ಪರ್ಕಳ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ.

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ತಾಲೂಕು ವತಿಯಿಂದ ಪರ್ಕಳ ಪ್ರೌಡ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ” ಕಾರ್ಯಕ್ರಮವು ಶಾಲಾ ಮುಖ್ಯ ಉಪಾಧ್ಯಯರಾದ ಆನಂದ ನಾಯ್ಕ್ ರವರ ಅದ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಅರುಣಾಚಲ ಹೆಗ್ಡೆಯವರು ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿ ಏ ವಿ ಬಾಳಿಗ ಆಸ್ಪತ್ರೆಯ ಸಮುದಾಯ ಕಾರ್ಯ ನಿರ್ವಹಕರಾದ ಸುರೇಶ್ ಎಸ್ ನಾವುರು […]

ಹೆಜಮಾಡಿ: ಏಳೂರು ಮೊಗವೀರ ಮಹಾಸಭಾದಿಂದ ಸಮುದ್ರ ಪೂಜೆ

ಉಡುಪಿ: ಏಳೂರು ಮೊಗವೀರ ಮಹಾಸಭಾ ಆಯೋಜನೆಯಲ್ಲಿ ಕನ್ನಂಗಾರು ಮೊಗವೀರ ಸಭಾ ಸಹಕಾರದಲ್ಲಿ ಹೆಜಮಾಡಿಯ ಅಮಾಸೆಕರಿಯ ಸಮುದ್ರ ಕಿನಾರೆಯಲ್ಲಿ ಶನಿವಾರ ಬೆಳಿಗ್ಗೆ ಸಾಮೂಹಿಕ ಸಮುದ್ರ ಪೂಜೆ ನಡೆಸಿ ಸಮುದ್ರಕ್ಕೆ ಹಾಲೆರೆಯಲಾಯಿತು. ಹೆಜಮಾಡಿ ವೀರ ಮಾರುತಿ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿಂದ ಹಾಲು, ತೆಂಗಿನಕಾಯಿ ಹೂಗಳನ್ನು ಭಜನಾ ಮೆರವಣಿಗೆಯೊಂದಿಗೆ ಹೆಜಮಾಡಿ ಅಮಾಸೆಕರಿಯ ಸಮುದ್ರ ಕಿನಾರೆಗೆ ತರಲಾಯಿತು.ಸಮುದ್ರ ಕಿನಾರೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಮುದ್ರ ರಾಜನಿಗೆ ಹಾಲೆರೆಯಲಾಯಿತು. ಈ ಬಗ್ಗೆ ಏಳೂರು ಮೋಗವೀರ ಮಹಾಸಭಾದ ಅಧ್ಯಕ್ಷ ಎಸ್‌ […]

ಉಡುಪಿ ಕೃಷ್ಣಮಠದ ಸುತ್ತ ಪೌಳಿ ಲೋಕಾರ್ಪಣೆ: ಕೃಷ್ಣ ದೇವರ ಸಂದೇಶ ಜಗತ್ತಿಗೆ ಪಸರಿಸಿದ ಕೀರ್ತಿ ಪುತ್ತಿಗೆ ಶ್ರೀಗಳಿಗೆ ಸಲ್ಲುತ್ತದೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಬೆಳಗಿನ ಜಾವ ಅವರ ತಂದೆ ತಾಯಿಯೊಂದಿಗೆ ಆಗಮಿಸಿ ಶ್ರೀ ಕೃಷ್ಣನ ದರ್ಶನ ದರ್ಶನ ಪಡೆದರು. ನಂತರ ಪಾಕಶಾಲೆಗೆ ಭೇಟಿ ನೀಡಿ ಶ್ರೀ ಕೃಷ್ಣನ ಪ್ರಸಾದವನ್ನು ತಯಾರಿಕೆಗೆ ಚಾಲನೆ ನೀಡುವುದರೊಂದಿಗೆ ಸಾಮಾನ್ಯ ಗೃಹಿಣಿಯರಂತೇ ದೇವರ ನೈವೇದ್ಯದ ಪಾತ್ರೆ ತೊಳೆದು ಮಠದ ಗೋಶಾಲೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು.ನಂತರ ಕೃಷ್ಣ ಮಠದ ಸುತ್ತ ನಿರ್ಮಿಸಿರುವ ಕರಾವಳಿ ವಾಸ್ತುಶೈಲಿಯ ಸುತ್ತ ಪೌಳಿಯನ್ನು ಲೋಕಾರ್ಪಣೆಗೊಳಿಸಿದರು. ಅವರೊಂದಿಗೆ […]

ಕಾರಿನಲ್ಲಿ ಎಸಿ ಹಾಕಿ ಮಲಗೋ ಅಭ್ಯಾಸ ನಿಮಗಿದ್ಯಾ?: ಈ ಅಭ್ಯಾಸದಿಂದ ಜೀವಕ್ಕೇ ಆಪತ್ತು!

ತುಂಬಾ ಮಂದಿಗೆ ಕಾರಿನಲ್ಲಿ ಎಸಿ ಆನ್ ಮಾಡಿ ನಿದ್ರಿಸುವ ಅಭ್ಯಾಸ ಇದ್ದೇ ಇರುತ್ತದೆ. ಕೆಲವರಿಗೆ ಇದು ಆರಾಮದಾಯಕ ಫೀಲ್ ಕೂಡ ಕೊಡಬಹುದು. ಆದರೆ ಇತ್ತೀಚೆಗೆ ಕೆಲವೊಂದು ಅಧ್ಯಯನ ಮತ್ತು ಘಟನೆಗಳಿಂದ ಒಂದು ಸತ್ಯ ಹೊರಬಿದ್ದಿದೆ ಅದೇನು ಅಂದ್ರೆ, ಎಸಿ ಹಾಕಿ ಮಲಗೋದ್ರಿಂದ ಕೆಲವು ಅಪಾಯಗಳು ನಮ್ಮ ಜೀವಕ್ಕೆ ಸಂಭವಿಸುತ್ತದೆ ಎನ್ನುವ ಅಂಶ ಗೊತ್ತಾಗಿದೆ. ಹೌದು ಇತ್ತೀಚೆಗೆ, ನೋಯ್ಡಾದಲ್ಲಿ ಒಂದು ಘಟನೆ ನಡೆಯಿತು, ಕಾರು ಚಾಲಕ ಮತ್ತು ಅವನ ಸ್ನೇಹಿತ ಇಬ್ಬರೂ ಕ್ಯಾಬ್‌ನಲ್ಲಿ ನಿದ್ರಿಸಿದ್ದರು. ಆದರೆ, ಕಾರು ಚಾಲಕ […]

ಧರ್ಮಸ್ಥಳ ಕ್ಷೇತ್ರದ ಗೌರವ ಹಾಗೂ ಘನತೆಯನ್ನು ಕುಗ್ಗಿಸಲೆತ್ನಿಸುತ್ತಿರುವುದು ಅಕ್ಷಮ್ಯ ಅಪರಾಧ: ವಿಶ್ವ ಹಿಂದೂ ಪರಿಷದ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯವಿದ್ದು, ಅದು ಭಾರತದ ಪ್ರತಿಷ್ಠಿತ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪೈಕಿ ಒಂದಾಗಿದೆ. ಶ್ರೀ ಕ್ಷೇತ್ರಕ್ಕೆ ವರ್ಷಂಪ್ರತಿ ಜಗತ್ತಿನೆಲ್ಲೆಡೆಯಿಂದ ಕೋಟ್ಯಾಂತರ ಭಕ್ತರು ಆಗಮಿಸಿ ತಮ್ಮ ಆರಾಧ್ಯ ದೇವರ ದರ್ಶನವನ್ನು ಪಡೆಯುತ್ತಾರೆ. ಧಾರ್ಮಿಕ ಕಾರ್ಯಗಳೇ ಕಲಿಯುಗದ ಶ್ರೀರಕ್ಷೆ ಎಂಬ ದಿವ್ಯವಾಣಿಗೆ ಅನುಸಾರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳವು ಕಳೆದ ಹಲವು ದಶಕಗಳಿಂದ ಸಹಸ್ರಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ನೂರಾರು ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ದಾರಗೊಳಿಸುತ್ತಾ ಧರ್ಮ ದಾಸೋಹಕ್ಕೆ ಸಾಕ್ಷಿಯಾಗಿದೆ. ಇಷ್ಟು […]