದರಾಮಯ್ಯ ಸರ್ಕಾರ ಅಹಿಂದ ಸರ್ಕಾರ ಎಂದೆನ್ನುತ್ತಿದೆ. ಆದರೆ ರಾಜ್ಯದಲ್ಲಿ […]

ಉಡುಪಿ:ಶ್ರೀ ಶ್ರೀ ರಮಾನಂದ ಗುರುಜಿಯವರಿಂದ ಷಷ್ಟಿ ಪೂರ್ತಿ ಸಮಾರಂಭ ಹಾಗೂ ಅಭಿನಂದನಾ ಮಹೋತ್ಸವ

ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿಗಳು ಖ್ಯಾತ ಆಧ್ಯಾತ್ಮಿಕ ಚಿಂತಕರು ಆದ ಶ್ರೀ ಶ್ರೀ ರಮಾನಂದ ಗುರೂಜಿ ಅವರ 60ನೇ ವರ್ಷದ ಹುಟ್ಟು ಹಬ್ಬ ಸಮಾರಂಭ ಕ್ಷೇತ್ರದಲ್ಲಿ ನೆರವೇರಿತು. ವೇದಮೂರ್ತಿ ವಿಖ್ಯಾತ ಭಟ್ ನೇತೃತ್ವದಲ್ಲಿ ನೆರವೇರಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂರ್ವಭಾವಿ ಕಾರ್ಯಕ್ರಮವಾಗಿ ಕ್ಷೇತ್ರದಲ್ಲಿ ಸಾಯಂಕಾಲ ಪೂರ್ಣಮಾನ ಸುದರ್ಶನ ಯಾಗ, ಕಲಶ ಪ್ರತಿಷ್ಠಾಪನ ವಿಧಿಗಳು, ಪ್ರಾತ: ಕಾಲದಲ್ಲಿ ತ್ರಿನಾಳಿಕೇರ ಗಣ ಯಾಗ, ಪೂರ್ಣಮಾನ ಧನ್ವಂತರಿಯಾಗ, ಮಾರ್ಕಂಡೇಯ ಹೋಮ, ನವಗ್ರಹ […]