ಉಡುಪಿ: ಅಭಿರಾಮಧಾಮದಲ್ಲಿ ಜಿಲ್ಲಾ ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ

ಉಡುಪಿ: ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುವ ಸಲುವಾಗಿ, ಭಾರತದ 78 ನೇ ಸ್ವಾತಂತ್ರೋತ್ಸವ ಸಂಭ್ರಮದ ಪ್ರಯುಕ್ತ ಉಡುಪಿಯ ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸಂಕೀರ್ತನ ಮಂದಿರದಲ್ಲಿ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯನ್ನು ಇದೇ ತಿಂಗಳ 13 ನೇ ತಾರೀಖಿನಂದು (ಬುಧವಾರ) ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಉಡುಪಿ ಜಿಲ್ಲೆಯ ಶಾಲಾ ಮಕ್ಕಳು ಕನ್ನಡ, ಹಿಂದಿ, ತುಳು ಭಾಷೆಗಳಲ್ಲಿ 3ರಿಂದ – 4 ನಿಮಿಷಗಳೊಳಗೆ ದೇಶಭಕ್ತಿ ಗೀತೆಯೊಂದನ್ನು ಪ್ರಸ್ತುತಪಡಿಸಬೇಕಾಗುತ್ತದೆ. ಶಾಲೆಯ 5-6-7 ನೇ ತರಗತಿಯ ಮಕ್ಕಳು ಕಿರಿಯರ ವಿಭಾಗದಲ್ಲೂ, 8 – 9- […]
ಎಲ್ ಪಿಜಿ ಸಬ್ಸಿಡಿ: ತೈಲ ಮಾರುಕಟ್ಟೆ ಕಂಪೆನಿಗಳಿಗೆ ಬೆಂಬಲವಾಗಿ 30ಸಾವಿರ ಕೋಟಿ ರೂ. ಘೋಷಣೆ.

ನವದೆಹಲಿ : ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಶುಕ್ರವಾರ, ತೈಲ ಮಾರುಕಟ್ಟೆ ಕಂಪನಿಗಳ ಚೇತರಿಕೆಗಾಗಿ ಬಜೆಟ್ ಬೆಂಬಲವಾಗಿ 30,000 ಕೋಟಿ ರೂ.ಗಳನ್ನ ನೀಡುವುದಾಗಿ ಘೋಷಿಸಿದರು. ತೈಲ ಮತ್ತು ಅನಿಲ ವಲಯದಲ್ಲಿನ ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶಗಳು ಮತ್ತು ಅನಿಶ್ಚಿತತೆಯನ್ನ ಗಮನದಲ್ಲಿಟ್ಟುಕೊಂಡು ಈ ಬೆಂಬಲವನ್ನ ನೀಡಲಾಗಿದೆ ಎಂದು ವೈಷ್ಣವ್ ಹೇಳಿದರು. 2025-26ನೇ ಹಣಕಾಸು ವರ್ಷಕ್ಕೆ ಪ್ರಧಾನ ಮಂತ್ರಿ ಉಜ್ವಲ ಫಲಾನುಭವಿಗಳಿಗೆ 12,060 ಕೋಟಿ ರೂ.ಗಳ ಬೆಂಬಲವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ, ಏಕೆಂದರೆ ಇದು ಸಿಲಿಂಡರ್’ಗೆ 300 ರೂ.ಗಳ […]
ಧರ್ಮಸ್ಥಳ ಪ್ರಕರಣ: ಮಾಧ್ಯಮ ನಿರ್ಬಂಧಕ್ಕೆ ಸುಪ್ರೀಂ ಕೋರ್ಟ್ ನಕಾರ; ಹೊಸದಾಗಿ ನಿರ್ಧರಿಸುವಂತೆ ಕರ್ನಾಟಕ ಕೋರ್ಟ್’ಗೆ ಸೂಚನೆ

ನವದೆಹಲಿ: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ವರದಿಗಳನ್ನು ನಿರ್ಬಂಧಿಸುವಂತೆ ಧರ್ಮಸ್ಥಳ ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮಾನಹಾನಿಕರ ವರದಿ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ದ್ವಿ ಪೀಠವು ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಮಧ್ಯಂತರ ತಡೆಯಾಜ್ಞೆ ಅರ್ಜಿಯನ್ನು ಮರುಪರಿಶೀಲಿಸುವಂತೆ ಕರ್ನಾಟಕ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ದೇವಾಲಯದ ಆಡಳಿತ ಮಂಡಳಿ […]
ಉಚಿತವಾಗಿ ಕಲೀರಿ ಪುಟ್ಟ ರಾಧಾ-ಕೃಷ್ಣ ಮೇಕ್ ಓವರ್: ಮಕ್ಕಳ ಫೋಷಕರಿಗಿದು ಅದ್ಬುತ ಅವಕಾಶ!

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿ.ಎಂ.ಎ. ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಬಾಲಕೃಷ್ಣ ಮತ್ತು ಬಾಲರಾಧ ಮೇಕ್ಓವರ್ ಸ್ಪೆಷಲ್ ಉಚಿತ ಕಾರ್ಯಾಗಾರ ಆಗಸ್ಟ್ 13ರಂದು ನಡೆಯಲಿದೆ. ಇದೊಂದು ಒಳ್ಳೆಯ ಅವಕಾಶವಾಗಿದ್ದು, ಬಾಲಕೃಷ್ಣ ಮತ್ತು ಬಾಲರಾಧ ಮೇಕ್ಓವರ್ ಸ್ಪೆಷಲ್’ಅನ್ನು ಉಚಿತವಾಗಿ ನೋಡಿ, ಕಲಿಯಬಹುದು. ಈ ವಿಶೇಷ ಕಾರ್ಯಗಾರ ತಮ್ಮ ಮಗುವಿಗೆ ಪುಟ್ಟ ಕೃಷ್ಣ ಅಥವಾ ರಾಧೆಯ ದೈವಿಕ ನೋಟವನ್ನು ನೀಡುವಲ್ಲಿ ಕಲಿಯಲು ಮತ್ತು ಭಾಗವಹಿಸಲು ಬಯಸುವ ಎಲ್ಲಾ ಪೋಷಕರು ಮತ್ತು ಮಕ್ಕಳಿಗೆ ಮುಕ್ತವಾಗಿದೆ. […]
ಉಡುಪಿ:ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪದಕ

ಉಡುಪಿ: ಮಹಿಳಾ ಕ್ರೀಡಾಪಟುಗಳನ್ನು ಉತ್ತೇಜಿಸುವ ಸಲುವಾಗಿ ಎಚ್.ಸಿ.ಎಲ್. ಫೌಂಡೇಶನ್ ನವರು ಚೆನ್ನೆöÊನಲ್ಲಿ ನಡೆಸಿದ ಏಳನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉಡುಪಿಯ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ, ಕಾಲೇಜು ವಿಭಾಗದ ಪೂರ್ಣಿಮಾ ಉದ್ದಜಿಗಿತ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದರೆ, ಪ್ರೌಢಶಾಲಾ ವಿಭಾಗದ ಒಂಭತ್ತನೆಯ ತರಗತಿಯ ಮಾನ್ಯ ಹರ್ಡಲ್ಸನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಪರವಾಗಿ ಸಂಭ್ರಮದ ಸ್ವಾಗತ ಕೋರಲಾಯಿತು. ಪ್ರಾಂಶುಪಾಲ ಜಗದೀಶ ಕುಮಾರ ಮತ್ತು ಮುಖ್ಯೋಪಾಧ್ಯಾಯಿನಿ ಇಂದಿರಾ ರವರು ಪದಕ […]