MSDC ಓರೇನ್ ಇಂಟರ್ನ್ಯಾಷನಲ್: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೂದಲು, ಚರ್ಮ, ಉಗುರು ಮತ್ತು ಮೇಕಪ್ ಕೋರ್ಸ್‌ಗಳ ಮೇಲೆ ಶೇ.40 ವರೆಗೆ ರಿಯಾಯಿತಿ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್’ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಕೂದಲು, ಚರ್ಮ, ಉಗುರು ಮತ್ತು ಮೇಕಪ್ ಕೋರ್ಸ್‌ಗಳ ಮೇಲೆ ಶೇ.40 ವರೆಗೆ ರಿಯಾಯಿತಿ ಸಿಗಲಿದೆ.ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಆಸಕ್ತರು ಅಗಸ್ಟ್ 16ರ ಒಳಗೆ ಸಂಸ್ಥೆಯನ್ನು ಸಂಪರ್ಕಿಸಬೇಕಾಗಿ ಈ ಪ್ರಕಟಣೆ ತಿಳಿಸಿದೆ. ಸಂಪರ್ಕಿಸಿ: 8123165068ವಿಳಾಸ: ಓರೇನ್ ಇಂಟರ್ನ್ಯಾಷನಲ್ 3ನೇ ಮಹಡಿ, ಎಂಎಸ್‌ಡಿಸಿ ಕಟ್ಟಡ ಈಶ್ವರ್ ನಗರ ಮಣಿಪಾಲ.
ಮೂಡುಬಿದಿರೆ:ಒಡಿಯೂರು-ನಾಟಕ ಸ್ಪರ್ಧೆಯಲ್ಲಿ ಆಳ್ವಾಸ್‌ನ ಎರಡು ನಾಟಕಗಳಿಗೆ ಪ್ರಶಸ್ತಿ

ಮೂಡುಬಿದಿರೆ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ಒಡಿಯೂರು ಗ್ರಾಮೋತ್ಸವದ ಅಂಗವಾಗಿ, ಶ್ರೀಕ್ಷೇತ್ರದ ರಾಜಾಂಗಣದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎರಡು ನಾಟಕಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಯನ್ನು ಪಡೆದವು. ಡಾ| ಜೀವನ್ ರಾಂ ಸುಳ್ಯ ರಚಿಸಿ, ನಿರ್ದೇಶಿಸಿದ “ದೇವವೃದ್ಧರು” ನಾಟಕವು ಅತ್ಯುತ್ತಮ ನಾಟಕ ಪ್ರಶಸ್ತಿಯೊಂದಿಗೆ ರೂ.50,000 ನಗದು ಬಹುಮಾನ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದೇ ನಾಟಕಕ್ಕೆ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿಯನ್ನು ಆಳ್ವಾಸ್ ಪಿ.ಯು. ವಿದ್ಯಾರ್ಥಿ […]
ವ್ಯಕ್ತಿಯ ಜೊತೆ ಅನೈತಿಕ ಸಂಬಂಧ: ರಾಖಿ ಹಬ್ಬದ ದಿನವೇ ಸಹೋದರಿಯನ್ನು ಕೊಂದ ಅಣ್ಣ!

ಉತ್ತರಪ್ರದೇಶ: ಉತ್ತರಪ್ರದೇಶದ ಗರೌತ ಪ್ರದೇಶದಲ್ಲಿ 18 ವರ್ಷದ ತನ್ನ ಸಹೋದರಿ ಮತ್ತೊಬ್ಬ ವ್ಯಕ್ತಿಯ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಬೇಸತ್ತ ವ್ಯಕ್ತಿಯೊಬ್ಬ, ರಕ್ಷಾ ಬಂಧನ ಆಚರಿಸಿದ ನಂತರ ಆಕೆಯನ್ನು ಕೊಂದ ಘಟನೆ ಭಾನುವಾರ ನಡೆದಿದೆ. ಚಂದ್ರಾಪುರ ಗ್ರಾಮದ ನಿರ್ಜನ ಪ್ರದೇಶದ ದಾದಾ ಮಹಾರಾಜ್ ಪ್ಲಾಟ್‌ಫಾರ್ಮ್ ಬಳಿ ಕುಮಾರಿ ಸಹೋದರ್(18) ಅಲಿಯಾಸ್ ಪುಟ್ಟಿ ಅವರ ಶವ ಭಾನುವಾರ ಪತ್ತೆಯಾಗಿದೆ. ಈ ಕೊಲೆಗೆ ಸಂಬಂಧಿಸಿದಂತೆ ಪುಟ್ಟಿಯ ಸಹೋದರ ಅರವಿಂದ್ ಮತ್ತು ಅವರ ಸ್ನೇಹಿತ ಪ್ರಕಾಶ್ ಪ್ರಜಾಪತಿ ಅವರನ್ನು ಬಂಧಿಸಲಾಗಿದೆ […]
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಬೆಳಕು-ಆಪ್ತ ಸಮಾಲೋಚನಾ ಘಟಕ’ದ ನೂತನ ಕೇಂದ್ರ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಬೆಳಕು-ಆಪ್ತ ಸಮಾಲೋಚನಾ ಕೇಂದ್ರ’ವನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಉದ್ಘಾಟಿಸಲಾಯಿತು. ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಭೂಮಿಯಲ್ಲಿರುವ ಎಲ್ಲಾ ಜೀವಿಗಳ ಪೈಕಿ ಮನುಷ್ಯ ಅತ್ಯಂತ ವಿಶೇಷ. ತನ್ನ ಬುದ್ಧಿಶಕ್ತಿ, ಕಲ್ಪನೆ, ನೈತಿಕ ಮೌಲ್ಯಗಳು ಹಾಗೂ ಸಮಾಜವನ್ನು ರೂಪಿಸುವ ಸಾಮರ್ಥ್ಯವು ಮನುಷ್ಯನನ್ನು ಇತರ ಜೀವರಾಶಿಗಳಿಗಿಂತ ಭಿನ್ನಗೊಳಿಸಿದೆ. ಆದರೆ, ಈ ಅಸಾಧಾರಣ ಸಾಮರ್ಥ್ಯಗಳ ಜೊತೆಗೆ ಮನುಷ್ಯ ತನ್ನ ಭಾವನಾತ್ಮಕ ಅಸ್ಥಿರತೆಯ ಬಲೆಗೆ ಸುಲಭವಾಗಿ ಸಿಲುಕ […]
ಉಡುಪಿ ಸಿಟಿ ಸೆಂಟೆರ್ ನಲ್ಲಿ 79ನೇ ಸ್ವಾತಂತ್ರೋತ್ಸವ ಸಮಾರಂಭ

ಉಡುಪಿ: ಉಡುಪಿಯ ಸಿಟಿ ಸೆಂಟರ್ ಮಾಲ್ ಬಿಲ್ಡಿಂಗ್ ನಲ್ಲಿ ಆ. 15ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಸಿಟಿ ಸೆಂಟರ್ ಮಾಲ್ ನ ಮ್ಯಾನೇಜರ್ ರಾಧಾಕೃಷ್ಣ ಪ್ರಭು ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ನಗರಸಭೆ ಸದಸ್ಯ ಟಿ.ಜಿ. ಹೆಗ್ಡೆ, ಉದ್ಯಮಿ ಕೋಡಿ ಇಬ್ರಾಹಿಂ ಮೊಹಮ್ಮದ್, ಭಾರತ್ ಸೈಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಜಯಕರ್ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಹನೀಫ್, ನಿಶ್ಚಿಂತ್ ದಾಮೋದರ್, ಉಡುಪಿ ಜಾಮೀಯಾ […]