ಉಡುಪಿ: ಬೈಕ್ ಡಿಕ್ಕಿಯಾಗಿ ಪಾದಚಾರಿ ಮೃತ್ಯು; ಬೈಕ್ ಸವಾರರ ಸ್ಥಿತಿ ಗಂಭೀರ.

ಕಾಪು: ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ಬೈಕೊಂದು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟು, ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಆ.9ರ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಸಂಭವಿಸಿದೆ. ಮೃತಪಟ್ಟ ಪಾದಚಾರಿ ಶಂಕರ್ ಶೆಟ್ಟಿ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳಾದ ನತಾಷಾ ಮತ್ತು ದರ್ಶನ್ ರಾಜ್ ಎಂದು ಗುರುತಿಸಲಾಗಿದೆ.ಗಾಯಾಳುಗಳನ್ನು ಉಚ್ಚಿಲ ಹಾಗೂ ಮೂಳೂರಿನ ಎಸ್.ಡಿ.ಪಿ.ಐ ಆ್ಯಂಬುಲೆನ್ಸ್‌ ಸಹಾಯದಿಂದ ಜಲಾಲುದ್ದೀನ್ ಜಲ್ಲು, ಕೆ.ಎಂ. ಸಿರಾಜ್, ಹಮೀದ್ ಆ್ಯಂಬುಲೆನ್ಸ್, […]

ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು: ಹೂಡಿಕೆ ಜಾಗೃತಿ ಮತ್ತು ನಿರ್ವಹಣೆ ಮಾಹಿತಿ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಕ್ರೈಸ್ಟ್‍ಕಿಂಗ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹೂಡಿಕೆ ಜಾಗೃತಿ ಮತ್ತು ನಿರ್ವಹಣೆ ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೆಚ್‍ಡಿಎಫ್‍ಸಿ ಮ್ಯೂಚ್ವಲ್ ಫಂಡ್ಸ್‍ನ ಉಡುಪಿ ಶಾಖಾ ವ್ಯವಸ್ಥಾಪಕರಾದ ಪ್ರತಾಪ್ ನಾೈಕ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಮಾತನಾಡಿ “ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಬಹಳ ಅಗತ್ಯವಾಗಿದೆ. ಆದರೆ ಎಲ್ಲಿ ಹೇಗೆ, ಯಾವುದರಲ್ಲಿ ಮತ್ತು ಯಾವಾಗ ಹೂಡಿಕೆ ಮಾಡಬೇಕೆಂಬ ಪೂರ್ವಾಲೋಚನೆ ಅತೀ ಅಗತ್ಯವಾಗಿರಬೇಕು. ಹೂಡಿಕೆ ಮಾಡುವುದರ ಜೊತೆಗೆ ಅದರ ನಿರ್ವಹಣಾ ವಿಧಾನಗಳ ಬಗ್ಗೆ […]

ಭಾರತ ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ಯುವಜನತೆ ಕೌಶಲವಂತರಾಗಬೇಕು- ಅಜಯ್ ಪುರುಷೋತ್ತಮ ಶೆಟ್ಟಿ

ಉಡುಪಿ:ಗೋಲ್ಡ್ಮನ್ ಸ್ಯಾಕ್ಸ್ ಅಂದಾಜು ಪ್ರಕಾರ ಭಾರತ 2025 ರ ವೇಳೆಗೆ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಇದನ್ನು ಸಾಧಿಸಬೇಕಾದರೆ ಯುವಜನರು ಕೌಶಲವಂತರಾಗಬೇಕು ಎಂದು ಉದ್ಯಮಿ ಅಜಯ್ ಪುರುಷೋತ್ತಮ ಶೆಟ್ಟಿ ಹೇಳಿದರು. ನವದೆಹಲಿಯ ಭಾರತ ಮಂಟಪನಲ್ಲಿ ಯುವ ಈವೆಂಟ್ಸ್ ವತಿಯಿಂದ ನಡೆದ ಜಯಘೋಷ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮೈಕ್ರೋಸಾಫ್ಟ್ ಮುಂತಾದ ವಿದೇಶಿ ಕಂಪೆನಿಗಳು ಭಾರತದಲ್ಲಿ ಸೇವೆಯನ್ನು ಸ್ಥಗಿತಗೊಳಿಸಿದರೂ ಭಾರತಕ್ಕೆ ಯಾವುದೇ ಹಿನ್ನಡೆಯಾಗಬಾರದು. ಈ ಹಿನ್ನೆಲೆಯಲ್ಲಿ ಭಾರತವು ತನ್ನದೇ ಆದ ಓಎಸ್, ಚಿಪ್‌ಗಳು ಮತ್ತು ಎಐ ಸೃಷ್ಟಿಸಬೇಕೆಂದು ಕರೆ […]

ಕೊಲ್ಲೂರು: ಸೌಪರ್ಣಿಕಾ ನದಿಯಲ್ಲಿ ಯುವಕ ಮೃತಪಟ್ಟ ಪ್ರಕರಣ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಕೊಲ್ಲೂರು: ಸೌಪರ್ಣಿಕಾ ನದಿಯಲ್ಲಿ ಯುವಕನೋರ್ವ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ತನ್ನ ಬಗ್ಗೆ ಮಾಡುತ್ತಿರುವ ಅಪಪ್ರಚಾರದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಇಬ್ಬರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಕೊಲ್ಲೂರಿನ ನಟೇಶ್ (36) ಆತ್ಮಹತ್ಯೆ ಮಾಡಿಕೊಂಡವರು. ಇವರು ಆ.7ರಂದು ಸಂಪ್ರೆಯ ಸೌಪರ್ಣಿಕಾ ನದಿಯಲ್ಲಿ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನದಿಯ ದಡದಲ್ಲಿ ನಿಲ್ಲಿಸಿದ್ದ ನಟೇಶ್ ಅವರ ಕಾರನ್ನು ಮನೆಗೆ […]

ಉಡುಪಿಯ ಪ್ರಸಿದ್ಧ ಮೆರೈನ್ ಎಕ್ಸ್ ಪೋರ್ಟ್ ಮತ್ತು ಪಿವಿಸಿ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿಯ ಪ್ರಸಿದ್ಧಮರೈ ಎಕ್ಸ್ಪೋರ್ಟ್ ಮತ್ತು ಪಿ ವಿ ಸಿ ಟೈಪ್ ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ತಕ್ಷಣ ಬೇಕಾಗಿದ್ದಾರೆ. ಖಾಲಿ ಇರುವ ಹುದ್ದೆಗಳು: ▪ಪ್ರೊಡಕ್ಷನ್ ಸೂಪರ್ವೈಸರ್▪ಅಕೌಂಟೆಂಟ್▪B.A. ಟೆಕ್ನಿಷಿಯನ್ (ITI/Diploma)▪ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್▪ಎಲೆಕ್ಟ್ರಿಷಿಯನ್ (ITI)▪ಬಿಲ್ಲಿಂಗ್ Cum ಕ್ಯಾಶಿಯರ್ (Female) ಅತ್ಯುತ್ತಮ ವೇತನದೊಂದಿಗೆ PF, ESI ಸೌಲಭ್ಯವಿದೆ. ಆಸಕ್ತರು ಕೂಡಲೇ ಸಂಪರ್ಕಿಸಿ: 9606968198, 9071275778